ಹುರುಳಿಯು ಈ ಪೃಥ್ವಿಯ ಮೇಲೆ ದೊರೆತಿರುವ ಅತಿ ಹೆಚ್ಚು ಪ್ರೊಟಿನ್ ಯುಕ್ತ ದ್ವಿದಳ ಧಾನ್ಯವಾಗಿದೆ ಅದು ಬಹಳ ಹೆಚ್ಚು ಬಲಯುತವಾಗಿದೆ ಅದಕ್ಕಾಗಿಯೇ ಅದನ್ನು ರೇಸುಕುದುರೆಗಳಿಗೆ ತಿನ್ನಿಸುತ್ತಾರೆ. ದ್ವಿದಳ ಧಾನ್ಯಗಳಲ್ಲಿಯೇ ಅದು ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ ಹಾಗೂ ಅತಿ ಹೆಚ್ಚು ಸಸ್ಯಗಳ ಮೂಲದ ಪ್ರೊಟಿನ್ ಅನ್ನು ಹೊಂದಿದೆ ನಮ್ಮ ದೇಹಕ್ಕೆ ಪೌಷ್ಟಿಕಾಂಶ ಸಿಗುವ ಜೊತೆಗೆ ಹಲವಾರು ಖಾಯಿಲೆಗಳು ಬರುವುದನ್ನು ತಪ್ಪಿಸುತ್ತದೆ ದೇಹದಲ್ಲಿ ಉಷ್ಣ ಮತ್ತು ಶಕ್ತಿಯನ್ನು ಉತ್ಪಾಧಿಸುವ ಸಾಮರ್ಥ್ಯ ಹುರುಳಿಗಿದೆ ಆದ್ದರಿಂದ ಅದು ದೇಹವನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ ಸಕ್ಕರೆ ಖಾಯಿಲೆ ಇದ್ದವರಿಗೆ ರಾಮಬಾಣವಾಗಿದೆ ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ನಾವು ಈ ಲೇಖನದ ಮೂಲಕ ಹುರುಳಿ ಕಾಳಿನ ಬಗ್ಗೆ ತಿಳಿದುಕೊಳ್ಳೊಣ.
ಮಾತು ಬಲ್ಲವನಿಗೆ ಜಗಳವಿಲ್ಲ ಹಾಗೆಯೇ ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುತ್ತಾರೆ ನಾವು ಎಂತಹ ಆಹಾರ ತಿನ್ನಬೇಕು ಎಂದು ಗೊತ್ತಿದ್ದರೆ ನಮಗೆ ಖಾಯಿಲೆಗಳು ಬರುವುದು ಇಲ್ಲ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಅನೇಕ ಕಾಳುಗಳನ್ನು ಸೇವನೆ ಮಾಡುತ್ತೇವೆ ಅದರಲ್ಲಿ ಒಂದು ಅದ್ಭುತವಾದ ಕಾಳು ಇರುತ್ತದೆ ಈ ಕಾಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶ ಸಿಗುವ ಜೊತೆಗೆ ಹಲವಾರು ಖಾಯಿಲೆಗಳು ಬರುವುದನ್ನು ತಪ್ಪಿಸುತ್ತದೆ.
ಆ ಕಾಳು ಹುರುಳಿ ಕಾಳು ಆಗಿದೆ ಇದು ಅನೇಕ ಉಪಯೋಗವನ್ನು ಒಳಗೊಂಡಿದೆ ಹುರುಳಿ ಕಾಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ ಹಾಗೆಯೇ ಮಲವಿಸರ್ಜನೆ ತೊಂದರೆ ಇದ್ದವರಿಗೆ ಹುರುಳಿ ಕಾಳು ತುಂಬಾ ಉಪಕಾರಿಯಾಗಿದೆ ಹಾಗಾಗಿ ರಾತ್ರಿ ಹುರುಳಿ ಕಾಳನ್ನು ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಮಲವಿಸರ್ಜನೆ ಸಮಸ್ಯೆ ಕಡಿಮೆ ಆಗುತ್ತದೆ.
ಕಿಡ್ನಿಯಲ್ಲಿ ಕಲ್ಲುಗಳು ಆದರೆ ಹುರುಳಿ ಕಾಳು ಒಂದು ಉತ್ತಮ ಮನೆ ಮದ್ದಾಗಿದೆ ಅದಕ್ಕೆ ಮಲಗುವ ಮುಂಚೆ ಹುರುಳಿ ಕಾಳನ್ನು ನೆನೆಹಾಕಿ ಇಡಬೇಕು ಹಾಗೆಯೇ ಬೆಳಿಗ್ಗೆ ಎದ್ದು ಬೇಯಿಸಿಕೊಂಡು ತಿನ್ನಬೇಕು ಇದರಿಂದ ಕಿಡ್ನಿಯ ಕಲ್ಲುಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ ಯಾವ ಔಷಧ ದಿಂದ ಕಡಿಮೆ ಆಗದ ಕೆಮ್ಮು ಸಹ ಹುರುಳಿ ಕಾಳಿನ ಸೂಪ್ ಮಾಡಿ ಸೇವನೆ ಮಾಡುವುದರಿಂದ ಕಡಿಮೆ ಆಗುತ್ತದೆ ಹಾಗೆಯೇ ತೂಕ ಇಳಿಸಿಕೊಳ್ಳಲು ರಾತ್ರಿ ನೀರಿನಲ್ಲಿ ಹುರುಳಿ ಕಾಳನ್ನು ನೆನೆಹಾಕಿ ಬೆಳಿಗ್ಗೆ ಎದ್ದು ಚೆನ್ನಾಗಿ ಬೇಯಿಸಿಕೊಂಡುಅದಕ್ಕೆ ಉಪ್ಪು ಕರಿಮೆಣಸಿನ ಪುಡಿ ಹಾಗೂ ಜೀರಿಗೆ ಹಾಕಿಕೊಂಡು ಬೆಳಗ್ಗಿನ ಉಪಹಾರದಲ್ಲಿ ಸೇವನೆ ಮಾಡುವುದರಿಂದ ತೂಕ ಮತ್ತು ಬೊಜ್ಜು ಕಡಿಮೆ ಆಗುತ್ತದೆ.
ಹಾಗೆಯೇ ಸಕ್ಕರೆ ಖಾಯಿಲೆ ಇದ್ದವರಿಗೆ ರಾಮಬಾಣವಾಗಿದೆ ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಕೆಲವರ ದೇಹ ಉಷ್ಣ ಪ್ರಕೃತಿ ಇರುತ್ತದೆ ಅಂತವರು ಹುರುಳಿ ಕಾಳನ್ನು ತಿಂದಾಗ ಹೆಚ್ಚು ನೀರನ್ನು ಕುಡಿಯಬೇಕು ಹಾಗೆಯೇ ಮೊಸರು ಮಜ್ಜಿಗೆಯನ್ನು ಸೇವನೆ ಮಾಡಬೇಕು ಪಿತ್ತ ಎಸಿಡಿಟಿ ಗರ್ಭಿಣಿ ಯವರು ಕ್ಷಯ ರೋಗಿಗಳು ಇದನ್ನು ತಿನ್ನಬಾರದು ಹೀಗೆ ಅನೇಕ ಉಪಯೋಗವನ್ನು ಹೊಂದಿದೆ.