ಪುನೀತ್ ರಾಜ್ ಕುಮಾರ್ ಹುಟ್ಟಿದ್ದು ಮಾರ್ಚ್ 17,1975 ರಲ್ಲಿ, ಮದ್ರಾಸ್ ನ ಸಿಎಸ್ ಐ ಮಲ್ಟಿ ಸ್ಪೆಷಲಾಟಿ ಆಸ್ಪತ್ರೆಯಲ್ಲಿ ಜನಸಿದ್ರು.ಅಪ್ಪು ಹುಟ್ಟಿದಾಗ ಡಾ ರಾಜ್ ಕುಮಾರ್ ಮಯೂರ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು ಟೈಗರ್ ಪ್ರಭಾಕರ್ ಜತೆ ಕುಸ್ತಿ ದೃಶ್ಯವನ್ನು ಸೆರೆ ಹಿಡಿಯುವ ಸಮಯದಲ್ಲಿ ಅಪ್ಪು ಜನಿಸಿದ ಸುದ್ದಿ ಡಾ ರಾಜ್ ಗೆ ತಲುಪಿತ್ತಂತೆ. ಅಪ್ಪುವನ್ನು ಮೊದಲು ಎತ್ತಿಕೊಂಡಿದ್ದು ನಿರ್ದೇಶಕ ಭಗವಾನ್.

ಬಲಗೈ ಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋದನ್ನ ನಂಬಿದ್ದ ಪುನೀತ್ ಸೈಲೆಂಟ್ ಆಗಿನೇ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದರು . ತಾವು ಹಾಡಿದ ಹಾಡುಗಳಿಂದ ಬಂದ ಹಣವನ್ನು ಸಾಕಷ್ಟು ಅನಾಥಶ್ರಮ ಹಾಗೂ ವೃದ್ಧಶ್ರಮಗಳಿಗೆ ನೀಡುತ್ತಾ ಬಂದಿದ್ದಾರೆ ಅದಲ್ಲದೆ ತಾಯಿ ಪಾರ್ವತಮ್ಮ ಪ್ರತಿಷ್ಠಪಿಸಿದ ಶಕ್ತಿಧಾಮ ಸಂಸ್ಥೆಯ ಸಾಮಾಜಿಕ ಕೆಲಸದಲ್ಲೂ ತೊಡಗಿಸಿಕೊಂಡಿದ್ದರೂ.

ತಾಯಿ ಪಾರ್ವತಮ್ಮ ಹೆಸರಿನಲ್ಲಿ ಪಿ ಆರ್ ಕೆ ಪ್ರೋಡಕ್ಷನ್ ಸಂಸ್ಥೆಯನ್ನು ಸ್ಥಾಪಿಸಿದ್ದು ಹೊಸ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯಲ್ಲಿ ನಟಿಸುವ ಅವಕಾಶಗಳನ್ನು ನೀಡೋ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದ್ದರು.ಪುನೀತ್ ನಟನಾಗಿ ಅಷ್ಟೇ ಅಲ್ಲದೆ ನಿರೂಪಕನಾಗಿಯೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದರು. ಈ ರಾಜ ಸುಪುತ್ರ ನಿಗೆ ದೇಶದ ಎಲ್ಲಾ ಕಡೆಯಿಂದ ಶುಭಾಶಯದ ಮಹಾಪುರವೆ ಹರಿದು ಬಂದಿತ್ತು.

ಪುನೀತ್ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದರು, ಹುಟ್ಟಿದ ಹಬ್ಬದ ಪ್ರಯುಕ್ತ ಪುನೀತ್ ಮತ್ತು ಅವರ ಕುಟುಂಬ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.ಪತ್ನಿ ಅಶ್ವಿನಿ ಮತ್ತು ಕೆಲ ಕುಟುಂಬಸ್ಥರ ಜೊತೆಗೆ ಕೇಕ್ ಕತ್ತರಿಸಿ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!