ನಾವಿಂದು ರೈತರಿಗೆ ಕೃಷಿ ಚಟುವಟಿಕೆಗೆ ಉಪಯೋಗವಾಗುವಂತಹ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತವೆ. ಸಾಮಾನ್ಯವಾಗಿ ನಾವು ಬೆಳೆದಂತಹ ಗಿಡಮರಗಳು ತಮಗೆ ಬೇಕಾದಂತಹ ಪೋಷಕಾಂಶಗಳನ್ನು ಭೂಮಿಯಿಂದ ಪಡೆದುಕೊಳ್ಳುತ್ತವೆ. ಗಿಡ-ಮರಗಳಿಗೆ ಬೇಕಾದಂತಹ ಯೂರಿಯಾ ಗಾಳಿಯಲ್ಲಿದೆ. ಗಾಳಿಯಲ್ಲಿ ಎಪ್ಪತ್ತಾರು.ಆರು ಶೇಕಡ ಯೂರಿಯಾ ಇದೆ. ಅದನ್ನ ನೇರವಾಗಿ ಗಿಡ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಅದಕ್ಕೆ ಮೀಡಿಯೇಟರ್ ಅವಶ್ಯಕತೆ ಇರುತ್ತದೆ. ರೈಸೋಬಿನ್ ಒಂದು ಜೀವಾಣು ಅದು ದ್ವಿದಳ ಧಾನ್ಯದ ಬೇರಿನ ಗಂಟಿನಲ್ಲಿ ಇರುತ್ತದೆ ಅದು ಗಾಳಿಯಲ್ಲಿರುವ ಯೂರಿಯಾವನ್ನು ಎಳೆದುಕೊಂಡು ಮನೋ ಕಾಟ್ ಗೆ ಕೊಡುತ್ತದೆ.
ಹಾಗಾಗಿ ನಾವು ಮಿಶ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಗಿಡ-ಮರಗಳ ನಡುವೆ ಸಹಬಾಳ್ವೆ ಇರುತ್ತದೆ ಅವು ಒಂದಕ್ಕೊಂದು ಸಹಾಯ ಮಾಡುತ್ತವೆ. ಆದರೆ ಇಂದಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಯೂರಿಯಾ ಗೊಬ್ಬರವನ್ನು ದುಡ್ಡು ಕೊಟ್ಟು ತಂದು ಹಾಕುತ್ತಾರೆ. ಆ ರೀತಿ ಮಾಡುವುದರಿಂದ ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಕೃಷಿಕರು ಯೂರಿಯಾವನ್ನು ಹಾಕುತ್ತಿರಲಿಲ್ಲ ಅದರ ಬದಲಿಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂದಿನ ಕಾಲದಲ್ಲಿ ಯಾವುದಾದರೂ ಬೆಳೆಯನ್ನು ಬೆಳೆಯುವುದಿದ್ದರೆ ಅದಕ್ಕೆ ಒಂದು ಪ್ರಾಜೆಕ್ಟ್ ಅನ್ನು ತಯಾರಿಸುತ್ತಾರೆ. ಅದರ ಪ್ರಕಾರ ಮೊದಲಿಗೆ ಬ್ಯಾಂಕ್ ನಲ್ಲಿ ಸಾಲವನ್ನು ತೆಗೆದು ಬಾವಿ ಅಥವಾ ಬೋರ್ ವೆಲ್ ಗಳನ್ನು ತೆಗೆಯುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ.
ಅದೇ ಹಿಂದಿನ ಕಾಲದ ರೈತರು ಯಾರು ಸಾಲ ತೆಗೆದು ಈರೀತಿಯಾಗಿ ಮಾಡುತ್ತಿರಲಿಲ್ಲ. ಗಿಡಕ್ಕೆ ಬೇಕಾಗಿರುವುದು ನೀರಲ್ಲ ಅದಕ್ಕೆ ಬೇಕಾಗಿರುವುದು ಐವತ್ತು ಶೇಕಡ ತೇವಾಂಶ. ಕಾಡಿನಲ್ಲಿ ಬೆಳೆಯುವಂತಹ ಗಿಡ-ಮರಗಳಿಗೆ ಯಾರು ನೀರನ್ನು ಕೊಡುವುದಿಲ್ಲ ಅಲ್ಲಿ ಹ್ಯೂಮಸ್ ಸೃಷ್ಟಿ ಆಗುತ್ತದೆ. ಒಂದು ಕೇಜಿ ಹ್ಯೂಮಸ್ ಸೃಷ್ಟಿ ಆದರೆ ಆರು ಲೀಟರ್ ನೀರನ್ನು ವಾತಾವರಣದಿಂದ ಗಿಡಗಳು ಪಡೆದುಕೊಳ್ಳುತ್ತವೆ. ಇನ್ನೂ ಆಹಾರ ಯಾವ ರೀತಿ ತಯಾರಾಗುತ್ತದೆ ಎಂದರೆ ಪಂಚಮ ಭೂತಗಳಾದ ಸೂರ್ಯನ ಕಿರಣ ಗಾಳಿ ನೀರು ಆಕಾಶ ಭೂಮಿ ಇವುಗಳಿಂದ ಆಹಾರ ಉತ್ಪತ್ತಿ ಆಗುತ್ತದೆ. ಈ ಪಂಚ ಭೂತಗಳನ್ನು ತೆಗೆದುಕೊಂಡು ಹಸಿರೆಲೆಗಳು ಆಹಾರವನ್ನು ಉತ್ಪತ್ತಿ ಮಾಡುತ್ತವೆ.
ಒಂದು ದಿನಕ್ಕೆ ಏಳು ಸಾವಿರದಿಂದ ಹನ್ನೆರಡು ಸಾವಿರ ಸೂರ್ಯನ ಪ್ರಖರತೆ ಬಿಳುತ್ತಿರುತ್ತದೆ. ಅದರಲ್ಲಿ ಒಂದು ಚದರ ಅಡಿ ಹಸಿರೆಲೆ ಹನ್ನೆರಡು.ಐದು ಶೇಕಡಾವನ್ನು ತೆಗೆದುಕೊಂಡು ಜೊತೆಗೆ ಗಾಳಿ ಮತ್ತು ತೇವಾಂಶವನ್ನು ತೆಗೆದುಕೊಂಡು ನಾಲ್ಕು.ಐದು ಗ್ರಾಂ ಕಚ್ಚಾ ಗ್ಲೂಕೋಸ್ ಕಾರ್ಬೋ ಹೈಡ್ರೆಡ್ ಅನ್ನು ಉತ್ಪತ್ತಿ ಮಾಡುತ್ತದೆ ಇದು ದಿನ ನಿತ್ಯ ನಡೆಯುವಂತಹ ಕ್ರಿಯೆ. ಇದನ್ನು ಯಾರಿಂದಲೂ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನು ಗಿಡಗಳಿಗೆ ಬೇಕಾಗುವಂತಹ ರಂಜಕ ಮತ್ತು ಪೊಟ್ಯಾಷಿಯಂ ಕೂಡ ಭೂಮಿಯಲ್ಲಿದೆ ಅವುಗಳನ್ನು ಭೂಮಿಯಲ್ಲಿರುವ ಏರೆ ಹುಳು ಜಿವಜಂತುಗಳು ಗಿಡಗಳಿಗೆ ಒದಗಿಸುತ್ತವೆ. ಆದರೆ ಇಂದಿನ ದಿನದಲ್ಲಿ ರಾಸಾಯನಿಕ ಗೊಬ್ಬರ ಔಷದಗಳನ್ನು ಬಳಸಿದ ಕಾರಣ ಅವುಗಳು ಭೂಮಿಯ ಆಳಕ್ಕೆ ಹೋಗಿ ಆಳಕ್ಕೆ ಹೋಗಿರುವ ಎರೆಹುಳುಗಳು ಮೇಲಕ್ಕೆ ಬರಬೇಕು ಎಂದರೆ ನೀವು ಕೃಷಿ ಭೂಮಿಯಲ್ಲಿ ಸಾವಯವ ಗೊಬ್ಬರ ಸಗಣಿಗಳನ್ನು ಹಾಕಿದರೆ ಅವು ಮೇಲಕ್ಕೆ ಬರುತ್ತವೆ.
ನಾಟಿ ಹಸುವಿನ ಸಗಣಿಯಲ್ಲಿ ಮುನ್ನುರರಿಂದ ನಾಲ್ಕುನೂರಾ ಐವತ್ತು ಕೋಟಿ ಸೂಕ್ಷ್ಮಾಣು ಜೀವಿಗಳಿಗೆ. ಹತ್ತು ಕೇಜಿ ಸಗಣಿಯನ್ನು ಹಾಕಿ ಜೀವಾಮೃತವನ್ನು ಭೂಮಿಗೆ ಹಾಕುವುದರಿಂದ ಭೂಮಿಯಲ್ಲಿನ ಫಲವತ್ತತೆ ಹೆಚ್ಚುತ್ತದೆ. ಭೂಮಿಯಲ್ಲಿ ಫಲವತ್ತತೆ ಹೆಚ್ಚಿದಾಗ ಬೆಳೆ ಕೂಡ ಉತ್ತಮವಾಗಿ ಬರುತ್ತದೆ. ಈ ರೀತಿಯಾಗಿ ಹೆಚ್ಚು ಹಣವನ್ನು ವ್ಯಯ ಮಾಡದೆ ಉತ್ತಮ ರೀತಿಯಲ್ಲಿ ಭೂಮಿಯಲ್ಲಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಕೃಷಿಯಲ್ಲಿಯು ಅಭಿವೃದ್ದಿಯನ್ನು ಕಾಣಬಹುದಾಗಿದೆ. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗು ರೈತ ಮಿತ್ರರಿಗೂ ತಿಳಿಸಿರಿ. Video Credit For KrushiBelaku