ಹಲ್ಲಿ ಮೈ ಮೇಲೆ ಬಿದ್ರೆ ಅಪಶಕುನವೇ? ಗೊಂದಲ ಬೇಡ..

0 51

ಹಲ್ಲಿಗಳು ಸುಮಾರು ಎಲ್ಲರ ಮನೆಯಲ್ಲಿ ಇರುತ್ತದೆ.ಕೆಲವರ ಮನೆಯಲ್ಲಿ ಹೆಚ್ಚಾಗಿದ್ದರೆ ಕೆಲವರ ಮನೆಯಲ್ಲಿ ಕಡಿಮೆ ಇರುತ್ತದೆ. ಇವುಗಳೆಂದರೆ ಜನರ ಅಸಹ್ಯ ಪಡುತ್ತಾರೆ.ಆದರೆ ಇವುಗಳು ಸಣ್ಣಪುಟ್ಟ ಹುಳಗಳನ್ನು ತಿನ್ನುತ್ತವೆ.ಕೆಲವೊಮ್ಮೆ ನಮ್ಮ ದೇಹದ ಮೇಲೆ ಹಲ್ಲಿಗಳು ಬೀಳುತ್ತದೆ. ಆದ್ದರಿಂದ ನಾವು ಇಲ್ಲಿ ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಶುಭ ಮತ್ತು ಅಶುಭ ಎಂದು ತಿಳಿಯೋಣ.

ಹಲ್ಲಿಗಳು ಒಮ್ಮೊಮ್ಮೆ ಮೊಣಕಾಲಿನ ಮೇಲೆ ಬೀಳುತ್ತದೆ.ಆಗ ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ಶುಭವಾಗುತ್ತದೆ.ಇವುಗಳು ಮುಖದ ಮೇಲೆ ಬೀಳುವ ಸಾಧ್ಯತೆ ಇರುತ್ತದೆ.ಆಗ ಮೇಲಿನ ತುಟಿಯ ಮೇಲೆ ಬಿದ್ದರೆ ನಿಮ್ಮ ಇಷ್ಟ ಐಶ್ವರ್ಯಗಳು ಕರಗಿಹೋಗುತ್ತದೆ. ಹಾಗೆಯೇ ಎದೆಯ ಮೇಲೆ ಬಿದ್ದರೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ.ಹೊಟ್ಟೆಯ ಮೇಲೆ ಬಿದ್ದರೆ ಧಾನ್ಯಗಳ ಅಭಿವೃದ್ಧಿಯಾಗುತ್ತದೆ.ತಲೆಯ ಮೇಲೆ ಬಿದ್ದರೆ ಕೆಡುಕು ಸಂಭವ ವಾಗುವ ಸಾಧ್ಯತೆ ಇದೆ.ಎಡಗೈ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ತೃಪ್ತಿದಾಯಕವಾಗಿ ಇರುತ್ತದೆ.

ಎಡ ಕಾಲಿನ ಮೇಲೆ ಬಿದ್ದರೆ ನಿಮ್ಮ ಕಾರ್ಯ ಸಿದ್ಧಿಯಾಗುತ್ತದೆ. ಎಡ ಕಿವಿಯ ಮೇಲೆ ಬಿದ್ದರೆ ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ.ಹೊಕ್ಕುಳ ಮೇಲೆ ಬಿದ್ದರೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.ಕಣ್ಣುಗಳ ಮೇಲೆ ಬಿದ್ದರೆ ತೇಜಸ್ಸು ಹೆಚ್ಚಾಗುತ್ತದೆ.ಕುತ್ತಿಗೆಯ ಮೇಲೆ ಬಿದ್ದರೆ ವೈರಿಗಳು ತನ್ನಿಂತಾನೇ ನಾಶವಾಗುತ್ತಾರೆ.ಬಲಗಿವಿಯ ಮೇಲೆ ಬಿದ್ದರೆ ಆರೋಗ್ಯ ಮತ್ತು ಆಯಸ್ಸು ವೃದ್ಧಿಯಾಗುತ್ತದೆ.

ಕಣ್ಣಿನ ಹುಬ್ಬುಗಳು ಮೇಲೆ ಬಿದ್ದರೆ ಧನಾಗಮನ ವಾಗುತ್ತದೆ.ಬಲ ತೋಳಿನ ಮೇಲೆ ಬಿದ್ದರೆ ಚೋರ ಭಯ ಉಂಟಾಗುತ್ತದೆ.ಅಂದರೆ ಕಳ್ಳರು ಬಂದು ಅಪಹರಿಸುವ ಸಾಧ್ಯತೆ ಇರುತ್ತದೆ.ಕೆಲವು ಸಂಸ್ಕೃತಿಯಲ್ಲಿ ಹಲ್ಲಿ ಬಿದ್ದರೆ ಉತ್ತಮ ಎಂದು ಹೇಳಿದರೆ ಇದಕ್ಕೆ ಮತ್ತೆ ಕೆಲವು ಸಂಸ್ಕೃತಿಯಲ್ಲಿ ಇದನ್ನು ಕೆಟ್ಟದು ಎಂದು ಹೇಳುತ್ತಾರೆ.ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.

Leave A Reply

Your email address will not be published.