ನಿಮ್ಮ ಬೈಕ್ ಹೆಚ್ಚು ಮೈಲೇಜ್ ನೀಡಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್..

0 1

ಎಷ್ಟೋ ಜನರು ತಮ್ಮ ಬೈಕ್ ಮೈಲೇಜ್ ನೀಡುತ್ತಿಲ್ಲ ಎಂಬ ಆರೋಪ ಮಾಡುವುದುಂಟು. ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಮೈಲೇಜ್ ಹೆಚ್ಚಿಸಿಕೊಳ್ಳುವ ಅವಕಾಶಗಳಿವೆ. ದ್ವಿಚಕ್ರ ವಾಹನಗಳು ಕಂಪನಿಗಳು ತಿಳಿಸಿರುವ ಮೈಲೇಜ್​ ನೀಡದಿದ್ದರೆ ಜನರಿಗೆ ಅದರ ಬಳಕೆ ಕಷ್ಟಕರವೆಂದೆನಿಸುತ್ತದೆ. ಹಾಗಾಗಿ ಕೆಲವೊಂದು ಟ್ರಿಕ್ಸ್ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸದ್ಯದ ಪರಿಸ್ಥಿತಿಯಲ್ಲಿ ವಾಹನ ಪ್ರತಿಯೊಬ್ಬ ನಾಗರಿಕನ ಅವಶ್ಯಕತೆಯಾಗಿದ್ದು, ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದು ಬೈಕ್ ಇರಲೇಬೇಕು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಮನಸ್ಸಿಗೊಪ್ಪುವ ಬೈಕ್ ಆಯ್ಕೆ ಮಾಡಿಕೊಳ್ಳುವುದು ಒಂದು ಕಡೆಯಾದರೆ, ಆ ಬೈಕಿನ ಮೈಲೇಜ್ ನಿರ್ವಹಣೆ ಮಾಡುವುದೂ ಸಹ ದೊಡ್ಡ ಸವಾಲು ಎನ್ನಬಹುದು. ಆದರೆ ಪೆಟ್ರೋಲ್ ಬೆಲೆ ಸಹ ಗಗನ ಮುಟ್ಟುತ್ತಿದ್ದು, ಜನಸಾಮಾನ್ಯರ ಬಜೆಟ್ ಮೇಲೆ ಭಾರೀ ಪರಿಣಾಮ ಬೀರಿದೆ.  ಈ ಕಾರಣದಿಂದ ಪ್ರಸ್ತುತ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ಮತ್ತೊಂದೆಡೆ ಪೆಟ್ರೋಲ್​​ ಬೆಲೆ ಇಳಿಕೆಯಾಗಬಹುದು ಎಂಬ ಉದ್ದೇಶವನ್ನಿಟ್ಟುಕೊಂಡು ಪೆಟ್ರೋಲ್ ಚಾಲಿತ ಬೈಕ್‌ಗಳನ್ನೇ ಓಡಿಸುವವರು ಇದ್ದಾರೆ. ಆದರೆ ಇಂಧನಗಳ ಬೆಲೆ ಏರಿಕೆ ನಡುವೆ ತಮ್ಮ ವಾಹನ ಸರಿಯಾಗಿ ಮೈಲೇಜ ನೀಡದಿದ್ದರೆ ಹೇಗೆ? ಇಂತಹ ಸಮಸ್ಯೆಯನ್ನು ಅನೇಕರು ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕಂಪನಿ ತಿಳಿಯಪಡಿಸಿರುವ ಮೈಲೇಜ್​ ನೀಡದಿದ್ದರೆ ಜನರಿಗೆ ಅದರ ಬಳಕೆ ಕಷ್ಟಕರವೆಂದೆನಿಸುತ್ತದೆ. ಹಾಗಾಗಿ ಕೆಲವೊಂದು ಉಉಪಾಯಗಳ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಂಡಿದ್ದೇವೆ. ಒಂದು ವೇಳೆ ಬೈಕ್​ ಮೈಲೇಜ್​ ನೀಡದಿದ್ದರೆ ಈ ರೀತಿಯ ಟ್ರಿಕ್ಸ್ ಅನುಸರಿಸಿ ನೋಡಿ.

ಮಧ್ಯಮ ಕುಟುಂಬದ ಜನರು ತಮ್ಮ ಬೈಕನ್ನು ಆಚೆ ತೆಗೆದರೆ ಸಾಕು, ಮನಸ್ಸಿನಲ್ಲಿ ಪೆಟ್ರೋಲ್ ಬಗ್ಗೆ ಚಿಂತೆ ಕಾಡದೆ ಇರದು. ಹಾಗಾದ್ರೆ, ಈ ಬೈಕಿನ ಮೈಲೇಜ್ ಹೆಚ್ಚಿಸಲು ಏನೆಲ್ಲಾ ಯೋಜನೆ ಹಾಕಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ. ಹೊಸದಾಗಿ ಬೈಕ್ ಖರೀದಿ ಮಾಡಿದ ನಂತರ ಸಾಕಷ್ಟು ಮುಂಜಾಗ್ರತೆ ವಹಿಸಲೇ ಬೇಕು. ಮೊದಲ ಐನೂರು ಕಿಲೋಮೀಟರ್ ಹೇಗೆ ಚಾಲನೆ ಮಾಡುತ್ತೀರಿ? ಎನ್ನುವುದರ ಆದಾರದ ಮೇಲೆ ಬೈಕಿನ ಮೈಲೇಜ್ ನಿರ್ದಾರವಾಗುತ್ತದೆ. ಮೊದಲ ಐನೂರು ಕಿಲೋಮೀಟರ್ ಚಾಲನೆ ಮಾಡುವಾಗ ಆದಷ್ಟು 40 ಕಿ.ಮೀ ಇಂದ 60 ಕಿ.ಮೀ ಅಂತರದಲ್ಲಿ ಚಲಿಸಿದರೆ ಒಳ್ಳಯದು.

ಎಂತಹ ಪರಿಸ್ಥಿತಿಯಲ್ಲಿಯೂ ಗಂಟೆಗೆ 60 ಕಿ.ಮೀ ವೇಗವನ್ನು ಹೆಚ್ಚಿಸದೇ ಡ್ರೈವ್ ಮಾಡಬೇಕು. ಬೈಕ್ ಕಂಪನಿ ನೀಡುವ ಉಚಿತ ಸೇವೆಗಳು ಮುಗಿದ ನಂತರ, ಪ್ರತಿ 2500 ಕಿ.ಮೀ ಚಾಲನೆಗೆ ತಪ್ಪದೆ ಸರ್ವಿಸ್ ಮಾಡಿಸಬೇಕು. ಇಲ್ಲದೆ ಹೋದರೆ ಎಂಜಿನ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಲಿದೆ ಹಾಗು ಒಂದೇ ತರದ ಇಂಜಿನ್ ಆಯಿಲ್ ಬ್ರಾಂಡನ್ನು ಉಪಯೋಗಿಸುವುದು ಒಳ್ಳೆಯದು. ಬೈಕನ್ನು ಸರ್ವಿಸ್ ಮಾಡುವುದರಿಂದ ಅದರ ಮೈಲೇಜಿಗೆ ದೊಡ್ಡ ವ್ಯತ್ಯಾಸವಾಗುತ್ತದೆ. ನಿಮ್ಮ ಬೈಕ್ ಅನ್ನು ಸುಸ್ಥಿತಿಯಲ್ಲಿಟ್ಟರೆ ಅದು ಉತ್ತಮ ಮೈಲೇಜ್ ಕೂಡ ನೀಡುತ್ತದೆ. ಇಂಜಿನ್ ಮತ್ತು ಗೇರ್‌ಬಾಕ್ಸ್‌ಗೆ ಲೂಬ್ರಿಕೇಶನ್ ಅಗತ್ಯವಿದೆ ಮತ್ತು ಸರ್ವಿಸ್ ಮಾಡುವ ಮೂಲಕ ಮೊದಲಿನಂತೆಯೇ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ.

ಬಹುತೇಕರು ಟೈರ್​ ಬಗ್ಗೆ ಗಮನಹರಿಸುವುದಿಲ್ಲ. ಹೆಚ್ಚಾಗುತ್ತದೆ.ಆದಷ್ಟು ನಿಮ್ಮ ಟೈಯರ್‌ಗಳಲ್ಲಿ ಸಾಕಷ್ಟು ಗಾಳಿ ಇದೆಯೇ ? ಎಂದು ಪರೀಕ್ಷಿಸಿಕೊಳ್ಳಿ. ಟೈರ್ ಒತ್ತಡವು ಬೈಕಿನ ಮೈಲೇಜ್ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಟೈರ್ ಒತ್ತಡವನ್ನು ಸರಿಯಾಗಿ ನಿರ್ವಹಿಸಿದರೆ, ಬೈಕು ಚಲಾಯಿಸಲು ಸಾಧ್ಯವಾಗುತ್ತದೆ ಜತೆಗೆ ಬೈಕಿನ ಮೈಲೇಜ್ ಖಂಡಿತವಾಗಿಯೂ ಟೈರಿನಲ್ಲಿ ಇರುವ ಗಾಳಿಯ ಮೇಲೆ ಕೂಡ ಮೈಲೇಜ್ ಆಧಾರವಾಗಿರುತ್ತದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ಗಾಳಿ ಚೆಕ್ ಮಾಡಿಸಿಕೊಳ್ಳಬೇಕು. ಬೈಕಿಗೆ ಬಳಸುವ ಪೆಟ್ರೋಲ್ ಕೂಡ ಒಂದೇ ರೀತಿಯಲ್ಲಿ ಇದ್ದರೆ ಒಳ್ಳೆಯದು ಹಾಗು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ನಿಲ್ಲುವ ಪರಿಸ್ಥಿತಿ ಬಂದರೆ ಗಡಿ ಎಂಜಿನ್ ನಿಲ್ಲಿಸುವುದು ಒಳಿತು. ಹಾಗೆಯೇ ಸಿಗ್ನಲ್ ನಲ್ಲಿ ಬೈಕ್ ರನ್ನಿಂಗ್​ನಲ್ಲಿ ಇರಿಸಬೇಡಿ.

ಈ ಸಮಯದಲ್ಲಿ ಆಫ್ ಮಾಡಿದರೆ ಪೆಟ್ರೋಲ್ ಉಳಿತಾಯವಾಗುತ್ತದೆ. ಹಾಗಾಗಿ 15 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಟ್ರಾಫಿಕ್​ ಇದ್ದರೆ ನಿಮ್ಮ ಬೈಕ್ ಅನ್ನು ಆಫ್ ಮಾಡಿ, ಒಂದು ತಿಂಗಳೊಳಗೆ ಮೈಲೇಜ್ ಹೆಚ್ಚಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ. ಅಗತ್ಯವಿದ್ದಾಗ ಮಾತ್ರ ಕ್ಲಚ್ ಅನ್ನು ಸರಿಯಾಗಿ ಬಳಸುವುದರಿಂದ ಬೈಕ್ ಉತ್ತಮ ಮೈಲೇಜ್ ನೀಡುತ್ತದೆ. ಅನಗತ್ಯವಾಗಿ ಮತ್ತೆ ಮತ್ತೆ ಕ್ಲಚ್ ಒತ್ತಿದರೆ ಸಹಜವಾಗಿಯೇ ಬೈಕ್ ಮೈಲೇಜ್ ಕಡಿಮೆಯಾಗುತ್ತದೆ. ಆದ್ದರಿಂದ ಉತ್ತಮ ಮೈಲೇಜ್ ಪಡೆಯಬೇಕಾದರೆ, ಕ್ಲಚ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸುವುದು ಮುಖ್ಯ. ಮೊದಲ ಸರ್ವೀಸಿಂಗ್ ನಂತರ ಕೂಡ 45ರಿಂದ 60ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಹೋಗಬಾರದು. ಅದಕ್ಕಿಂತ ಹೆಚ್ಚಾಗಿ ಹೋದರೆ ಮೈಲೇಜ್ ಪೂರ್ತಿಯಾಗಿ ಬಿದ್ದು ಹೋಗುತ್ತದೆ. ಇದನ್ನು ಕಡ್ಡಾಯವಾಗಿ ಪಾಲಿಸಿ.

Leave A Reply

Your email address will not be published.