ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬೆನ್ನು ನೋವು ಏಕೆ ಕಾಣಿಸುತ್ತದೆ ಹಾಗೂ ಅದು ಬರದಂತೆ ಮಾಡುವುದಕ್ಕೆ ಏನು ಮಾಡಬೇಕು ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಸಾಮಾನ್ಯವಾಗಿ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಎಲುಬಿನಲ್ಲಿ ಏನೋ ತೊಂದರೆ ಆಗಿದೆ ಎಂದುಕೊಂಡು ಎಲುಬಿನ ವೈದ್ಯರನ್ನು ಸಂಪರ್ಕಿಸುತ್ತಾರೆ ಅವರು ಎಕ್ಸರೇ ತೆಗೆಸುತ್ತಾರೆ. ಎಲ್ಲರ ಎಕ್ಸರೇಯಲ್ಲಿಯೂ ಕೂಡ ಸ್ವಲ್ಪ ಬದಲಾವಣೆ ಇದ್ದೇ ಇರುತ್ತದೆ ಒಂದೇ ರೀತಿಯಾಗಿರುವುದಿಲ್ಲ. ಎಕ್ಸರೇ ತೆಗೆಸಿ ಆದ ನಂತರ ಅವರು ನಿಮಗೆ ನೋವಿನ ಮಾತ್ರೆಯನ್ನು ಕೊಡುತ್ತಾರೆ. ನೋವಿನ ಮಾತ್ರೆಯನ್ನು ತೆಗೆದುಕೊಂಡ ನಂತರ ನೋವಿರುವುದು ನಿಮಗೆ ತಿಳಿಯುವುದಿಲ್ಲ ಕಾಯಿಲೆಯು ಸುಧಾರಣೆಯಾಗುವುದು ಇಲ್ಲ.

ನೀವು ಯಾವುದೇ ನೋವಿನ ಮಾತ್ರೆಯನ್ನು ತೆಗೆದುಕೊಂಡರೂ ಅದು ದೇಹದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಆ ಮಾತ್ರೆಗಳಿಂದ ಕಾಯಿಲೆ ಗುಣವಾಗುವುದಿಲ್ಲ. ಇನ್ನು ಕೆಲವು ವೈದ್ಯರು ಆಪರೇಷನ್ ಮಾಡುವ ಎಂದು ಹೇಳುತ್ತಾರೆ ಅದರ ಕುರಿತು ಎಚ್ಚರಿಕೆಯನ್ನು ವಹಿಸಬೇಕು ಕೆಲವೊಮ್ಮೆ ಆಪರೇಷನ್ ಮಾಡುವುದರಿಂದಲೂ ಕೆಲವೊಂದು ತೊಂದರೆಗಳಾಗುವ ಉಂಟಾಗುವ ಸಾಧ್ಯತೆ ಇರುತ್ತದೆ. ಬೆನ್ನುನೋವು ಕಾಣಿಸಿಕೊಂಡಾಗ ಬೆನ್ನಿನ ಆಪರೇಷನ್ನು ಮಾಡಿಸಿಕೊಳ್ಳುವುದು ತುಂಬಾ ಯೋಚಿಸಬೇಕಾದ ವಿಷಯ ವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆನ್ನುನೋವು ಕಾಣಿಸಿಕೊಂಡಾಗ ಅದಕ್ಕೆ ಚಿಕಿತ್ಸೆಯಾಗಿ ಸೈಕೋಥೆರಪಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಬೆನ್ನುನೋವು ಕಾಣಿಸಿಕೊಳ್ಳುವ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ.

ಜನರ ಕೆಲಸ ಒತ್ತಡ ಹೆಚ್ಚಾದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸಮಾಜ ಮುಂದುವರೆದ ಹಾಗೆ ಮನುಷ್ಯನು ಕೂಡ ಅದರೊಟ್ಟಿಗೆ ವೇಗವಾಗಿ ತನ್ನ ಜೀವನವನ್ನು ಬದಲಾಯಿಸಿಕೊಳ್ಳುತ್ತಾನೆ. ಮನುಷ್ಯನಿಗೆ ಚಿಂತೆ ಹೆಚ್ಚಾದಂತೆ ಬೆನ್ನಿನಲ್ಲಿ ಇರುವಂತಹ ಎಲುಬುಗಳು ಬಿಗಿಯಾಗುತ್ತವೆ. ಆಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಜನರು ಕುಳಿತುಕೊಳ್ಳುವಾಗ ಕೂಡಾ ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳುವುದಿಲ್ಲ ಆಗ ಬೆನ್ನುನೋವು ಕಾಣಿಸಿಕೊಳ್ಳುತ್ತದೆ.

ಬೆನ್ನು ನೇರವಾಗಿ ಇರುವಂತೆ ಕುಳಿತುಕೊಂಡರೆ ಅದು ಒಳ್ಳೆಯದು. ಮನೆಯಲ್ಲಿರುವ ಅಡುಗೆ ಮಾಡುವವರಿಂದ ಹಿಡಿದು ಆಫೀಸಿಗೆ ಹೋಗಿ ಕೆಲಸ ಮಾಡುವವರಿಗು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಅದಕ್ಕೆ ಮುಖ್ಯ ಕಾರಣ ಅವರು ಉದ್ವೇಗಕ್ಕೆ ಒಳಗಾಗುವುದು. ಆಧುನಿಕತೆಗೆ ಒಳಗಾಗಿ ಬಿಡುವಿಲ್ಲದ ಕೆಲಸ ಉದ್ವೇಗ ಇವುಗಳು ಬೆನ್ನು ನೋವು ಕುತ್ತಿಗೆ ನೋವನ್ನ ಉಂಟುಮಾಡುತ್ತವೆ. ಇದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು.

ಮಹಿಳೆಯರಿಗೆ ಹೆರಿಗೆ ಆದ ನಂತರ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಅದಕ್ಕೆ ಕಾರಣ ಅವರು ಹೆರಿಗೆಯಾದ ನಂತರ ವ್ಯಾಯಾಮಗಳನ್ನು ಸರಿಯಾಗಿ ಮಾಡದಿರುವುದು. ಮೊದಲಿನ ಕಾಲದಲ್ಲಿ ಹೆಂಗಸರು ವ್ಯಾಯಾಮದ ರೀತಿಯ ಕೆಲಸಗಳನ್ನು ಹೆಚ್ಚಾಗಿ ಮಾಡುತ್ತಿದ್ದರೆ ನಿರೆತ್ತುವುದುಮಾಡುವುದು ಬಟ್ಟೆ ತೊಳೆಯುವುದು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದರು ಇದರಿಂದ ಬೆನ್ನಿಗೆ ಒಳ್ಳೆಯ ವ್ಯಾಯಾಮ ಸಿಗುತ್ತಿತ್ತು ಜೊತೆಗೆ ಅವರು ಬಿಸಿಲಿನಲ್ಲಿಯೂ ಕೂಡ ಓಡಾಟ ಮಾಡುತ್ತಿದ್ದರು

ಹಾಗಾಗಿ ಅವರಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಪ್ರಮಾಣ ಕಡಿಮೆ ಇತ್ತು. ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಬದಲು ಪ್ರತಿದಿನ ವ್ಯಾಯಾಮ ಮಾಡುವುದು ಒಳ್ಳೆಯದು ಜೊತೆಗೆ ಬೆಳಿಗ್ಗೆ ಎದ್ದು ಒಳ್ಳೆಯ ಜಾಗದಲ್ಲಿ ಬರಿಗಾಲಿನಲ್ಲಿ ಓಡಾಡುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದಿನ ಹೊರೆ ಹೆಚ್ಚಾಗಿದ್ದು ಪುಸ್ತಕಗಳ ಭಾರ ಹೊತ್ತುಕೊಂಡು ಹೋಗುವುದರಿಂದ ಬೆನ್ನು ಬಗ್ಗಿಸಿ ಕುಳಿತುಕೊಂಡು ಬರೆಯುವುದರಿಂದ ಅವರಲ್ಲಿಯೂ ಕೂಡ ಚಿಕ್ಕ ವಯಸ್ಸಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಮಗುವಿನ ಮಸ್ತಕದಲ್ಲಿ ಬುದ್ದಿ ತುಂಬಿಸಬೇಕೆ ಹೊರತು ಪುಸ್ತಕಗಳ ಭಾರ ಹೆಚ್ಚಾಗಬಾರದು. ಮಕ್ಕಳು ಓದುವುದಕ್ಕೆ ಕುಳಿತುಕೊಳ್ಳುವಾಗಲೂ ಸಹ ನೇರವಾಗಿ ಕುಳಿತುಕೊಂಡು ಓದು ಬರೆಯುವುದು ತುಂಬಾ ಒಳ್ಳೆಯದು.

ಬೆನ್ನು ನೋವು ಬರದಂತೆ ನೋಡಿಕೊಳ್ಳುವುದಕ್ಕೆ ಮನಸ್ಸನ್ನು ವಿಶ್ರಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಉದ್ವೇಗಕ್ಕೆ ಒಳಗಾಗಬಾರದು ಪ್ರತಿದಿನ ವ್ಯಾಯಾಮ ವಾಕಿಂಗ್ ಮಾಡಬೇಕು. ಇದರಿಂದ ಬೆನ್ನು ನೋವಿನಿಂದ ದೂರವಿರಬಹುದು ಅದರ ಬದಲಾಗಿ ನೋವಿನ ಮಾತ್ರೆ ಗಳನ್ನು ತೆಗೆದುಕೊಂಡು ಜೀವನವನ್ನು ಕಷ್ಟಕ್ಕೆ ದುಡಿಕೊಳ್ಳಬಾರದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *