ಭಾರತದಲ್ಲಿ ಸುಮಾರು 137 ಕ್ಕೂ ಅಧಿಕ ವಿವಿಧ ತಳಿಯ ಹಲಸಿನ ಹಣ್ಣುಗಳ ಮರಗಳಿದ್ದು, ಈ ಎಲ್ಲಾ ಹಣ್ಣುಗಳ ಪೈಕಿ ಸಿದ್ದು ತಳಿಯ ಹಣ್ಣುಗಳನ್ನು ಶ್ರೇಷ್ಠ ಹಾಗೂ ವಿಶಿಷ್ಠ ಎಂದು ಪರಿಗಣಿಸಲಾಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಸಿದ್ದು ತಳಿಯ ಹಲಸಿನ ಮರವೊಂದಕ್ಕೆ ಬೇಲಿ ಭದ್ರತೆ ಮಾತ್ರವಲ್ಲ ಸಿಸಿಟಿವಿ ರಕ್ಷಣೆಯನ್ನೂ ಒದಗಿಸಲಾಗಿದೆ. ಕೆಂಪಾದ ಸಿಹಿ ಹಣ್ಣಿನ ಈ ಹಲಸಿನ ಮರವು ರೈತ ಎಸ್‌. ಎಸ್‌. ಪರಮೇಶ ಅವರಿಗೆ ವಾರ್ಷಿಕ 15ರಿಂದ 20 ಲಕ್ಷ ರೂ. ಆದಾಯ ನೀಡುತ್ತಿದೆ ಎಂದು ಮೈಸೂರು ವಿಭಾಗೀಯ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್‌ ಎನ್‌. ತಿಳಿಸಿದ್ದಾರೆ. ಈ ಒಂದೇ ಒಂದು ಹಲಸಿನ ಮರದಿಂದ ವರ್ಷಕ್ಕೆ ಲಕ್ಷ ಸಂಪಾದನೆ ಮಾಡುತ್ತಿರುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರೈತರು ಒಂದು ಒಳ್ಳೆಯ ತಂತ್ರಜ್ಞಾನ ಉಪಯೋಗಿಸಿಕೊಂಡು ಕೃಷಿ ಮಾಡಿದರೆ ಅವರು ಮುಂದೆ ಯಾರು ಕೂಡ ಸರಿಸಾಟಿಯಿಲ್ಲ. ಸಾಮಾನ್ಯವಾಗಿ ಒಂದು ಹಲಸಿನ ಮರದಲ್ಲಿ ಎಷ್ಟು ಅದಾಯ ಮಾಡಬಹುದು ಎಂಬುದು ನಿಮಗೆಲ್ಲಾ ಸಾಮಾನ್ಯವಾಗಿ ಗೊತ್ತೆ ಇರುತ್ತದೆ. ಆದರೆ ಇಲ್ಲೊಬ್ಬ ರೈತ  ಒಂದೇ ಒಂದು ಹಲಸಿನ ಮರದಲ್ಲಿ ಸುಮಾರು 10 ಲಕ್ಷಕ್ಕು ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ. ನಿಮಗೆ ಅನುಮಾನ ಬರಬಹುದು ಒಂದು ಹಲಸಿನ ಮರದಿಂದ ಇಷ್ಟೊಂದು ಸಂಪಾದನೆ ಹೇಗೆ? ಎಂದು. ಆದರೆ ನಿಜಕ್ಕೂ ಈ ಒಂದು ಮರದಿಂದ ಹತ್ತು ಲಕ್ಷ ಸಂಪಾದನೆ ಮಾಡುತ್ತಿರುವ ರೈತನನ್ನು ನೋಡಿ ಎಲ್ಲರು ಕೂಡ ಆಶ್ಚರ್ಯ ಪಡುತ್ತಿದ್ದಾರೆ.

ಅಷ್ಟಕ್ಕೂ ಈ ಹಲಸಿನ ತಳಿಯ ಹೆಸರು ಸಿದ್ದೂ ಹಲಸಿನ ಹಣ್ಣು. ಸುಮಾರು 36 ವರ್ಷದಿಂದ ಇರುವ ಈ ಮರ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಎಂಬ ಹಳ್ಳಿಯಲ್ಲಿ. ಈ ಹಲಸಿನ ಮರದ ಮಾಲೀಕ ಎಸ್ ಪರಮೇಶ್ವರ್ ಅವರು‌.. ತನ್ನ ತಂದೆಯ ನೆನಪಿಗಾಗಿ ಈ ಮರವನ್ನು ನೆಟ್ಟಿದ್ದು ಆ ಮರಕ್ಕೆ ಸಿದ್ದು ಎಂಬುವ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ. ಹಾಗಾಗಿ ಈ ತಳಿಯನ್ನು ಸಿದ್ದು ಎಂದೇ ಕರೆಯಲಾಗಿದೆ.

ಇನ್ನೂ ಭಾರತದಲ್ಲಿ ಅನೇಕ ವಿವಿಧ ಹಲಸಿನ ಹಣ್ಣುಗಳ ಮರಗಳಿದೆ. ಆದರೆ ಇದೆಲ್ಲ ಮರಗಳಿಗೆ ಹೋಲಿಸಿದರೆ ಈ ಸಿದ್ದು ಹಲಸಿನ ಹಣ್ಣು ಶ್ರೇಷ್ಠ, ವಿಶಿಷ್ಟ, ಹಣ್ಣುಗಳ ರಾಜ ಎಂದು ಹೇಳಲಾಗುತ್ತದೆ. ಸಿದ್ದು ತಳಿಯ 5,000ಕ್ಕೂ ಅಧಿಕ ಕಸಿ ಗಿಡಗಳನ್ನು ೧೫೦ ರಿಂದ 200ರೂಪಾಯಿಗಳಿಗೆ ಮಾರುತ್ತಿದ್ದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಈ ತಳಿಗೆ ಪೇಟೆಂಟ್‌ ಮಾಡಿಸಿಕೊಟ್ಟಿದೆ. ಗಿಡ ಮಾರಾಟದ ರಾಯಲ್ಟಿಯಾಗಿ 4ಲಕ್ಷ ರೂಪಾಯಿ ಹೆಚ್ಚುವರಿ ಆದಾಯ ದೊರೆಯುತ್ತಿದೆ.

ಇನ್ನೂ ಈ ಹಿಂದೆ ಈ ಮರದ ಹಣ್ಣನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನೋಡಿದಾಗ ಅದರಲ್ಲಿ ಲಿಕೋಪಿನ್ ಅಂಶ ಹೆಚ್ಚಾಗಿರುವುದು ಕಂಡುಬಂದಿತ್ತು. ನೂರು ಗ್ರಾಮ್ ನಷ್ಟು ಸಿದ್ದು ಹಲಸಿನ ತೊಳೆಯಲ್ಲಿ ಎರಡು ಎಮ್ ಜಿ ಲಿಕೋಪಿನ್ ಇದ್ದು ಬೇರೆ ತಳಿಯ ಹಣ್ಣಿಗೆ ಹೋಲಿಸದರೆ ಆ ಹಣ್ಣಿ‌ನಲ್ಲಿ ಲಿಕೊಪಿನ್ ಅಂಶ ತುಂಬಾ ಕಡಿಮೆ. ಲಿಕೋಪಿನ್ ಅಂಶ ಹೃದಯಕ್ಕೆ ಸಂಬಂಧ ಪಟ್ಟಂತ ಕಾಯಿಲೆಗೆಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಈ ಕಾರಣಕ್ಕೆ ಸಿದ್ದು ಹಲಸಿನ ಗಿಡಗಳಿಗೆ ಹಾಗು ಹಣ್ಣುಗಳಿಗೆ ಬಾರಿ ಬೇಡಿಕೆ ಇದ್ದು ವರ್ಷಕ್ಕೆ 10 ಲಕ್ಷ ಸಂಪದಾನೆ ಮಾಡುತ್ತಿದ್ದಾರೆ ಈ ರೈತ.

ವರ್ಷದಿಂದ ವರ್ಷಕ್ಕೆ ಈ ಸಸಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಸುಮಾರು ಲಕ್ಷದಷ್ಟು ಸಸಿಗಳಿಗೆ ಬೇಡಿಕೆ ಬರುತ್ತಿದೆ ಆದರೆ ಈ ರೈತ ವರ್ಷಕ್ಕೆ 4500 ಗಿಡಗಳನ್ನು ಪೂರೈಕೆ ಮಾಡುತ್ತಿದ್ದು ಒಂದು ಗಿಡಕ್ಕೆ 200 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ತನ್ನ  ಅರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿದ ಈ ಹಲಸಿನ ಮರಕ್ಕೆ ರಕ್ಷಣೆಗೆಂದು ಸಿಸಿಟಿವಿ ಅಳವಡಿಸಿದ್ದಾರೆ ಈ ರೈತ‌. ಕಾರಣ ಒಂದು ಕಳ್ಳತನದ ಭಯ ಮತ್ತು ಒಬ್ಬರು ಚೆನ್ನಾಗಿ ಬೆಳೆಯುತ್ತಿದ್ದಾರೆ ಅಂದರೆ ಕೆಲವು ವ್ಯಕ್ತಿಗಳು ಅದನ್ನು ಹಾಳು ಮಾಡಲು ನೋಡುತ್ತಾರೆ.

ಈಗಾಗಿ ಈ ಮರಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಇನ್ನೂ ಈ ಸಿದ್ದು ಹಲಸಿನ‌ ಹಣ್ಣನ್ನು ಅಭಿವೃದ್ಧಿ ಪಡಿಸಲು ಆಸ್ಟ್ರೇಲಿಯಾ ಕಂಪನಿ ಆಸಕ್ತಿ ವಹಿಸಿತ್ತು. ಆದರೆ ಭಾರತೀಯ ತೋಟಗಾರಿಕೆ ನೀತಿ ಅನ್ವಯ ವಿದೇಶಳಿಗೆ ದೇಶಿಯ ತಳಿ ನೀಡಲು ಸಾಧ್ಯವಿಲ್ಲವೆಂದು ನಿರಾಕರಿಸಲಾಗಿದೆ. ಸಾಧ್ಯವಾದ್ರೆ ನೀವು ಕೂಡ ಸಿದ್ದು ಹಲಸಿನ ಹಣ್ಣಿನ ಗಿಡವನ್ನು ಬೆಳಸಿ ಹಾಗೆ ರಾಜ್ಯದ ಹಣ್ಣು ಪ್ರಪಂಚದ ಹಣ್ಣಾಗಿ ಹರಡುವಂತೆ ಮಾಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!