ಗ್ರಾಮ ಪಂಚಾಯ್ತಿ ಮುಖಾಂತರ ನಿಮ್ಮ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಲಿ ಅಥವಾ ಸಾರ್ವಜನಿಕರಿಗೆ ಸಹಾಯವಾಗುವ ಯಾವುದೇ ಕೆಲಸವಾಗಲಿ ಅಥವಾ ಸರ್ಕಾರಿ ಸೌಲಭ್ಯ ಮತ್ತು ಉದ್ಯೋಗ ಖಾತ್ರಿ ಕೆಲಸದ ಬಗ್ಗೆಯೂ ಆಗಿರಬಹುದು. ಊರು ಅಭಿವೃದ್ಧಿ ಹೊಂದಬೇಕು ಎನ್ನುವುದು ಊರಿನ ಪ್ರತಿಯೊಬ್ಬ ನಾಗರಿಕನ ಆಸೆ ಆಗಿರುತ್ತದೆ. ಆದರೆ ಕೆಲವೊಂದು ಗ್ರಾಮ ಪಂಚಾಯ್ತಿ ಕಾರ್ಯಾಲಯಗಳಲ್ಲಿ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದಿಲ್ಲ, ಯಾವುದೇ ಕೆಲಸ ಆಗಲಿ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗಬೇಕೆಂದರೆ ನಾಗರಿಕರು ಕೈಗೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತೆ ತಿಳಿಯೋಣ.
ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗಬೇಕೆಂದರೆ,, ಗ್ರಾಮದಲ್ಲಿನ ಸುಮಾರು ಐದರಿಂದ ಹತ್ತು ಜನರ ಗುಂಪೊಂದು ಸೇರಿಕೊಂಡು ಏನು ತೊಂದರೆಯಾಗಿದೆ ಎನ್ನುವುದನ್ನು ಚರ್ಚೆ ಮಾಡಿಕೊಂಡು ನಂತರ ಆಗಿರುವ ತೊಂದರೆಯನ್ನು ವಿವರಿಸಿ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ದೂರನ್ನು ಬರೆಯಬೇಕು. ಆ ದೂರು ಹೇಗಿರಬೇಕು ಎಂದರೆ, ದೂರಿನಲ್ಲಿ ನೈತಿಕತೆ, ನಿಜಾಂಶ ಇರಬೇಕು ಹಾಗೂ ದೂರು ನಿಮ್ಮ ಗ್ರಾಮದ ಮತ್ತು ಗ್ರಾಮದ ಜನರ ಹಿತದೃಷ್ಟಿಗಾಗಿ, ಒಳಿತಿಗಾಗಿ ಎನ್ನುವುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕು. ದೂರು ಸ್ಪಷ್ಟವಾಗಿ ಯಾವುದರ ಬಗ್ಗೆ ಎನ್ನುವ ಉದ್ದೇಶ ಹೊಂದಿರಬೇಕು.
ಬರೆದಿರುವ ದೂರನ್ನು ನಿಮ್ಮ ಗ್ರಾಮ್ ಪಂಚಾಯಿತಿಯ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಗ್ರಾಮ್ ಪಂಚಾಯಿತಿಗೆ ದೂರು ಕೊಟ್ಟ ನಂತರ ಅಪ್ಲಾಯಿಸ್ಮೆಂಟ್ ರಸೀದಿಯನ್ನು ಪಡೆದುಕೊಳ್ಳಿ, ದೂರು ಕೊಟ್ಟಾಗ ಯಾವುದೇ ಕಾರಣಕ್ಕೂ ಅಪ್ಲಾಯಿಸ್ಮೆಂಟ್ ರಸೀದಿಯನ್ನು ಪಡೆಯಲು ಮರೆಯಬೇಡಿ. ಗ್ರಾಮ ಪಂಚಾಯಿತಿಯವರು ಕೇಳಿದಷ್ಟು ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಒಂದು ವೇಳೆ ನಿಮ್ಮ ಕೆಲಸವನ್ನು ಪೂರ್ಣಗೊಳಿಸದೆ ಇದ್ದರೆ ನೀವು ಮುಂದಿನ ಕ್ರಮ ತೆಗೆದುಕೊಳ್ಳಬಹುದು.
ಅದೇನೆಂದರೆ ಗ್ರಾಮ ಪಂಚಾಯಿತಿ ವಿರುದ್ಧ ತಾಲೂಕು ಪಂಚಾಯತ್ ಗೆ ದೂರು ಕೊಡಬಹುದು. ಅಲ್ಲಿಯೂ ಕೂಡ 5 ರಿಂದ 10 ಜನರ ಗುಂಪು ಸೇರಿ ನಿಮ್ಮ ಗ್ರಾಮ ಪಂಚಾಯಿತಿಗೆ ಕೊಟ್ಟಿರುವ ದೂರನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ಬರೆದು ಪುನಃ ತಾಲೂಕು ಪಂಚಾಯತ್ಗೆ ಸಲ್ಲಿಸಬೇಕು. ತಾಲೂಕು ಪಂಚಾಯಿತಿಯಲ್ಲೂ ಕೂಡ ದೂರಿನ ಅಪ್ಲಾಯಿಸ್ಮೆಂಟ್ ರಸೀದಿಯನ್ನು ತಪ್ಪದೇ ಪಡೆಯಬೇಕು.
ಹಾಗೆ ತಾಲೂಕು ಪಂಚಾಯಿತಿಯಿಂದಲೂ ನಿಮ್ಮ ಊರಿನ ಕೆಲಸ ಪೂರ್ಣಗೊಳ್ಳದಿದ್ದರೆ ಮುಂದಿನ ಹೆಜ್ಜೆ ಅಂದರೆ ಜಿಲ್ಲಾ ಪಂಚಾಯಿತಿಗೆ ನೇರವಾಗಿ ದೂರು ಕೊಡಬಹುದು. ಆಗ ಊರಿನ ಕೆಲಸ ತಪ್ಪದೇ ನೆರವೇರುತ್ತದೆ. ಆದರೆ ಯಾರೇ ದೂರು ಕೊಡುವ ಮುಂಚೆ ನಿಮ್ಮ ಊರಿನ ಚುನಾಯಿತ ಸದಸ್ಯರಿಗೆ ದೂರಿನ ವಿಷಯ ಮೊದಲೇ ತಿಳಿಸಿರಬೇಕು.