ಕಳೆದ ಹತ್ತು ವರ್ಷಗಳಲ್ಲಿ ಅಡಿಕೆಯ ವಿಸ್ತೀರ್ಣ ಹೆಚ್ಚಾಗುತ್ತಿದೆ ರೈತರಿಗೆ ಅಡಿಕೆ ಬೆಲೆಯಲ್ಲಿ ಕುಂಟಿತ ಕಾಣುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಅಡಿಕೆಯಲ್ಲಿ ಹಲವಾರು ಅಂತರ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಉದಾಹರಣೆಗೆ ಅಡಿಕೆಯಲ್ಲಿ ಏಲಕ್ಕಿ ಲವಂಗ ಜಾಯಿಕಾಯಿ ಕಾಳುಮೆಣಸು ಕೋಕೋ ಬೆಳೆಗಳನ್ನು ಬೆಳೆದುಕೊಂಡು ರೈತರು ಉತ್ತಮವಾದ ಆದಾಯವನ್ನು ಗಳಿಸಬಹುದು. ಚಿಕ್ಕ ಜೇನಿ ಗ್ರಾಮ ಹೊಸನಗರ ತಾಲೂಕಿನ ಶಿವಮೊಗ್ಗ ಜಿಲ್ಲೆಯ ವಿಜೇಂದ್ರ ಭಟ್ ಎನ್ನುವ ರೈತರು ತಮ್ಮ ಆರು ಎಕರೆ ಜಮೀನಿನಲ್ಲಿ ಅಂತರ ಬೆಳೆಯಾಗಿ ಜಾಯಿಕಾಯಿಯನ್ನು ಬೆಳೆದು ಪ್ರತಿ ಗಿಡಕ್ಕೆ ಒಂದುವರೆ ಸಾವಿರ ರೂಪಾಯಿಗಳ ಆದಾಯವನ್ನು ಗಳಿಸುತ್ತಿದ್ದಾರೆ.
ಜಾಯಿಕಾಯಿ ಸಾಂಬಾರ ಪದಾರ್ಥಕ್ಕೆ ಸೇರಿರುವಂತದ್ದು ಇದು ಮಧ್ಯಮಗಾತ್ರದ ಮರವಾಗಿದ್ದು ಅಡಿಕೆ ಬೆಳೆಯ ನಡುವೆ ಉಪ ಬೆಳೆಯಾಗಿ ಬೆಳೆಯಬಹುದು. ಇದನ್ನು ನಾಟಿ ಮಾಡಿದರೆ ಮೂರರಿಂದ ನಾಲ್ಕು ವರ್ಷದಲ್ಲಿ ಫಸಲು ಬರುವುದಕ್ಕೆ ಪ್ರಾರಂಭಿಸುತ್ತದೆ. ಆರರಿಂದ ಏಳು ವರ್ಷಕ್ಕೆ ಒಂದು ಗಿಡದಲ್ಲಿ ಎರಡರಿಂದ ಎರಡುವರೆ ಸಾವಿರ ಕಾಯಿ ಬಿಡುವುದಕ್ಕೆ ಪ್ರಾರಂಭಿಸುತ್ತದೆ.
ಜಾಯಿಕಾಯಿಯನ್ನು ಅವರ ಮೇಲಿನ ಸಿಪ್ಪೆಯನ್ನು ತೆಗೆದು ಅದರೊಳಗಿನ ಪತ್ರೆಯನ್ನು ಬಿಡಿಸಿ ಅದರಿಂದ ಕಾಯಿಕಾಯಿಯನ್ನು ಹೊರತೆಗೆದು ಅದನ್ನು ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಒಣಗಿಸಬೇಕು. ಇದರ ಪತ್ರೆಯನ್ನು ಬಿಸಿಲಿನಲ್ಲಿ ಒಣಗಿಸುವಂತಿಲ್ಲ ನೆರಳಿನಲ್ಲಿ ಒಣಗಿಸಬೇಕು. ಸಾವಿರದ ಎರಡು ನೂರು ಕಾಯಿಗೆ ಒಂದು ಕೆಜಿ ಪತ್ರೆ ಸಿಗುತ್ತದೆ. ಇದಕ್ಕೆ ಎಳುನೂರರಿಂದ ಎರಡು ಸಾವಿರ ರೂಪಾಯಿವರೆಗೂ ಬೆಲೆ ಇದೆ.
ಇನ್ನು ಜಾಯಿ ಕಾಯಿ ಬೀಜ ನಾಲ್ಕು ನೂರರಿಂದ ಏಳುನೂರು ಬೀಜಗಳಿಗೆ ಒಂದು ಕೆಜಿ ಬರುತ್ತದೆ. ಅದಕ್ಕೆ ನಾಲ್ಕುನೂರರಿಂದ ಏಳು ನೂರು ರೂಪಾಯಿ ಬೆಲೆ ಇದೆ ಇದರ ಸಿಪ್ಪೆಯನ್ನೂ ಕೂಡ ಉಪ್ಪಿನಕಾಯಿ ಹಾಕಬಹುದು ಅಥವಾ ಸಕ್ಕರೆ ಪಾಕದಲ್ಲಿ ಹಾಕಿ ಚಿಪ್ಸ್ ತರಹ ಮಾಡಿಕೊಳ್ಳಬಹುದು. ಇದರಲ್ಲಿ ಔಷಧೀಯ ಗುಣ ಇರುವುದರಿಂದ ನೀವು ಪ್ರತಿದಿನ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದು.
ಜಾಯಿಕಾಯಿಯ ಪತ್ರೆಗೆ ಕಾಯಿ ಗಿಂತ ಹೆಚ್ಚಿನ ಬೆಲೆ ಇದೆ ಅದನ್ನು ಗರಂಮಸಾಲೆ ಯಲ್ಲಿ ಉಪಯೋಗಿಸುತ್ತಾರೆ. ಜೊತೆಗೆ ಇದನ್ನು ಹೊರದೇಶಗಳಿಗೂ ಕಳಿಸುತ್ತಾರೆ ಇದರಿಂದ ಔಷಧಿ ತಯಾರಾಗುತ್ತದೆ. ಜಾಯಿಕಾಯಿಯನ್ನು ಕೂಡ ಮಕ್ಕಳಿಗೆ ಔಷಧಿಯನ್ನಾಗಿ ಹಳ್ಳಿಗಳಲ್ಲಿ ಬಳಸುತ್ತಾರೆ.
ರೈತರು ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ ಅವುಗಳ ನಡುವೆ ಈ ರೀತಿ ಜಾಯಿಕಾಯಿ ಲವಂಗ ಏಲಕ್ಕಿ ಕಿತ್ತಲೆ ಲಿಂಬು ಮುಸಂಬೇ ಹೀಗೆ ಬೇರೆಬೇರೆ ರೀತಿಯ ಫಸಲುಗಳನ್ನು ಬೆಳೆದಾಗ ಒಂದರಲ್ಲಿ ನಷ್ಟ ಉಂಟಾದರೂ ಇನ್ನೊಂದರಿಂದ ಲಾಭವಾಗುತ್ತದೆ. ಈ ಎಲ್ಲಾ ಫಸಲುಗಳು ಕೂಡ ಅಡಿಕೆ ಬೆಳೆಗೆ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡುವುದಿಲ್ಲ.
ಈ ಬೆಳೆಗಳಿಗೆ ಯಾವುದೇ ರೋಗ ಬರುವುದಿಲ್ಲ ಅವಳಿಗೆ ಔಷಧಗಳನ್ನು ಸಿಂಪಡಿಸುವಂತಹ ಅವಶ್ಯಕತೆಯಿರುವುದಿಲ್ಲ. ಈ ಜಾಯಿಕಾಯಿ ವರ್ಷದ ಎಲ್ಲಾ ತಿಂಗಳಿನಲ್ಲಿ ಸಿಗುತ್ತಿರುತ್ತದೆ. ನೀವು ಇದನ್ನ ಅಡಿಕೆ ತೋಟದಲ್ಲಿ ಬೆಳೆಯುವುದರಿಂದ ಇದರ ಎಲೆಗಳಿಂದ ಅಡಿಕೆ ಮರಗಳಿಗೆ ಸಾವಯವ ಗೊಬ್ಬರ ಕೂಡ ದೊರೆಯುತ್ತದೆ.
ಜಾಯಿಕಾಯಿ ಬೆಳೆಯನ್ನು ಅಡಿಕೆ ತೆಂಗುಗಳ ನಡುವೆ ಉಪ ಬೆಳೆಯನ್ನಾಗಿ ಬೆಳೆಯಬೇಕು ಏಕೆಂದರೆ ಇದು ಹೆಚ್ಚಾಗಿ ನೆರಳನ್ನು ಬಯಸುತ್ತದೆ. ಇದನ್ನ ಒಂದು ಹೊಂಡದಲ್ಲಿ ಎರಡು ಗಿಡಗಳನ್ನು ನೆಡಬಹುದು. ಜಾಯಿಕಾಯಿ ಗಿಡಗಳಲ್ಲಿ ಬೀಜದ ಗಿಡ ಮತ್ತು ಕಸಿ ಗಿಡ ಎರಡು ರೀತಿಯ ಗಿಡ ಗಳಿರುತ್ತವೆ ಕಸಿ ಗಿಡಗಳಿಗೆ ಸ್ವಲ್ಪ ಹೆಚ್ಚಿರುತ್ತದೆ.
ನೀವು ಅಡಿಕೆ ಮತ್ತು ತೆಂಗಿನ ನಡುವೆ ಈ ರೀತಿಯ ಉಪಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ರೀತಿಯಲ್ಲಿ ಪಡೆಯಬಹುದು. ನೀವು ಕೂಡ ಕೃಷಿಕರಾಗಿದ್ದರೆ ಅಡಿಕೆ ಮತ್ತು ತೆಂಗು ಬೆಳೆಗಳ ನಡುವೆ ನೀವು ಕೂಡ ಈ ರೀತಿಯ ಬೇರೆ ಬೇರೆ ಉಪಬೆಳೆಗಳನ್ನು ಬೆಳೆಯುವುದರ ಮೂಲಕ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೆ ತಿಳಿಸಿರಿ. video credit for krushi belaku