ಆಚಾರ್ಯ ಚಾಣಕ್ಯನು ನೀತಿ ಶಾಸ್ತ್ರದಲ್ಲಿ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಉಲ್ಲೇಖಿಸಿದ್ದಾನೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸುವ ವ್ಯಕ್ತಿ ಯಾವುದೇ ಸಮಸ್ಯೆಯನ್ನು, ರಾಜತಾಂತ್ರಿಕ ಆಡಳಿತವನ್ನು ಎದುರಿಸಲಾರ. ಆಚಾರ್ಯ ಚಾಣಕ್ಯ ರಾಜತಾಂತ್ರಿಕತೆ ಜೊತೆ ಮನುಷ್ಯರ ನಡುವಿನ ಒಳ್ಳೆಯತನ ಮತ್ತು ಕೆಟ್ಟ ಗುಣಗಳನ್ನು ಕೂಡ ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ಯಾವಾಗ ನಮ್ಮ ಕಷ್ಟಕ್ಕೆ ಆಗುತ್ತಾನೆ. ಆತನ ಸ್ವಭಾವ ಹೇಗೆ. ಅಪರಿಚಿತರನ್ನು ನಂಬುವಾಗ ಯಾವ ಅಂಶ ಗಮನದಲ್ಲಿರಬೇಕು ಎಂಬ ಬಗ್ಗೆ ಆಚಾರ್ಯ ಚಾಣಕ್ಯ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಚಾಣಕ್ಯರ ಮಾತುಗಳನ್ನ ಪಾಲಿಸುವಂತಹ ವ್ಯಕ್ತಿಗಳು ಇಡೀ ಜಗತ್ತನ್ನೇ ಗೆಲ್ಲಬಹುದು. ಅಂತಹ ಕೆಲ ಮಾತುಗಳನ್ನ ಇಲ್ಲಿ ತಿಳಿಸಲಾಗಿದೆ. ಜೀವನದಲ್ಲಿ ಬೇರೆಯವರ ತಪ್ಪಿನಿಂದಲೂ ಕಲಿತುಕೊಳ್ಳಿ ಎಲ್ಲಾ ತಪ್ಪುಗಳು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗಿಲ್ಲ.ಊಟ ಮಾಡುವಾಗ ಮಾತ್ರ ದೊಡ್ಡದಾಗಿ ಬಾಯಿ ತೆರೆಯುವ ಮನುಷ್ಯ ನೂರು ವರುಷದ ಸುಖವನ್ನು ಒಂದೇ ವರ್ಷಕ್ಕೆ ಪಡೆದುಕೊಳ್ಳುತ್ತಾನೆ ಅಂದರೆ ಮೌನವೇ ಮಹಾ ಅಸ್ತ್ರ. ಯುದ್ಧದಿಂದ ಗೆಲ್ಲಲಾಗದು ಮೌನದಿಂದ ಗೆಲ್ಲಬಹುದು ಹೆಚ್ಚಿಗೆ ಮಾತನಾಡಿದಷ್ಟು ಹೆಚ್ಚಿನ ಸಮಸ್ಯೆಗಳು ಮೈಮೇಲೆ ಬರುತ್ತವೆ.

ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿಯೇ ಹೋರಾಡುತ್ತಾನೆಯೋ ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ದುರ್ಬಲ ವ್ಯಕ್ತಿಗಳನ್ನು ಗಮನಿಸಿ ನಿರ್ಲಕ್ಷಿಸಬೇಡಿ ಏಕೆಂದರೆ ಅವರು ಎಲ್ಲರಿಗಿಂತ ಅತಿ ಹೆಚ್ಚು ಸೇಡಿನ ಮನೋಭಾವನೆ ಹೊಂದಿರುತ್ತಾರೆ. ದೊಡ್ಡ ಗುರು ಮಂತ್ರ ಯಾರೊಂದಿಗೂ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬೇಡಿ ಅದು ನಿಮ್ಮನ್ನು ನಾಶಮಾಡುತ್ತದೆ. ನಿಮ್ಮ ದೇಹ ಆರೋಗ್ಯಕರವಾಗಿರುವ ತನಕ ಮಾತ್ರ ಸಾವು ನಿಮ್ಮಿಂದ ದೂರದಲ್ಲಿರುತ್ತದೆ. ನಿಮ್ಮ ಆತ್ಮವನ್ನು ಸಾವಿನಿಂದ ಸಾಧ್ಯವಾದಷ್ಟು ಸಂರಕ್ಷಿಸಿಕೊಳ್ಳಿ ಕಳೆದುಕೊಂಡ ಸಂಪತ್ತು ಮರಳಿ ಪಡೆಯಬಹುದು ಆದರೆ ನಶಿಸಿ ಹೋದ ಶರೀರ ಮರಳಿ ಪಡೆಯಲು ಸಾಧ್ಯವಿಲ್ಲ.

ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೆಯೋ ಅವನು ಇಡೀ ಜಗತ್ತಿನ ಮೇಲೆ ವಿಜಯ ಸಾಧಿಸುತ್ತಾನೆ. ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು. ಶಕ್ತಿಶಾಲಿಗಳನ್ನಾಗಿರಬಹುದು ಇಲ್ಲ ದುರ್ಬಲನ್ನಾಗಿಸಿ ಕೊಲ್ಲಬಹುದು ಕಾಲ ಯಾರ ಕೈಯಲ್ಲೂ ಇಲ್ಲ ಯಾರು ಯಾರಿಗೂ ಮಿತ್ರನೂ ಅಲ್ಲ ಶತ್ರುನೂ ಅಲ್ಲ ಕಾಲ ಎಲ್ಲರನ್ನು ಮಿತ್ರ ಅಥವಾ ಶತ್ರುವನ್ನಾಗಿಸುತ್ತದೆ.

ನಿಮ್ಮ ಸಮಸ್ಯೆಗಳನ್ನು ನೋವುಗಳನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬೇಡಿ ಏಕೆಂದರೆ ಜನ ನಿಮ್ಮನ್ನು ನೋಡಿ ಗೇಲಿ ಮಾಡಿಕೊಂಡು ನಗುವುದರ ಜೊತೆಗೆ ನಿಮ್ಮ ದುರ್ಬಲತೆಗಳ ಲಾಭ ಪಡೆಯುತ್ತಾರೆ. ಕಾಗೆ ಎಷ್ಟು ಎತ್ತರವಾದ ಶಿಖರವನ್ನೇರಿ ಕುಳಿತರು ಅದು ರಣಹದ್ದೆಂದು ಅನಿಸಿಕೊಳ್ಳುವುದಿಲ್ಲ ಅದೇ ರೀತಿ ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರವಾಗುತ್ತವೆಯೋ ಹೊರತು ಅವನಿರುವ ಎತ್ತರ ಸ್ಥಾನಮಾನ ಅಥವಾ ಸಿರಿವಂತಿಕೆಯ ಮೇಲಲ್ಲ.

ಹುಟ್ಟು ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಬೇವಿನ ಗಿಡದ ಮೇಲೆ ಹಾಲಿನ ಅಭಿಷೇಕ ಮಾಡಿದರೂ ಬೇವು ಬೇವಾಗಿಯೇ ಇರುತ್ತದೆ ಹೊರತು ಅದು ಬೆಲ್ಲವಾಗಲು ಸಾಧ್ಯವಿಲ್ಲ. ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲ ಬಡಿತ ಸಾಕು ನಿಮ್ಮ ದೇಹದ ಆಕಾರ ಗಾತ್ರ ಮತ್ತು ಸೌಂದರ್ಯ ಮುಖ್ಯವಲ್ಲ ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ.

ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ತಪ್ಪಿಯೂ ವಿಶ್ವಾಸವಿಡಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ ಹುಲಿ ಹಿಂಸೆ ಮಾಡುವುದನ್ನು ಯಾವತ್ತು ಬಿಡುವುದಿಲ್ಲ. ಯಾವಾಗಲೂ ಗುಣವಂತರ ಜೊತೆ ಗೆಳೆತನ ಮಾಡಿ ಏಕೆಂದರೆ ಹಾಲಲ್ಲಿ ನೀರು ಸೇರಿ ಹಾಲಾಗುವ ಹಾಗೇ ನಾವು ಗುಣವಂತರ ಜೊತೆ ಸೇರಿ ಗುಣವಂತರಾಗುತ್ತೇವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!