ಗಗನವೇ ಹಾಸಿಗೆ ಭೂಮಿಯೇ ಹೊದಿಕೆ ಕಣ್ತುಂಬ ನಿದ್ದೆ ಬಡವನಿಗೆ ಬೆಚ್ಚನೆ ಹಾಸಿಗೆಯ ಸುಖದ ಸುಪ್ಪತ್ತಿಗೆ ನಿದ್ರೆಯಿಲ್ಲ ಧನಿಕನಿಗೆ ಈ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ ಆದರೆ ನಾನಿಲ್ಲಿ ಹೇಳಹೊರಟಿರುವುದು ನಿದ್ದೆಯ ಬಗ್ಗೆ.ಮನುಷ್ಯನ ಜೀವನದಲ್ಲಿ ತನ್ನ ದೇಹದ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ನಿದ್ದೆ ಕೂಡ ಅಷ್ಟೇ
ಮುಖ್ಯ.ಮನುಷ್ಯ ಎಷ್ಟೇ ದುಡಿದರೂ ಎಷ್ಟೇ ಸಂಪತ್ತನ್ನು ಹೊಂದಿದ್ದರೂ ಸರಿಯಾದ ನಿದ್ದೆ ನೆಮ್ಮದಿಯಿಂದ ಇಲ್ಲ ಎಂದರೆ ಅವನ ಜೀವನ ವ್ಯರ್ಥ, ನಿದ್ದೆಯ ಹಿಂದಿನ ಹಲವಾರು ಕಾರಣಗಳನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ಇಂದಿಗೂ ಕೂಡ ತಿಳಿದುಕೊಳ್ಳುತ್ತಲೇ ಇದ್ದೇವೆ.
ನಾವು ಸಾಮಾನ್ಯವಾಗಿ ದಿನನಿತ್ಯ ಮಾಡುವಂತಹ ಕೆಲವು ಚಿಕ್ಕ ಪುಟ್ಟ ತಪ್ಪುಗಳಿಂದ ನಮಗೆ ನಿದ್ದೆ ಬರುವುದು ಕಡಿಮೆಯಾಗುತ್ತದೆ ಮತ್ತು ನಾವು ನಿದ್ದೆಗೆಡುವಂತೆ ಆಗುತ್ತದೆ, ಹೀಗೆ ಹಲವಾರು ನಿದ್ದೆಯ ಸಮಸ್ಯೆಗಳನ್ನು ಹೊಂದಿದವರಿಗೆ ನಾವು ಇಂದು ಪರಿಹಾರಗಳನ್ನು ಸೂಚಿಸುತ್ತೇವೆ ದಯವಿಟ್ಟು ಗಮನಿಸಿ.
ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಚಿಕ್ಕಮಕ್ಕಳು ಅಂದರೆ ಮದುವೆಯಾಗದವರು ಮನೆಯಲ್ಲಿ ತಮ್ಮ ಕೊಠಡಿಯಲ್ಲಿ ಪೂರ್ವದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದು ಒಳಿತು ಮತ್ತು ಮದುವೆಯಾದವರು ಹಾಗೂ ಮನೆಯ ಹಿರಿಯರು ತಾವು ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗುವುದು ಒಳಿತು,
ಯಾವುದೇ ಕಾರಣಕ್ಕೂ ಮನೆಯ ಯಾವ ಸದಸ್ಯರು ಕೂಡ ಮನೆಯ ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದು ಸರಿಯಲ್ಲ, ಇದು ನಮ್ಮ ಪ್ರಕೃತಿಗೆ ಅಂದರೆ ಆಯಸ್ಕಾಂತೀಯ ಶಕ್ತಿಗೆ ವಿರುದ್ಧವಾದದ್ದು ಹಾಗಾಗಿ ಯಾವುದೇ ಕಾರಣಕ್ಕೂ ಹೀಗೆ ಮಲಗದೇ ಇರುವುದೇ ತಮಗೆ ಒಳಿತು. ಹೀಗೆಯೇ ಮಲಗುವುದು ನಮ್ಮ ದೇಹದ ಮತ್ತು ಮನಸ್ಸಿನ ಅಂದ್ರೆ ಮಾನಸಿಕವಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.
ಇನ್ನು ಎರಡನೆಯದಾಗಿ ಹೇಳುವುದಾದರೆ ನಾವು ಚೆನ್ನಾಗಿ ಮಗುವಿನಂತೆ ನಿದ್ರಿಸಬೇಕು ಅನ್ನೋದಾದರೆ ನಾವು ಮಲಗುವ ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟು ಮಲಗೋದು ಒಳಿತು, ಸಾಧ್ಯವಾದರೆ ತಮ್ಮ ದಿಂಬಿನ ಕೆಳಗೆ ಒಂದು ವಾಸ್ತು ಯಂತ್ರವನ್ನು ಇಟ್ಟು ಮಲಗುವುದು ಕೂಡ ಅಷ್ಟೇ ಒಳಿತು,
ಹೀಗೆ ಮಾಡುವುದರಿಂದ ನಿಮ್ಮ ಮನೆಯ ವಾಸ್ತು ದೋಷ ನಿವಾರಣೆಯಾಗುವುದು ಅಲ್ಲದೆ ನಿಮಗೆ ಸರಿಯಾದ ನಿದ್ರೆಯೂ ಕೂಡ ಇರುತ್ತದೆ, ಎಲ್ಲರೂ ನಿದ್ರೆಯ ಮಹತ್ವವನ್ನು ತಿಳಿದುಕೊಳ್ಳಿ ಮತ್ತು ಸರಿಯಾದ ರೀತಿಯಲ್ಲಿ ನಿದ್ರೆಯನ್ನು ಕೂಡ ಮಾಡಿ.