ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆಗೆ ತುಂಬಾ ಬೇಡಿಕೆಯಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯುವುದಕ್ಕೆ ಮುಂದಾಗುತ್ತಿದ್ದಾರೆ ನಾವಿಂದು ಅಡಿಕೆ ಬೆಳೆಯನ್ನು ಬೆಳೆದ ಒಬ್ಬ ರೈತರು ಯಾವ ರೀತಿಯಾಗಿ ಅದನ್ನು ಬೆಳೆಸಿದ್ದಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.ಅಡಿಕೆ ಬೆಳೆಯಲ್ಲಿ ಸಾವಯವ ವಿಧಾನವನ್ನು ಅನುಸರಿಸುವ ಮೂಲಕ ಯಾವ ರೀತಿಯಾಗಿ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದು ಎಂಬುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಒಬ್ಬ ರೈತರು ತಮ್ಮ ಮೂವತ್ನಾಲ್ಕು ಗುಂಟೆ ಜಾಗದಲ್ಲಿ ಐದುನೂರು ಸಸಿಗಳನ್ನು ಹಾಕಿ ಆರರಿಂದ ಏಳು ವರ್ಷದಲ್ಲಿ ಉತ್ತಮವಾದ ಫಸಲನ್ನು ಪಡೆಯುತ್ತಿದ್ದಾರೆ.
ಅವರು ಅಡಿಕೆ ಸಸಿಗಳನ್ನು ತುಮಕೂರು ಜಿಲ್ಲೆಯಿಂದ ತಂದು ನಾಟಿ ಮಾಡಿದ್ದಾರೆ ಅಡಿಕೆ ಸಸಿಗಳನ್ನು ಎಂಟು ಅಡಿ ಆರು ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಅಡಿಕೆ ಸಸಿಗಳಿಗೆ ನೀರಿನ ವ್ಯವಸ್ಥೆಗಾಗಿ ಡ್ರಿಪ್ ಮಾಡಿದ್ದಾರೆ. ಅಡಿಕೆ ಸಸಿಗಳು ನೀರಿಲ್ಲದಿದ್ದರೆ ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ತೆಂಗಿನಮರಗಳು ನೀರಿಲ್ಲದೆ ಹೆಚ್ಚುದಿನಗಳ ಕಾಲ ಬದುಕುತ್ತವೆ. ಅಡಿಕೆ ಸಸಿಗಳಿಗೆ ಡ್ರಿಪ್ ಗಳನ್ನು ಮಾಡಿ ವಾರದಲ್ಲಿ ಮೂರು ದಿನ ನೆಲೆ ನೆನೆಯುವಷ್ಟು ನೀರುಣಿಸಬೇಕು. ಅಡಿಕೆ ಸಸಿಗಳನ್ನು ನೆಡುವಾಗ ಮೊದಲು ಜೆಸಿಬಿಯಿಂದ ಟ್ರೆಂಚ್ ಗಳನ್ನು ಹೊಡಿಸಿ ಅಡಿಕೆ ಮತ್ತು ಬಾಳೆ ಸಸಿಗಳನ್ನು ನಾಟಿ ಮಾಡುತ್ತಾರೆ. ಅಡಿಕೆ ಸಸಿಗಳು ಚಿಕ್ಕದಿದ್ದಾಗ ಅವುಗಳಿಗೆ ನೆರಳು ಸಿಗುವ ಉದ್ದೇಶದಿಂದ ಮಧ್ಯದಲ್ಲಿ ಬಾಳೆಗಳನ್ನು ನಾಟಿ ಮಾಡಲಾಗುತ್ತದೆ.
ಒಂದು ವರ್ಷದ ನಂತರ ಬಾಳೆಯನ್ನು ತೆಗೆಯಬಹುದು. ಆದಷ್ಟು ಅಡಿಕೆ ಮರಗಳಿಗೆ ಸಾವಯುವ ಗೊಬ್ಬರಗಳನ್ನು ನೀಡಬೇಕು ರಾಸಾಯನಿಕ ಗೊಬ್ಬರಗಳನ್ನು ಹಾಕುವ ಪ್ರಮಾಣವನ್ನು ಕಡಿಮೆಗೊಳಿಸಬೇಕು ಕುರಿ ಗೊಬ್ಬರವನ್ನ ವರ್ಷಕ್ಕೆ ಒಮ್ಮೆ ಹಾಕುವುದರಿಂದಲೂ ಕೂಡ ಅಡಿಕೆ ಸಸಿಗಳು ಉತ್ತಮವಾಗಿ ಬೆಳೆಯುತ್ತವೆ. ಈ ರೀತಿಯಾಗಿ ಬೆಳೆಯುವುದರಿಂದ ಅಡಿಕೆ ಸಸಿಗಳು ಆರು ವರ್ಷಕ್ಕೆ ಫಸಲು ನೀಡುವುದಕ್ಕೆ ಪ್ರಾರಂಭಿಸುತ್ತವೆ ನಂತರದ ವರ್ಷದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಫಸಲನ್ನು ಕೊಡುತ್ತವೆ. ಅಡಿಕೆ ಸಸಿಗಳನ್ನು ನಾಟಿ ಮಾಡುವವರು ಅವರ ವ್ಯವಸಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಸಿಗಳನ್ನು ನಾಟಿ ಮಾಡಿಕೊಳ್ಳಬಹುದು ಫೋರ್ ಟಿಲ್ಲರ್ ಬಳಸಬಹುದು ಸಸಿಗಳನ್ನು ಆರಾರು ಅಡಿ ಅಂತರದಲ್ಲಿ ನಾಟಿ ಮಾಡಬಹುದು ಎಂಟು ಅಡಿ ಅಂತರದಲ್ಲಿ ನಾಟಿ ಮಾಡಬಹುದು.
ಸಸಿಗಳನ್ನು ನೆಡುವಾಗ ಅಂತರ ಕಡಿಮೆ ಇದ್ದಾಗ ಸಸಿಗಳಿಂದ ಸಸಿಗಳಿಗೆ ನೆರಳು ಸಿಗುತ್ತದೆ ಅಂತರ ಹೆಚ್ಚಾದಾಗ ಬಿಸಿಲು ಹೆಚ್ಚಾಗಿ ಗಿಡಗಳಿಗೆ ಬಿಸಿಲು ತಗುಲುತ್ತದೆ. ಕೆಲವರು ಅಡಿಕೆ ಜೊತೆಯಲ್ಲಿ ತೆಂಗನ್ನು ಕೂಡ ಬೆಳೆಯುತ್ತಾರೆ ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪಸಲು ಸಿಗುವುದು ಕಡಿಮೆ. ಯಾಕೆಂದರೆ ಅಲ್ಲಿ ಒಂದು ಊಟವನ್ನು ಇಬ್ಬರು ಹಂಚಿಕೊಂಡಂತೆ ಆಗುತ್ತದೆ ಹಾಗಾಗಿ ಇಳುವರಿ ಕಡಿಮೆ ಬರುತ್ತದೆ.
ಇನ್ನು ಎರಡು ಬೆಳೆಗಳಿಗೆ ಬೇಕಾದಂತಹ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿದಾಗ ಎರಡರಿಂದಲೂ ಉತ್ತಮ ರೀತಿಯಾದಂತಹ ಬೆಳೆಯನ್ನು ನಿರೀಕ್ಷೆ ಮಾಡಬಹುದು. ಅಡಿಕೆ ಬೆಳೆಯನ್ನು ಬೆಳೆಯಬೇಕು ಎಂದು ನಿರೀಕ್ಷೆಯನ್ನು ಇಟ್ಟುಕೊಂಡಿರುವವರು ಧಾರಾಳವಾಗಿ ಅಡಿಕೆಯನ್ನು ಬೆಳೆಯಬಹುದು ಅವುಗಳಿಗೆ ಬೇಕಾದ ನೀರು ಪೋಷಕಾಂಶವನ್ನು ಒದಗಿಸುವ ಮೂಲಕ ಉತ್ತಮ ರೀತಿಯಲ್ಲಿ ಲಾಭವನ್ನು ಅಡಿಕೆಯಿಂದ ಪಡೆಯಬಹುದು.
ಜೊತೆಗೆ ಸಾವಯವ ಕೃಷಿಯನ್ನು ಅನುಸರಿಸುವುದರಿಂದ ಉತ್ತಮ ಫಸಲನ್ನು ಪಡೆಯಬಹುದು ಜೊತೆಗೆ ಕೃಷಿ ಭೂಮಿಗೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಇಂದಿನ ದಿನದಲ್ಲಿ ಅಡಿಕೆಗೆ ಹೆಚ್ಚಿನ ಬೆಲೆ ಇದ್ದು ಇದು ಅತಿ ಬೇಡಿಕೆ ಇರುವ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ ಹಾಗಾಗಿ ಅಡಿಕೆಯನ್ನು ಬೆಳೆಯುವುದರಿಂದ ರೈತರಿಗೂ ಕೂಡ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ ರೈತರಿಗೆ ಉಪಯೋಗವಾಗುವ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ರೈತ ಮಿತ್ರರಿಗೂ ಮತ್ತು ಪರಿಚಿತರಿಗು ತಿಳಿಸಿರಿ.