ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನು ತಂದಿದೆ. ಪಿಆರ್ ಕೆ ಪ್ರೊಡಕ್ಷನ್ ಪ್ರಾರಂಭಿಸಿ ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದ್ದರು, ಅಂತೆಯೆ ಹೊಸ ಕಲಾವಿದರೊಂದಿಗೆ ಪ್ರೀತಿಯಿಂದ ಸಲಹೆ ಕೊಡುತ್ತಿದ್ದರು. ನೀನಾಸಂ ಸತೀಶ್ ಅವರೊಂದಿಗೆ ಪುನೀತ್ ಅವರ ಸ್ನೇಹದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಇನ್ನು ಕೇವಲ ನೆನಪು ಮಾತ್ರ. ನಟ ಪುನೀತ್ ರಾಜಕುಮಾರ್ ಅವರ ಸಾವು ಕೇವಲ ಕುಟುಂಬಸ್ಥರಿಗೆ ಮಾತ್ರ ನೋವುಂಟುಮಾಡದೆ ಇಡಿ ಕರ್ನಾಟಕದ ಜನತೆ ತಮ್ಮ ಮನೆಯಲ್ಲಿಯೆ ಸಾವಾಗಿದೆ ಎಂಬಂತೆ ಲಕ್ಷಾನುಲಕ್ಷ ಜನ ಅಪ್ಪು ಅವರ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು.
ಜೊತೆಗೆ ನಟ ಪುನೀತ್ ರಾಜಕುಮಾರ್ ಎಲೆಮರೆ ಕಾಯಿಯ ಹಾಗೆ ಮಾಡಿದ ಎಲ್ಲಾ ಸಹಾಯಗಳು ಬೆಳಕಿಗೆ ಬಂದ ನಂತರ ಯುವರತ್ನ ಪುನೀತ್ ರಾಜಕುಮಾರ್ ಅವರ ಮೇಲೆ ಗೌರವ ಹೆಚ್ಚಾಯಿತು. ಇನ್ನು ಇತ್ತೀಚಿಗಷ್ಟೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಪ್ಪುವಿಗಾಗಿ ನುಡಿನಮನ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೇವಲ ಸೆಲೆಬ್ರಿಟಿಗಳು ಹಾಗೂ ರಾಜಕೀಯದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಅಲ್ಲದೆ ಇಂದಿಗೂ ಸಹ ಕೇವಲ ಸ್ಯಾಂಡಲ್ ವುಡ್ ಕಲಾವಿದರು ಮಾತ್ರವಲ್ಲದೆ ಇಡಿ ಭಾರತೀಯ ಚಿತ್ರರಂಗ ಕಂಡ ಶ್ರೇಷ್ಟ ಕಲಾವಿದರುಗಳು ಸಹ ಕಂಠೀರವ ಸ್ಟುಡಿಯೋಗೆ ಬಂದು ಪುನೀತ್ ಅವರ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ, ಇಂತಹ ಮಹಾನುಭಾವನನ್ನು ಇಷ್ಟು ಬೇಗ ಕರೆದುಕೊಂಡ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಯಾವಾಗಲೂ ಸದಾ ಹಸನ್ಮುಖಿಯಾಗಿ ಇರುತ್ತಿರುವ ನಟ ಪುನೀತ್ ರಾಜಕುಮಾರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪುನೀತ್ ಅವರು ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಸಣ್ಣಪುಟ್ಟ ಕಲಾವಿದರನ್ನು, ಸಹಕಲಾವಿದರನ್ನು ಪ್ರೀತಿ ಮತ್ತು ಗೌರವದಿಂದ ಮಾತನಾಡಿಸುತ್ತಿದ್ದರು. ಹೀಗಾಗಿ ಇಂತಹ ನಟನ ಸಾವು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಆಘಾತವಾಗಿದೆ.
ನಟ ನೀನಾಸಂ ಸತೀಶ್ ಪುನೀತ್ ಅವರ ಆಪ್ತ ಸ್ನೇಹಿತರಾಗಿದ್ದರು ಅಲ್ಲದೆ ಪ್ರತಿಯೊಂದು ಹೆಜ್ಜೆಯಲ್ಲೂ ಕೂಡ ಪುನೀತ್ ಅವರ ಸಲಹೆಯನ್ನು ಪಡೆಯುತ್ತಿದ್ದರು ಆದರೆ ಇಂತಹ ಶ್ರೇಷ್ಠ ವ್ಯಕ್ತಿತ್ವವುಳ್ಳ ಸ್ನೇಹಿತ ಮತ್ತು ನಾಯಕನನ್ನು ಕಳೆದುಕೊಂಡು ದುಃಖಕ್ಕೆ ಒಳಗಾಗಿರುವ ನೀನಾಸಂ ಸತೀಶ್ ಅವರು ಅಪ್ಪು ಅವರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ಅಲ್ಲದೆ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಹ್ಯಾಟ್ಸಾಫ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅವರಿಬ್ಬರ ಸ್ನೇಹ ಹೇಗಿದೆ ಎಂದು ಪೋಟೊ ನೋಡಿದರೆ ತಿಳಿಯುತ್ತದೆ. ಪುನೀತ್ ಅವರು ಮುಂದಿನ ಜನ್ಮದಲ್ಲಿ ನಮ್ಮ ಕನ್ನಡನಾಡಿನಲ್ಲಿ ಜನಿಸಲಿ ಎಂದು ಆಶಿಸೋಣ.