ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಕನಸಿನ ಮನೆಯನ್ನು ಕಟ್ಟಿಕೊಳ್ಳುವ ಆಸೆ ಇರುತ್ತದೆ ಮನೆ ಕಟ್ಟಿಕೊಳ್ಳುವುದಕ್ಕೆ ಬೇಕಾದಷ್ಟು ಹಣ ಕೈಯಲ್ಲಿ ಇರುವುದಿಲ್ಲ ಆಗ ಸಾಲ ಮಾಡುತ್ತಾರೆ ಮಾಡಲೇಬೇಕಾಗುತ್ತದೆ. ಹಾಗಾದರೆ ಎಲ್ಲಿಲ್ಲಿ ಸಾಲ ಸಿಗುತ್ತದೆ ಎಲ್ಲಿ ಸಾಲ ಮಾಡಬೇಕು ಎಂಬುದರ ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ಇರುವುದಿಲ್ಲ ನಾವು ನಿಮಗೆ ಇಂದು ಮನೆ ಕಟ್ಟುವುದಕ್ಕೆ ಎಲ್ಲಿ ಸಾಲವನ್ನ ತೆಗೆದುಕೊಳ್ಳಬೇಕು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೊದಲಿಗೆ ಯಾವ ಯಾವ ರೀತಿಯ ಮನೆ ಸಾಲಗಳು ಸಿಗುತ್ತವೆ ಎಂದರೆ ಮನೆ ಸಾಲಗಳು ಬಡ್ಡಿಯ ಆಧಾರದ ಮೇಲೆ ನಿರ್ಧರಿತವಾಗಿರುತ್ತವೆ. ಅಂದರೆ ಉದಾಹರಣೆಗೆ ಏಳರಿಂದ ಎಂಟು ಶೇಕಡ ಬಡ್ಡಿದರ ಇರುವ ಸಾಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗುತ್ತವೆ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಕಾರ್ಪೊರೇಶನ್ ಬ್ಯಾಂಕ್ ಈ ರೀತಿ ಬೇರೆ ಬೇರೆ ಬ್ಯಾಂಕುಗಳಲ್ಲಿ ನಿಮಗೆ ಆರರಿಂದ ಎಂಟು ಶೇಕಡಾ ದವರೆಗೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ.

ಇನ್ನು ಒಂಬತ್ತರಿಂದ ಹತ್ತರಷ್ಟು ಶೇಕಡ ಬಡ್ಡಿದರದಲ್ಲಿ ಖಾಸಗಿ ಬ್ಯಾಂಕುಗಳು ನಿಮಗೆ ಮನೆ ಸಾಲವನ್ನು ಕೊಡುತ್ತವೆ ಉದಾಹರಣೆಗೆ ಐಸಿಐಸಿ ಬ್ಯಾಂಕ್, ಏಚ್ ಡಿ ಎಫ್ ಸಿ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್ ಐ ಡಿ ಎಫ್ ಸಿ ಬ್ಯಾಂಕ್ ಈ ಬ್ಯಾಂಕ್ ಗಳು ನಿಮಗೆ ಒಂಬತ್ತರಿಂದ ಹತ್ತರ ದರದಲ್ಲಿ ಮನೆ ಸಾಲವನ್ನು ನೀಡುತ್ತವೆ.

ಇದಕ್ಕಿಂತ ಹೆಚ್ಚಿನ ಬಡ್ಡಿದರ ಅಂದರೆ ಸುಮಾರು ಹದಿನಾಲ್ಕು ಶೇಕಡಾದವರೆಗೆ ಬಡ್ಡಿದರ ಇರುವ ಮನೆ ಸಾಲಗಳು ನಿಮಗೆ ಸಿಗುತ್ತವೆ. ಈ ರೀತಿಯ ಸಾಲವನ್ನು ಕೋಪರೇಟಿವ್ ಬ್ಯಾಂಕುಗಳು ಹಾಗೂ ಸಣ್ಣ ಫೈನಾನ್ಸ್ ಬ್ಯಾಂಕ್ ಗಳು ನೀಡುತ್ತವೆ ಉದಾಹರಣೆಗೆ ಉಜ್ಜೀವನ್ ಬ್ಯಾಂಕ್ ಬಂಧನ್ ಬ್ಯಾಂಕ್ ಮುತ್ತೂಟ್ ಫೈನಾನ್ಸ್ ಬಜಾಜ್ ಫೈನಾನ್ಸ್ ಇವರುಗಳ ಬಳಿ ನಿಮಗೆ ಹೆಚ್ಚಿನ ಬಡ್ಡಿ ದರದ ಸಾಲ ದೊರೆಯುತ್ತದೆ.

ಎಲ್ಲರಿಗೂ ಎಲ್ಲಾ ಬಡ್ಡಿದರದಲ್ಲಿ ಸಾಲಗಳು ದೊರೆಯುವುದಿಲ್ಲ ಅರ್ಹತೆಯ ಆಧಾರದ ಮೇಲೆ ನಿಮಗೆ ಎಷ್ಟು ಬಡ್ಡಿಯನ್ನು ವಿಧಿಸಬಹುದು ಎಂಬುದರ ಮೇಲೆ ಸಾಲ ದೊರೆಯುತ್ತದೆ. ಕಡಿಮೆ ಬಡ್ಡಿದರದಲ್ಲಿ ನೀವು ಮನೆ ಸಾಲವನ್ನು ಪಡೆದುಕೊಳ್ಳುವುದಕ್ಕೆ ಎರಡು ಎಲಿಜಿಬಿಲಿಟಿ ಇರುತ್ತದೆ. ಒಂದು ಲ್ಯಾಂಡ್ ಎಲಿಜಿಬಿಲಿಟಿ ಇನ್ನೊಂದು ನಿಮ್ಮ ಎಲಿಜಿಬಿಲಿಟಿ.

ಲ್ಯಾಂಡ್ ಎಲಿಜಿಬಿಲಿಟಿ ಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳು ಎಲ್ಐಸಿ ಹೋಂ ಫೈನಾನ್ಸ್ ಗಳಲ್ಲಿ ಏಳು ಶೇಕಡ ಬಡ್ಡಿದರದಲ್ಲಿ ನೀವು ಸಾಲವನ್ನು ಪಡೆಯುವುದಕ್ಕೆ ನಿಮ್ಮ ಲ್ಯಾಂಡ್ ಎ ಖಾತಾ ಆಗಿರಬೇಕು ಅಥವಾ ಸಿಟಿ ಏರಿಯಾದಲ್ಲಿ ಇರಬೇಕು. ಆಗ ನಿಮಗೆ ಈ ಕೆಟಗರಿಯಲ್ಲಿ ಸಾಲ ಸಿಗುತ್ತದೆ ಎರಡನೆಯದಾಗಿ ನಿಮ್ಮ ಎಲಿಜಿಬಿಲಿಟಿ ಅದರಲ್ಲಿ ನೀವು ಸರ್ಕಾರಿ ನೌಕರರಾಗಿದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ.

ಇನ್ನು ಎರಡನೆಯದಾಗಿ ನೀವು ಖಾಸಗಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಲವತ್ತರಿಂದ ಐವತ್ತು ಸಾವಿರ ರೂಪಾಯಿ ಸಂಬಳ ನಿಮಗೆ ಸಿಗುತ್ತಿದ್ದರೆ ಜೊತೆಗೆ ನಿಮ್ಮ ಸಿಬಿಲ್ ಸ್ಕೋರ್ ಏಳು ನೂರರಿಂದ ಏಳು ನೂರಾ ಐವತ್ತರ ಮೇಲಿರಬೇಕು. ಸಾಲ ಪಡೆಯುವಾಗ ಬೇಕಾಗುವ ಇತರ ದಾಖಲೆಗಳ ಜೊತೆಗೆ ಸ್ಯಾಲರಿ ಸ್ಲಿಪ್ ಕೂಡ ಮುಖ್ಯವಾಗಿ ಬೇಕಾಗುತ್ತದೆ.

ಒಂದು ವೇಳೆ ನೀವು ನಿಮ್ಮದೇ ಆದ ಒಂದು ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಮೂರು ವರ್ಷಗಳ ಐಟಿ ರಿಟರ್ನ್ ಕಾಫಿ ಬೇಕಾಗುತ್ತದೆ ಜೊತೆಗೆ ಉದ್ಯಮವೂ ಕೂಡ ಚೆನ್ನಾಗಿ ನಡೆಯುತ್ತಿರಬೇಕು. ಈ ರೀತಿಯ ಅರ್ಹತೆ ಗಳಿದ್ದಾಗ ಮಾತ್ರ ನಿಮಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಇನ್ನು ನೀವು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲವನ್ನ ಪಡೆಯುತ್ತಿದ್ದರೆ ಅಲ್ಲಿ ಏ ಕಾತಾ ಆಗಿರಬೇಕು ಎಂಬುದಿರುವುದಿಲ್ಲ.

ಇಲ್ಲಿ ನಿಮಗೆ ಅಷ್ಟೇ ಸಂಬಳ ಇರಬೇಕು ಎಷ್ಟೇ ಸಂಬಳ ಇರಬೇಕು ಎಂಬುದಿರುವುದಿಲ್ಲ ಅದರೆ ಇಲ್ಲಿ ಮುಖ್ಯವಾಗಿ ನೋಡುವಂತದ್ದು ನಿಮ್ಮ ಸಿಬಿಲ್ ಸ್ಕೋರ್ ಏಳು ನೂರಾ ಐವತ್ತರಿಂದ ಏಳು ನೂರಾ ಎಂಬತ್ತರವರೆಗೆ ಇರಬೇಕು. ಜೊತೆಗೆ ನೀವು ಜಾಯಿಂಟ್ ಅಕೌಂಟ್ ನಲ್ಲಿ ಸಾಲ ಮಾಡುವುದು ತುಂಬಾ ಉತ್ತಮ. ಇಲ್ಲಿ ಕೂಡ ಸಾಲವನ್ನ ಪಡೆಯುವುದಕ್ಕೆ ಸಾಲರಿ ಸ್ಲಿಪ್ ಗಳು ಅಗತ್ಯವಾಗಿ ಬೇಕಾಗುತ್ತದೆ.

ಇನ್ನು ಸಂಬಳ ಕಡಿಮೆ ಇದೆ ಸಿಬಿಲ್ ಸ್ಕೋರ್ ಕೂಡ ತುಂಬಾ ಕಡಿಮೆ ಇದೆ ಎಂದಾಗ ಕೋಪರೇಟಿವ್ ಬ್ಯಾಂಕ್ ಗಳು ಸಣ್ಣ ಫೈನಾನ್ಸ್ ಬ್ಯಾಂಕ್ ಗಳು ಜೊತೆಯಲ್ಲಿ ಫೈನಾನ್ಸ್ ಕಂಪನಿಗಳು ಇವುಗಳಿಗೆ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು ಇವುಗಳಲ್ಲಿ ಜಾಗಕ್ಕೆ ಸಂಬಂಧಿಸಿದಂತೆ ಎ ಖಾತೆ ಆಗಿರಬೇಕು ಬಿ ಖಾತೆ ಆಗಿರಬೇಕು ಅಂಬ ಯಾವುದೇ ನಿಯಮಗಳು ಇರುವುದಿಲ್ಲ. ಇಲ್ಲಿ ಸಂಬಳ ಕೂಡ ಅಷ್ಟೇ ಇರಬೇಕು ಇಷ್ಟ ಇರಬೇಕು ಎಂಬ ಯಾವುದೇ ನಿಯಮ ಇರುವುದಿಲ್ಲ

ಇಲ್ಲಿ ನಿಮಗೆ ಹದಿನಾಲ್ಕು ಶೇಕಡಾ ಬಡ್ಡಿದರದವರೆಗೆ ಸಾಲ ದೊರೆಯುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸ್ಯಾಲರಿ ಸ್ಲಿಪ್ ಗಳು ಅಥವಾ ಇನ್ಕಮ್ ಟ್ಯಾಕ್ಸ್ ರಿಟರ್ನ್ ಹಾಗೂ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇನ್ನು ಮನೆ ಸಾಲವನ್ನು ತೆಗೆದುಕೊಳ್ಳುವಾಗ ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಎಷ್ಟು ಖರ್ಚು ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಬಳಿ ಹೋದಾಗ ಅಲ್ಲಿ ವೆಚ್ಚ ಸ್ವಲ್ಪ ಕಡಿಮೆ ಇರುತ್ತದೆ. ಅಲ್ಲಿ ಬರುವಂತದ್ದು ಪ್ರೊಸೆಸಿಂಗ್ ಫೀ ಇನ್ಸೂರೆನ್ಸ್ ಫೀ ಲೀಗಲ್ ಫೀ. ನೀವು ಹತ್ತು ಲಕ್ಷ ಸಾಲ ತೆಗೆಯುತ್ತೀರಿ ಎಂದರೆ ಪ್ರೋಸಸಿಂಗ್ ಫೀ ನಿಮಗೆ ಐದರಿಂದ ಆರು ಸಾವಿರ ಬರುತ್ತದೆ. ಲೀಗಲ್ ಫೀ ಕೂಡ ಐದರಿಂದ ಆರು ಸಾವಿರ ಬರುತ್ತದೆ ಇನ್ಸೂರೆನ್ಸ್ ಫೀ ಮೂರರಿಂದ ನಾಲ್ಕು ಸಾವಿರ ಖರ್ಚು ಬರುತ್ತದೆ.

ಒಟ್ಟಾರೆಯಾಗಿ ನೀವು ಮನೆ ಸಾಲವನ್ನು ಪಡೆದುಕೊಳ್ಳುವಾಗ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಕರ್ಚನ್ನು ಮಾಡಲೇಬೇಕಾಗುತ್ತದೆ. ಇನ್ನು ಖಾಸಗಿ ಬ್ಯಾಂಕುಗಳಲ್ಲಿ ಈ ಮೇಲಿನ ಖರ್ಚುಗಳ ಜೊತೆಯಲ್ಲಿ ಸೈಟ್ ಇನ್ಸ್ಪೆಕ್ಷನ್ ಇನ್ನು ಬೇರೆ ರೀತಿಯ ಖರ್ಚುಗಳು ಬರುತ್ತದೆ. ಇಲ್ಲಿ ನೀವು ಇಪ್ಪತ್ತೈದು ಸಾವಿರದಿಂದ ಮುವತ್ತು ಸಾವಿರದವರೆಗೂ ಖರ್ಚುಗಳನ್ನು ಮಾಡಬೇಕಾಗುತ್ತದೆ. ಈ ರೀತಿಯಾಗಿ ಸಾಲ ತೆಗೆದುಕೊಳ್ಳುವಾಗ ಸ್ವಲ್ಪ ಖರ್ಚನ್ನು ಕೂಡ ನೀವು ಮಾಡಬೇಕಾಗುತ್ತದೆ.

ಈ ರೀತಿಯಾಗಿ ನೀವು ಮನೆ ಕಟ್ಟುವಾಗ ಬೇರೆಬೇರೆ ಬಡ್ಡಿದರದಲ್ಲಿ ಸಾಲವನ್ನು ತೆಗೆದುಕೊಳ್ಳುವುದರ ಜೊತೆಗೆ ಸಾಲಕ್ಕಾಗಿ ಸ್ವಲ್ಪ ಖರ್ಚನ್ನು ಮಾಡಿ ಸಾಲವನ್ನು ಪಡೆದುಕೊಂಡು ಸುಂದರವಾದ ಮನೆಯನ್ನು ನಿರ್ಮಿಸಿಕೊಳ್ಳಬಹುದು ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗು ತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!