ನಾವಿಂದು ನಿಮಗೆ ಭಾರತದಲ್ಲಿ ಇರುವ ಪೊಲೀಸ್ ಬಾಡಿ ಬಿಲ್ಡರ್ ಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ಅವರನ್ನು ನೋಡಿದರೆ ನೀವು ಭಾರತದಲ್ಲಿ ಇಂತಹ ಬಾಡಿ ಬಿಲ್ಡರ್ಸ್ ಇದ್ದಾರಾ ಎಂದು ಆಶ್ಚರ್ಯ ಪಡುತ್ತೀರಿ. ಕೇವಲ ಸಿನಿಮಾ ಜೀವನದಲ್ಲಿ ಮಾತ್ರ ಪೊಲೀಸ್ ಬಾಡಿ ಬಿಲ್ಡರ್ ಗಳು ಇರುವುದಿಲ್ಲ ನಿಜಜೀವನದಲ್ಲೂ ಇದ್ದಾರೆ ಹಾಗಾದರೆ ಬಾಡಿ ಬಿಲ್ಡ್ ಮಾಡಿರುವಂತಹ ಪೊಲೀಸ್ ಅಧಿಕಾರಿಗಳು ಯಾರು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾವು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಮೋತಿಲಾಲ್ ದಯಾಮ್ ಇವರು ಮಧ್ಯಪ್ರದೇಶಕ್ಕೆ ಸೇರಿದ ಕೇವಲ ಇಪ್ಪತ್ತೇಳು ವರ್ಷದ ಪೊಲೀಸ್ ಆಫೀಸರ್ ಇವರು ಇಂದೋರ್ ಗೆಸೇರಿದ ಪೊಲೀಸ್ ಕಾನ್ಸ್ಟೇಬಲ್ ಇವರು ತಮ್ಮ ಚಿಕ್ಕ ವಯಸ್ಸಿನಿಂದ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಾರೆ. ಅದೇ ರೀತಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕುಬಾರಿ ಮಿಸ್ಟರ್ ಇಂದೋರ್ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅದೇರೀತಿ ಎರಡು ಸಾವಿರದ ಹದಿನಾಲ್ಕರಲ್ಲಿ ಮಿಸ್ಟರ್ ಮಧ್ಯಪ್ರದೇಶ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.
ಅದೇ ರೀತಿ ಎರಡು ಸಾವಿರದ ಹದಿನೈದರಲ್ಲಿ ಬೆಸ್ಟ್ ಮಸಲ್ಸ್ ಮ್ಯಾನ್ ಎನ್ನುವ ಸ್ಥಾನವನ್ನು ಪಡೆದಿದ್ದಾರೆ. ಅದೇ ರೀತಿ ಎರಡು ಸಾವಿರದ ಹದಿನಾಲ್ಕರಲ್ಲಿ ನಡೆದ ಮಿಸ್ಟರ್ ಇಂಡಿಯಾದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ ಮಿಸ್ಟರ್ ಇಂಡಿಯಾದಲ್ಲಿ ಮೊದಲ ಸ್ಥಾನವನ್ನು ಪಡೆಯಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. ಇವರ ಸ್ನೇಹಿತರು ಇವರನ್ನ ಅರ್ನಾಲ್ಡ್ ಎಂದು ಕರೆಯುತ್ತಾರೆ. ನೂರು ಕೆಜಿ ತೂಕ ಎತ್ತುವ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಮೇಡಲ್ ಅನ್ನ ಗಳಿಸಬೇಕು ಎನ್ನುವುದು ಇವರ ಆಸೆಯಾಗಿದೆ.
ಅದಕ್ಕಾಗಿ ತುಂಬಾ ಪ್ರಯತ್ನಿಸುತ್ತಿದ್ದಾರೆ ಆದರೆ ಇವರ ಕಾನ್ಸ್ಟೇಬಲ್ ಹುದ್ದೆ ಯಿಂದ ಬರುವ ಸಂಬಳ ಅದಕ್ಕೆ ಸಾಲುತ್ತಿಲ್ಲ ಏಕೆಂದರೆ ಇವರು ಫಿಟ್ನೆಸ್ ಗಾಗಿ ಪ್ರತಿ ತಿಂಗಳು ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಖರ್ಚಾಗುತ್ತದಂತೆ. ಇವರ ಪ್ರತಿದಿನದ ಆಹಾರ ಇಪ್ಪತ್ತರಿಂದ ಮುವತ್ತು ಮೊಟ್ಟೆ ನಾಲ್ಕು ಕೆಜಿ ಚಿಕನ್ ನಾಲ್ಕು ಲೀಟರ್ ಹಾಲು ಅದೇ ರೀತಿ ವಾರಕ್ಕೆ ಹದಿನಾರು ಕೆಜಿ ಹಣ್ಣುಗಳನ್ನು ತಿನ್ನುತ್ತಾರೆ. ಇವರ ಫಿಟ್ನೆಸ್ ವೆಚ್ಚವನ್ನು ಅವರ ಮೇಲಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರಂತೆ.
ಇನ್ನೊಬ್ಬರು ರುಬಲ್ ಧಂಕರ್ ಇವರು ಡೆಲ್ಲಿಗೆ ಸೇರಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್. ಇವರು ಕೇವಲ ಹೆಡ್ ಕಾನ್ಸ್ಟೇಬಲ್ ಮಾತ್ರವಲ್ಲ ಬಾಡಿಬಿಲ್ಡರ್, ಫಿಟ್ನೆಸ್ ಟ್ರೈನರ್ ಅದೇ ರೀತಿ ಕಂಟೆಂಟ್ ಕ್ರಿಯೇಟರ್ ಕೂಡ ಹೌದು. ಇವರು ಪ್ರತಿದಿನ ಪೊಲೀಸ್ ಕೆಲಸವನ್ನು ಮುಗಿಸಿ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಇವರು ಎಂ ಟಿವಿಯ ರೋಡೀಸ್ ಸೀಸನ್ ಹದಿನಾಲ್ಕರಲ್ಲಿಯೂ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಿಂದ ಇವರು ದೇಶದಾದ್ಯಂತ ಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಅನೇಕ ಜನರು ಹಿಂಬಾಲಿಸುತ್ತಾರೆ. ಇವರು ಯೂಟ್ಯೂಬ್ನಲ್ಲಿ ತಮ್ಮದೇ ಚಾನೆಲ್ ಮಾಡಿಕೊಂಡು ಫಿಟ್ನೆಸ್ ಗೆ ಸಂಬಂಧಿಸಿದಂತೆ ಅಲ್ಲಿ ವಿಡಿಯೋ ಮಾಡಿ ಹಾಕುತ್ತಾರೆ.
ಇನ್ನೊಬ್ಬರು ಸಚಿನ್ ಅತುಲ್ಕರ್ ಇವರು ಒಬ್ಬ ಐಪಿಎಸ್ ಅಧಿಕಾರಿ ತುಂಬಾ ಚಿಕ್ಕ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿ ಆಗಿರುವವರಲ್ಲಿ ಇವರು ಕೂಡ ಒಬ್ಬರು. ಇವರು ಐಪಿಎಸ್ ಅಧಿಕಾರಿ ಆಗುವಾಗ ಇವರ ವಯಸ್ಸು ಕೇವಲ ಇಪ್ಪತ್ತೆರಡು ಮಾತ್ರ. ಚಿಕ್ಕವಯಸ್ಸಿನಲ್ಲಿಯೇ ಐಪಿಎಸ್ ಅಧಿಕಾರಿಯಾದ ಇವರು ಅನೇಕ ಜನರಿಗೆ ಸ್ಫೂರ್ತಿ ಮತ್ತು ಆದರ್ಶಪ್ರಾಯರಾಗಿದ್ದಾರೆ. ಬಾಡಿ ಬಿಲ್ಡ್ ಮಾಡುವುದು ಇವರಿಗೆ ಇಷ್ಟವಂತೆ ಹಾಗಾಗಿ ಐಪಿಎಸ್ ಅಧಿಕಾರಿ ಆದ ನಂತರವು ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಿದ್ದಾರೆ.
ಈಗ ಇವರ ವಯಸ್ಸು ಮೂವತ್ತಾರು ಇವರಿಗೆ ಕ್ರಿಕೆಟ್ ಮತ್ತು ಕುದುರೆ ಸವಾರಿ ಎಂದರೆ ತುಂಬಾ ಇಷ್ಟವಂತೆ ಕುದುರೆ ಸವಾರಿಯಲ್ಲಿ ಇವರು ಬಂಗಾರದ ಪದಕವನ್ನು ಕೂಡ ಗೆದ್ದಿದ್ದಾರೆ. ಬಾಡಿ ಬಿಲ್ಡಿಂಗ್ ಗಾಗಿ ಕೂಡ ತುಂಬಾ ಪದಕಗಳನ್ನು ಗೆದ್ದಿದ್ದಾರೆ. ಅದೇ ರೀತಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ.
ಕಿಶೋರ್ ಡಾಂಗೆ ಇವರು ಮಹಾರಾಷ್ಟ್ರಕ್ಕೆ ಸೇರಿರುವ ಪೊಲೀಸ್ ಅಧಿಕಾರಿ ಇವರು ಬಾಡಿ ಬಿಲ್ಡಿಂಗ್ ಗಾಗಿ ಭಾರತದಾದ್ಯಂತ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ಬಾಡಿಬಿಲ್ಡಿಂಗ್ ಅನ್ನು ಫ್ಯಾಶನ್ ಆಗಿ ತೆಗೆದುಕೊಂಡಿದ್ದಾರೆ ಅದಕ್ಕಾಗಿ ತುಂಬಾ ಕಷ್ಟಪಟ್ಟು ವರ್ಕೌಟ್ ಮಾಡುತ್ತಾರೆ ಇವರು ತುಂಬಾ ಬಡ ಕುಟುಂಬದಲ್ಲಿ ಜನಿಸಿದವರು ನಂತರ ಮಹಾರಾಷ್ಟ್ರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸೇರಿಕೊಳ್ಳುತ್ತಾರ
ಕೆಲಸದಿಂದ ಬಂದ ಸಂಬಳದಿಂದ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಸಿಕ್ಕ ತಕ್ಷಣ ಇವರು ಬಾಡಿ ಬಿಲ್ಡ್ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅದೇ ರೀತಿ ಬಾಡಿಬಿಲ್ಡಿಂಗ್ ಅಲ್ಲಿ ಇವರಿಗೆ ತುಂಬಾ ಪದಕಗಳು ಕೂಡ ಬಂದಿದೆ ಅಮೆರಿಕದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ತೇಜಿಂದರ್ ಸಿಂಗ್ ಇವರು ಉತ್ತರಕಾಂಡ್ ಗೆ ಸೇರಿದ ಪೊಲೀಸ್ ಕಾನ್ಸ್ಟೇಬಲ್ ಇವರಿಗೆ ಚಿಕ್ಕವಯಸ್ಸಿನಿಂದ ಇರುವುದು ಒಂದೇ ಆಸೆ ತಾನೊಬ್ಬ ದೊಡ್ಡ ಬಾಡಿಬಿಲ್ಡರ್ ಆಗಬೇಕು ಎನ್ನುವುದು. ಇವರು ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರುವುದಕ್ಕಿಂತ ಮೊದಲೇ ಬಾಡಿಬಿಲ್ಡಿಂಗ್ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಎರಡು ಸಾವಿರದ ಹನ್ನೊಂದರಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿ ಐದನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ಎರಡು ಸಾವಿರದ ಹದಿಮೂರರಲ್ಲಿ ಲಂಡನ್ ನಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಗೆ ಆಯ್ಕೆಯಾಗಿ ಅಲ್ಲಿ ಕಂಚಿನ ಪದಕವನ್ನು ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ಕೊಳ್ಳುತ್ತಾರೆ ಜೊತೆಗೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಸಿಟಿ ಪೊಲೀಸ್ ಆಫ್ ದಿ ಇಯರ್ ಎನ್ನುವ ಪಟ್ಟವನ್ನು ಪಡೆದುಕೊಳ್ಳುತ್ತಾರೆ.
ಅಮಿತ್ ಚೇತ್ರಿ ಇವರು ಉತ್ತರಕಂಡ್ ಗೆಸೇರಿದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇವೆಗೆ ಸೇರುವುದಕ್ಕಿಂತ ಮೊದಲೇ ಬಾಡಿಬಿಲ್ಡಿಂಗ್ ಮಾಡುವುದರಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಕೆಲಸಕ್ಕೆ ಸೇರಿದ ನಂತರ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಇವರು ಕೂಡ ಬಾಡಿಬಿಲ್ಡಿಂಗ್ ಗಾಗಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ಎರಡು ಸಾವಿರದ ಏಳರಲ್ಲಿ ನಡೆದ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಗೆದ್ದಿದ್ದಾರೆ.
ಎರಡು ಸಾವಿರದ ಹನ್ನೆರಡರಲ್ಲಿ ಬೆಳ್ಳಿ ಪದಕವನ್ನು ಎರಡು ಸಾವಿರದ ಹದಿಮೂರರಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟವನ್ನು ಎರಡು ಸಾವಿರದ ಹದಿನಾರರಲ್ಲಿ ಮಿಸ್ಟರ್ ಇಂಡಿಯಾ ಕೂಡ ಆಗಿದ್ದಾರೆ. ಇದು ಭಾರತದಲ್ಲಿರುವ ಬಾಡಿ ಬಿಲ್ಡ್ ಮಾಡಿರುವ ಪೊಲೀಸ್ ಅಧಿಕಾರಿಗಳ ಮಾಹಿತಿಯಾಗಿದೇ.