ಹೆಚ್ಚು ನಿಯತ್ತಾಗಿರುವ ಪ್ರಾಣಿಯೆಂದರೆ ಶ್ವಾನ ಮನುಷ್ಯನಿಗೂ ನಾಯಿಗೂ ಅನಾದಿಕಾಲದಿಂದಲೂ ನಂಟು ತಪ್ಪಿದ್ದಲ್ಲ ನಾಯಿಗಳು ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ರೀತಿ ಬೇರೆ ಯಾವ ಪ್ರಾಣಿಯೂ ಮಾಡಿಕೊಳ್ಳುವುದಿಲ್ಲ ನಾಯಿ ತನಗೆ ಊಟ ಹಾಕಿದ ಒಡೆಯನಿಗೆ ಎಂದಿಗೂ ಮೊಸ ಮಾಡದ ಪ್ರಾಣಿಯಾಗಿದೆ ಮನೇಲಿ ಒಂದು ನಾಯಿ ಇದ್ರೆ ಮನೆ ಕಾಯತ್ತದೆ

ಚಿಕ್ಕ ಮಕ್ಕಳಿಗೆ ಆಟಕ್ಕೆ ಜೊತೆ ಆಗುತ್ತದೆ ಚಿಕ್ಕ ಚಿಕ್ಕ ಕೆಲಸ ಮಾಡುತ್ತದೆ ಪ್ರೀತಿಯಿಂದ ಕುಟುಂಬದಲ್ಲಿ ಒಂದಾಗಿ ತನ್ನ ಜೀವನ ಪೂರ್ತಿ ಬದುಕತ್ತದೆ ಇಂಥಾ ಒಂದು ನಾಯಿಯ ತಳಿಯಲ್ಲಿ ಮುಧೋಳ ನಾಯಿಯು ಒಂದು ಭಾರತೀಯ ಸೈನ್ಯದಲ್ಲಿ ಸ್ಥಾನ ಪಡೆದ ಮೊದಲ ದೇಶೀಯ ಶ್ವಾನದ ಪಟ್ಟಿ ಯಲ್ಲಿ ಮುದೋಳ ಶ್ವಾನ ಮೊದಲ ಸ್ಥಾನವನ್ನು ಗಳಿಸಿದೆ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಶ್ವಾನವನ್ನು ಬಾಗಲಕೋಟೆ ಜಿಲ್ಲೆಯ ಮುದೊಳದಲ್ಲಿ ಹೆಚ್ಚಾಗಿ ಸಾಕುತ್ತಾರೆ ನಾವು ಈ ಲೇಖನದ ಮೂಲಕ ಮುದೊಳ ಶ್ವಾನದ ಬಗ್ಗೆ ತಿಳಿದುಕೊಳ್ಳೋಣ.

ಮನುಷ್ಯನ ಜೊತೆ ಭಾವನಾತ್ಮಕ ಸಂಭಂದ ಹೊಂದಿದ ಪ್ರಾಣಿಯೆಂದರೆ ಶ್ವಾನ ಹಾಗೂ ಭಾರತೀಯ ಸೈನ್ಯದಲ್ಲಿ ಶ್ವಾನ ವನ್ನು ಸಾಕುತ್ತಾರೆ .ಶತ್ರುಗಳನ್ನು ಹುಡುಕುವ ಪ್ರಾಣಿಯೇ ಶ್ವಾನವಾಗಿದೆ ಶ್ವಾನಗಳು ಒಂದು ಬಾರಿ ಬೇಟೆಗೆ ನಿಂತರೆ ಎಸ್ಟೇ ಚತುರರಾದ ಶತ್ರುಗಳು ಇದ್ದರು ಶ್ವಾನದ ದಾಳಿಗೆ ಬಲಿಯಾಗುತ್ತಾರೆ ಅದರಲ್ಲಿ ಮುದೊಳ ಶ್ವಾನ ಕರ್ನಾಟಕ ರಾಜ್ಯದ ಹೆಸರನ್ನು ದೇಶದಾದ್ಯಂತ ಪರಿಸುವ ಖ್ಯಾತಿ ಈ ಶ್ವಾನದಿಂದ ಆಗಿದೆ ಭಾರತೀಯ ಸೈನ್ಯದಲ್ಲಿ ಸ್ಥಾನ ಪಡೆದ ಮೊದಲ ದೇಶೀಯ ಶ್ವಾನದ ಪಟ್ಟಿ ಯಲ್ಲಿ ಮುದೋಳ ಶ್ವಾನ ಮೊದಲ ಸ್ಥಾನವನ್ನು ಗಳಿಸಿದೆ ಹೆಗ್ಗಳಿಕೆಗೆ ಪಾತ್ರವಾಗಿದೆ

ಈ ಶ್ವಾನವನ್ನು ಬಾಗಲಕೋಟೆ ಜಿಲ್ಲೆಯ ಮುದೊಳದಲ್ಲಿ ಹೆಚ್ಚಾಗಿ ಸಾಕುತ್ತಾರೆ ತುಂಬಾ ಜನ ಮುದೊಳ ಶ್ವಾನದ ಮೂಲ ಬಾಗಲಕೋಟೆ ಎಂದು ತಿಳಿದು ಕೊಂಡಿರುತ್ತಾರೆ ಆದರೆ ಈ ಶ್ವಾನದ ಮೂಲ ಮಧ್ಯ ಏಷಿಯಾ ಮತ್ತು ಅರೇಬಿಯಾದಿಂದ ವಲಸೆ ಬಂದ ಜನ ಮಹಾರಾಷ್ಟ್ರ ಕರ್ನಾಟಕ ದಲ್ಲಿ ನೆಲೆಸಿದ್ದರು ಆದರೆ ಅವರೊಂದಿಗೆ ಬಂದ ಸಲುಕಿ ತಳಿಯ ಶ್ವಾನಗಳು ದೇಶೀಯ ಶ್ವಾನಗಳೊಂದಿಗೆ ಸಮ್ಮಿಲನಗೊಂಡು ಮೂದೊಳ ತಳಿಗಳು ಜನಿಸಿದವು.

ಬೇಟೆಗೆ ಅತ್ಯಂತ ಚುರುಕಾದ ಈ ಶ್ವಾನವನ್ನು ಹಲಗಲಿಯ ಬೇಡರು ಸಾಕಿ ಉಪಯೋಗಿಸುತ್ತಿದ್ದರು ಈ ಶ್ವಾನದ ಬೇಟೆಯ ವೇಗವನ್ನು ನೋಡಿ ಮುದೊಳದ ಮಾಲೋಜಿರಾವ್ ಗೋರ್ಪಡೆ ಯವಾರು ತನ್ನ ಆಸ್ಥಾನದಲ್ಲಿ ಈ ಶ್ವಾನವನ್ನು ಸಾಕ ತೊಡಗಿದರು ಮತ್ತು ಆಸ್ತಿ ಕಾವಲಿಗಾಗಿ ಈ ಶ್ವಾನವನ್ನು ಸಾಕಿದರು ಎಂದು ಇತಿಹಾಸದಲ್ಲಿ ಹೇಳಲಾಗಿದೆ ಹಾಗೆಯೇ ಗೊರ್ಪಡೆ ಇಂಗ್ಲೆಂಡ್ ದೊರೆ ಐದನೇ ಚಾರ್ಜ್ ಗೆ ಈ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು ಅಂದಿನಿಂದ ಈ ಶ್ವಾನ ಪ್ರಸಿದ್ದಿ ಪಡೆಯಿತು

ಹಾಗೆಯೇ ಶಿವಾಜಿ ಮಹಾರಾಜ ಅವರು ಸಹ ಈ ಶ್ವಾನವನ್ನು ಸೈನ್ಯದಲ್ಲಿ ಇರಿಸಿದ್ದರು ಮತ್ತು ಈ ಶ್ವಾನಕ್ಕೆ ಸಮರವೀರ ಎಂಬ ಹೆಸರನ್ನು ಶಿವಾಜಿ ಇಟ್ಟಿದ್ದರು ಮರಾಠರು ಮೊಘಲರ ವಿರುದ್ದ ಯುದ್ದ ಮಾಡಲು ಮತ್ತು ಗೆರಿಲ್ಲಾ ಯುದ್ದ ಮಾಡಲು ಈ ಶ್ವಾನವನ್ನು ಉಪಯೋಗಿಸುತ್ತಿದ್ದರು ಶಿವಾಜಿಯ ಮೊಮ್ಮಾಮಗ ಸಾಹು ಮಹಾರಾಜರು ದಂಡಯಾತ್ರೆ ಸಮಯದಲ್ಲಿ ಹುಲಿ ದಾಳಿಗೆ ಒಳಗಾದಾಗ ಮುದೊಲ ಶ್ವಾನಗಳು ಸಾಹು ಮಹಾರಾಜನನ್ನು ರಕ್ಷಿಸಿದ್ದವು.

ರಣಬೇಟೆಗಾರ ಎಂದೇ ಪ್ರಸಿದ್ಧರಾಗಿರುವ ಮುದೊಳ ಶ್ವಾನಕ್ಕೆ ಭಾರತೀಯ ಸೈನ್ಯದಲ್ಲಿ ಈ ಶ್ವಾನವನ್ನು ಸೇರಿಸಿಕೊಳ್ಳಲು ಹಲವಾರು ಕಾರಣಗಳು ಇದೆ ಅದೇನೆಂದರೆ ತೀಕ್ಷ್ಣವಾದ ಕಣ್ಣುಹೊಂದಿದೆ ಹಾಗೂ ಜಿರತೆಯ ವೇಗವನ್ನು ಹೊಂದಿರುತ್ತದೆ ತೆಳುವಾದ ಚಪ್ಪಟೆ ತಲೆ ಅಗಲವಾದ ಕಾಲುಮತ್ತು ತೆಳ್ಳನೆಯ ದೇಹ ಚೂಪಾದ ಬಾಯಿ ಹಾಗೆಯೇ ಸಣ್ಣ ಮತ್ತು ಉದ್ದನೆಯ ಬಾಲ ಹೊಂದಿರುವ ಪ್ರಾಣಿ ಇದಾಗಿದೆ ಹಾಗೆಯೇ ಮುದೊಳ ಶ್ವಾನಗಳು ಬಿಳಿ ಕಂದು ಬಣ್ಣದಲ್ಲಿ ಇರುತ್ತದೆ ಹದಿಮೂರರಿಂದ ಹದಿನಾಲ್ಕು ವರ್ಷ ಬದುಕುತ್ತದೆ.

ಇನ್ನೂರ ಎಪ್ಪತ್ತು ಡಿಗ್ರಿಯಸ್ಟು ಸೂಕ್ಷ್ಮವಾದ ದೃಷ್ಟಿ ಇರುತ್ತದೆ ಈ ಶ್ವಾನ ಯಾವುದೇ ವಸ್ತು ವಾನ್ನು ಹುಡುಕಲು ಮೂಗಿನ ವಾಸನೆ ಮೂಲಕ ಹುಡುಕದೆ ತನ್ನ ಕಣ್ಣಿನ ಮೂಲಕ ಹುಡುಕುತ್ತದೆ ವಿದೇಶಿ ಶ್ವಾನ ಗಳು ಒಂದು ವಸ್ತುವನ್ನು ಹುಡುಕಲು ತೊಂಬತ್ತು ಸೆಕೆಂಡ್ ಕಾಲಾವಕಾಶ ತೆಗೆದುಕೊಂಡರೆ ಈ ಮುದೊಳ ಶ್ವಾನ ನಲವತ್ತು ಸೆಕೆಂಡ್ ನಲ್ಲಿ ಹುಡುಕುತ್ತದೆ ಈ ಶ್ವಾನದ ವಿಶೇಷತೆ ಎಂದರೆ ರೋಗ ಬರುವುದು ಕಡಿಮೆ ಇರುತ್ತದೆ ಹಾಗೆಯೇ ಈ ಮುದೊಳ ಶ್ವಾನ ಸಾಕಲು ಹೆಚ್ಚಿನ ಹಣ ಬೇಕಾಗುವುದಿಲ್ಲ ಮೇಳೆತ್ತರಕ್ಕೆ ಹಾರಡುವ ಸಾಮರ್ಥ್ಯವನ್ನು ಹೊಂದಿದೆ .

ವಿಶೇಷ ನೆನಪಿನ ಶಕ್ತಿಯನ್ನು ಹೊಂದಿದೆ ಇವೆಲ್ಲ ಕಾರಣದಿಂದ ಎರಡು ಸಾವಿರದ ಹದಿನೈದನೇ ಇಸ್ವಿಯನ್ನು ಭಾರತೀಯ ಸೈನ್ಯದಲ್ಲಿ ಮುದೊಳ ಶ್ವಾನವನ್ನು ಆಯ್ಕೆ ಮಾಡಲಾಗಿದೆ ಭಾರತ ಸರ್ಕಾರ ಈ ಶ್ವಾನಗಳು ಗೌರವ ವನ್ನು ನೀಡಿದೆ ಎರಡು ಸಾವಿರದ ಹದಿನೇಳರ ಇಸ್ವಿಯಲ್ಲಿ ಗಣರಾಜ್ಯೋತ್ಸವ ದಲ್ಲಿ ಮುದಿಲ ಶ್ವಾನ ತಮ್ಮ ಪ್ರದರ್ಶನವನ್ನು ನೀಡಿದೆ ಭಾರಿಯ ಸೈನ್ಯದಲ್ಲಿ ಮುದೋಳ ನಾಯಿಗಳು ಮೀರತ್ ನಲ್ಲಿ ಬಾಂ ಬ್ ಪತ್ತೆ ಹಚ್ಚುವುದು ಮತ್ತು ಪತ್ತೆ ದಾರಿ ಚಟುವಟಿಕೆ ಹಾಗೂ ರಕ್ಷಣೆ ನೀಡುವಿಕೆ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಒಂದು ಬಾರಿ ಬೇಟೆಗೆ ಇಳಿದರೆ ಒಂದು ತಾನು ಸಾಯಬೇಕು ಇಲ್ಲವೇ ಎದುರಾಳಿ ಸಾಯಬೇಕು ಅಲ್ಲಿಯವರೆಗೂ ಹೋರಾಡುತ್ತಲೇ ಇರುತ್ತವೆ ಈ ಶ್ವಾನ ಭಾರತೀಯ ಸೈನ್ಯದಲ್ಲಿ ಸೇರಿಕೊಂಡು ದೇಶ ಸೇವೆಯನ್ನು ಮಾಡುತ್ತಿದೆ ಇದು ಪ್ರತಿಯೊಬ್ಬ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಇಷ್ಟೇಲ್ಲಾ ಗುಣಗಳನ್ನು ಈ ಶ್ವಾನ ಹೊಂದಿದೆ.

Leave a Reply

Your email address will not be published. Required fields are marked *