ಪೇರಳೆ ಹಣ್ಣು ಹೆಚ್ಚಾಗಿ ವರ್ಷವಿಡಿ ನಮಗೆ ಲಭ್ಯವಾಗುವಂತಹ ಹಣ್ಣು ಹಾಗೂ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಸಿಗುತ್ತದೆ ಪೇರಳೆ ಹಣ್ಣನ್ನು ಸೇವನೆ ಮಾಡುದರಿಂದ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು ಹಿಂದಿನ ಕಾಲದಿಂದಲೂ ಪೇರಳೆ ಜೊತೆ ಅದರ ಎಲೆಗಳನ್ನು ಜ್ವರ ಮತ್ತು ಉರಿಯೂತ ಕಡಿಮೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ.
ಇದು ಮಧುಮೇಹ ನಿರ್ವಹಣೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ದಲ್ಲಿ ಇರುತ್ತದೆರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಾಪಾಡುವ ಜತೆಗೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.ನಾವು ಈ ಲೇಖನದ ಮೂಲಕ ಪೇರಳೆ ಎಳೆಯ ಉಪಯೋಗವನ್ನು ತಿಳಿದುಕೊಳ್ಳೋಣ.
ಪೇರಳೆ ಹಣ್ಣನ್ನು ಚೇಪೆ ಹಣ್ಣು ಸೀಬೆ ಹಣ್ಣು ಎಂದು ಸಹ ಕರೆಯುತ್ತಾ ರೆ ಪೇರಳೆ ಎಲೆ ನಮ್ಮ ದೇಹದ ಶುಗರ್ ಅನ್ನು ನಿಯಂತ್ರಣ ಮಾಡುತ್ತದೆ ಡಯಾಬಿಟಿಸ್ ಇರುವ ವ್ಯಕ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಹಾಗೆಯೇ ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳೆಯರಿಗೆ ಋತಸ್ರಾವದಿಂದಾಗಿ ಹೊಟ್ಟೆಯಲ್ಲಿ ನೋವು ಕಂಡು ಬರುತ್ತದೆ ಆದರೆ ಪೇರಳೆ ಎಲೆಯಿಂದಾಗಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದು
ಪೇರಳೆ ಎಲೆಗೆ ನಾರಿನಂಶ ಜಾಸ್ತಿ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜಕಾರಿಯಾಗಿದೆ ದೇಹದಲ್ಲಿನ ಫ್ಯಾಟ್ ಕಡಿಮೆಯಾಗಲೂ ಸಹ ಉಪಯುಕ್ತ ವಾಗಿದೆ ಹಾಗೆಯೇ ಪೇರಳೆ ಎಲೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ ಮತ್ತು ಹಲ್ಲು ನೋವಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಜಾಸ್ತಿ ಹಲ್ಲು ನೋವು ಬಂದಾಗ ಪೇರಳೆ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಮುಕ್ಕಳಿಸುವ ಮೂಲಕ ಹಲ್ಲು ನೋವು ನಿವಾರಣೆಯಾಗುತ್ತದೆ
ಹಲ್ಲಿನ ಆರೋಗ್ಯಕ್ಕೂ ಹೆಚ್ಚು ಅನುಕೂಲಕರವಾಗಿರುತ್ತದೆ ಪೇರಳೆ ಎಲೆಯಲ್ಲಿ ವಿಟಮಿನ್ ಸಿ ಮತ್ತು ಬಿ ಅಂಶವಿರುತ್ತದೆ ಹೀಗಾಗಿ ಕೂದಲಿನ ಉದುರುವ ಮತ್ತು ತಲೆ ಕೂದಲಿನ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ ಬ್ಯಾಕ್ಟೀರಿಯಾ ದಿಂದ ಅದ ಇನ್ಸ್ಪೆಕ್ಷನ್ ಇದ್ದರು ಸಹ ಪೇರಳೆ ಎಲೆ ಬಳಕೆಯಿಂದ ಹೋಗಲಾಡಿಸಬಹುದು ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಬ್ಯಾಕ್ಟೀರಿಯಾ ನಿವಾರಕಗಳು ಹಾಗೂ ಉರಿಯೂತವನ್ನು ತಣಿಸುವ ಪೋಷಕಾಂಶಗಳಿವೆ.
ಮುಖ್ಯವಾಗಿ ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ರಾಸಾಯನಿಕ ನೈಸರ್ಗಿಕವಾದ ನೋವು ನಿವಾರಕವಾಗಿದೆ ಪೇರಳೆ ಹಣ್ಣಿನ ಎಲೆಗಳಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳಿಂದಾಗಿ ಇದು ತಲೆಬುರುಡೆಯನ್ನು ಆರೋಗ್ಯಕಾರಿ ಇಡುತ್ತದೆ ಪೇರಳೆ ಹಣ್ಣಿನ ಎಲೆಗಳಲ್ಲಿ ಒಳ್ಳೆಯ ಗುಣಮಟ್ಟದ ನೈಸರ್ಗಿಕ ಉರಿಯೂತ ಶಮನಕಾರಿ ನಂಜುನಿರೋಧಕ ಆಂಟಿಆಕ್ಸಿಡೆಂಡ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುತ್ತದೆ ಹೀಗೆ ಪೇರಳೆ ಎಲೆಯಿಂದ ಇಷ್ಟೆಲ್ಲಾ ಉಪಯೋಗಗಳು ಇರುತ್ತದೆ.