ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಿ ಗ್ರಾಮದ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಬಹುದಾಗಿದೆ. ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಫ್ರಾಂಚೈಸಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ
ಗ್ರಾಮ ಒನ್ ಫ್ರಾಂಚೈಸಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಕೊಡಗು, ಹಾವೇರಿ, ಬಳ್ಳಾರಿ, ಉಡುಪಿ, ತುಮಕೂರು, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಚಿಕ್ಕಮಗಳೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಿಂದ ಗ್ರಾಮ ಒನ್ ಫ್ರಾಂಚೈಸಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕರ್ನಾಟಕ ಒನ್ ಪೋರ್ಟಲ್ ಗೆ ಸಂಬಂಧಿಸಿದ ಅಫೀಷಿಯಲ್ ವೆಬ್ಸೈಟ್ ಓಪನ್ ಮಾಡಬೇಕು. ಪೇಜಿನಲ್ಲಿ ಕೆಳಗಡೆ ಅದರ ಪೇಜ್ ಎಂದು ಕಾಣಿಸುತ್ತದೆ ಅದರ ಕೆಳಗಡೆ ಗ್ರಾಮ ಒನ್ ಪ್ರಾಂಚೈಸಿ ರಿಜಿಸ್ಟ್ರೇಷನ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಗ್ರಾಮ ಒನ್ ಫ್ರಾಂಚೈಸಿ ಪಡೆಯಲು ಇರಬೇಕಾದ ಸೌಕರ್ಯದ ಬಗ್ಗೆ ಮಾಹಿತಿ ಕಾಣಿಸುತ್ತದೆ.
ಫ್ರಾಂಚೈಸಿ ಪಡೆದು ಗ್ರಾಮ ಒನ್ ಕೇಂದ್ರ ಸ್ಥಾಪಿಸಲು 100 ಅಡಿ ಜಾಗ ಹೊಂದಿರಬೇಕು. ಆಫೀಸ್ ನಲ್ಲಿ ಕೌಂಟರ್ ಇರಬೇಕು ಹಾಗೂ ಜನರು ಬಂದು ಕುಳಿತುಕೊಳ್ಳಲು 4 ಕುರ್ಚಿಗಳು ಇರಬೇಕು. ಗ್ರಾಮದ ಜನರಿಗೆ ಯಾವ ಯಾವ ಸೇವೆಗಳನ್ನು ನೀಡಲಾಗುತ್ತದೆ ಎಂಬುದರ ಪಟ್ಟಿ ಹಾಗೂ ದರ ಪಟ್ಟಿಯನ್ನು ಹಾಕಬೇಕಾಗುತ್ತದೆ. ಗ್ರಾಮ ಒನ್ ಕೇಂದ್ರದ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು. ಗ್ರಾಮ ಒನ್ ಕೇಂದ್ರದಲ್ಲಿ ಕೆಳಗಡೆ ಟೈಲ್ಸ್ ಹಾಗೂ ಮೇಲ್ಗಡೆ ಆರ್ ಸಿಸಿ ಹಾಕಿರಬೇಕು. ಗ್ರಾಮ ಒನ್ ಕೇಂದ್ರದಲ್ಲಿ ಉತ್ತಮ ಗಾಳಿ ಬೆಳಕು ವ್ಯವಸ್ಥಿತವಾಗಿರಬೇಕು. ಗ್ರಾಮ ಒನ್ ಕೇಂದ್ರದಲ್ಲಿ ಸಿಸಿಟಿವಿ ಹಾಗೂ ಎಲ್ ಸಿಡಿ ಟಿವಿ ಕಡ್ಡಾಯವಾಗಿ ಇರಬೇಕು.
ಗ್ರಾಮ ಒನ್ ಕೇಂದ್ರ ತೆರೆಯುವವರ ಹತ್ತಿರ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಇರಬೇಕು. ಪ್ರಿಂಟರ್, ಬಯೋಮೆಟ್ರಿಕ್ ಸ್ಕ್ಯಾನರ್, ವೆಬ್ ಕ್ಯಾಮೆರಾ, ವೈಫೈ ರಿಸೀವರ್ ಹೊಂದಿದವರು ಗ್ರಾಮ ಒನ್ ಕೇಂದ್ರ ತೆರೆಯಲು ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಬಹುದು. ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವವರಿಗೆ ಕೆಲವು ಅರ್ಹತೆಗಳು ಇರಬೇಕು. ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಪದವಿ ಓದಿರಬೇಕು. ಗ್ರಾಮ ಒನ್ ಕೇಂದ್ರ ಪ್ರಾರಂಭಿಸುವವರು ಒಂದರಿಂದ ಎರಡು ಲಕ್ಷ ರೂಪಾಯಿ ಬಂಡವಾಳ ಹಾಕಬೇಕು.
ಪೊಲೀಸ್ ತಪಾಸಣಾ ಪ್ರಮಾಣಪತ್ರವನ್ನು ಪಡೆದಿರಬೇಕು. ನಂತರ ಕೆಳಗಡೆ ಷರತ್ತು ಎಂದು ಇರುತ್ತದೆ ಅದನ್ನು ಓದಿ ಒಪ್ಪಿಗೆ ಇದ್ದಲ್ಲಿ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ರಿಜಿಸ್ಟರ್ ಅಥವಾ ನೋಂದಣಿ ಮಾಡಿ ಎಂಬ ಆಪ್ಶನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಹಾಕಿ ಮುಂದಗಡೆ ಇರುವ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ ನಂಬರ್ ಗೆ ಮತ್ತು ಇಮೇಲ್ ಐಡಿಗೆ ಓಟಿಪಿ ಬರುತ್ತದೆ.
ಓಟಿಪಿ ಹಾಕಿ ವ್ಯಾಲಿಡೇಟ್ ಓಟಿಪಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಹೆಸರು ಕಾಣಿಸುತ್ತದೆ ನಂತರ ಮೊಬೈಲ್ ನಂಬರ್, ಪಾನ್ ಕಾರ್ಡ್ ನಂಬರ್, ಡೇಟ್ ಆಫ್ ಬರ್ತ್ ಸೆಲೆಕ್ಟ್ ಮಾಡಿ ಎಜುಕೇಷನ್, ಅಡ್ರೆಸ್ ಹಾಕಿ ಫೋಟೋವನ್ನು ಅಪಲೋಡ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹಳ್ಳಿಯನ್ನು ಸೆಲೆಕ್ಟ್ ಮಾಡಬೇಕು. ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲು ಹೊಂದಿರುವ ಜಾಗದ ಬಗ್ಗೆ ವಿವರವನ್ನು ಹಾಕಬೇಕು.
ನಂತರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಕಂಪ್ಯೂಟರ್ ಕೋರ್ಸ್ ಮಾಡಿದ ಸರ್ಟಿಫಿಕೇಟ್ ಅಪ್ಲೋಡ್ ಮಾಡಬೇಕು. ನಂತರ ರಿಜಿಸ್ಟ್ರೇಷನ್ ಫೀಸ್ 100ರೂಪಾಯಿ ಆನ್ಲೈನ್ ಪೇಮೆಂಟ್ ಮಾಡಬೇಕು ಪೇಮೆಂಟ್ ಚಾರ್ಜ್ 10ರೂಪಾಯಿ ಒಟ್ಟು 110 ರೂಪಾಯಿ ತುಂಬಬೇಕು. ಪೇಮೆಂಟ್ ಮಾಡಿದ ರಿಸಿಪ್ಟ್ ಇಟ್ಟುಕೊಳ್ಳಬೇಕು. ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲು ಫ್ರಾಂಚೈಸಿಗಾಗಿ ನವೆಂಬರ್ 11 ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದರಿಂದ ಉಪಯೋಗವಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430