ಹೈನುಗಾರಿಕೆಯಲ್ಲಿ ಹೆಚ್ಚಾಗಿ ಕಂಡು ಬರುವ ಈ ಕಾಲುಬಾಯಿ ರೋಗ ಯಾಕೆ ಬರತ್ತೆ, ಇದಕ್ಕೆ ಪರಿಹಾರ

0 2

ಇಂದು ನಿಮಗೆ ಸಾಕುಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ರೋಗ ಎಂದರೇನು ಅದರಿಂದ ಯಾವ ಎಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಅದು ಬರದೇ ಇರುವ ಹಾಗೆ ಹೇಗೆ ನೋಡಿಕೊಳ್ಳಬೇಕು ಅವುಗಳಿಗೆ ಔಷಧಿ ಇದೆಯೇ ಇಲ್ಲವೇ ಬಂದರೆ ಏನು ಮಾಡಬೇಕು ಅದು ಬಂದಾಗ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ.

ಕಾಲುಬಾಯಿ ರೋಗ ಹೆಸರೇ ಹೇಳುವ ಹಾಗೆ ಬಾಯಿಯಲ್ಲಿ ಹುಣ್ಣಾಗುವಂತದ್ದು ನಾಲಿಗೆಯಲ್ಲಿ ಹುಣ್ಣಾಗುವಂತದ್ದು ಕಾಲಲ್ಲಿ ಗೇರಿಸಲುಗಳ ಮಧ್ಯದಲ್ಲಿ ಗಾಯವಾಗುವಂತದ್ದು ಆಗ ಹಸುಗಳು ಕುಂಟಿಕೊಂಡು ನಡೆಯುತ್ತವೆ ಇದರಿಂದ ಆಗುವ ತೊಂದರೆಗಳೇನು ಎಂದರೆ ಹಸುಗಳಿಗೆ ಬಾಯಿಯಲ್ಲಿ ಹುಣ್ಣುಗಳಾದಾಗ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸುತ್ತವೆ.

ಆಹಾರ ಸೇವನೆಯನ್ನು ನಿಲ್ಲಿಸಿದಾಗ ದಿನದಿಂದ ದಿನಕ್ಕೆ ಹಾಲು ಕೂಡ ಕಡಿಮೆಯಾಗುತ್ತದೆ ಜೊತೆಗೆ ಕರುಗಳಿಗೂ ಕೂಡ ಹಾಲು ಸಿಗದೆ ಅವುಗಳಿಗೂ ಕಷ್ಟವಾಗುತ್ತದೆ. ಇನ್ನು ಸಣ್ಣ ಸಣ್ಣ ಕರುಗಳಿಗೆ ಈ ರೋಗ ಬಂದಾಗ ಅವುಗಳಿಗೆ ಅದನ್ನ ತಡೆದುಕೊಳ್ಳಲಾಗದೆ ಸತ್ತುಹೋಗುತ್ತವೆ. ಗರ್ಭಿಣಿ ಹಸುಗಳು ಇದ್ದಾಗ ಅವು ಕಂದ ಹಾಕುವ ಸಮಸ್ಯೆಗಳು ಉಂಟಾಗುತ್ತದೆ. ಕಾಲು ಬಾಯಿ ರೋಗ ಬ್ಯಾಕ್ಟೀರಿಯಾದಿಂದ ಬರುವಂತಹ ರೋಗವಾಗಿದೆ.

ಕಾಲಕಾಲಕ್ಕೆ ಸರಿಯಾಗಿ ದನಕರುಗಳಿಗೆ ವಾಕ್ಸಿನೇಶನ್ ಅನ್ನ ಮಾಡಬೇಕು. ಇಲ್ಲದಿದ್ದರೆ ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಒಂದು ಹಸುವಿಗೆ ಈ ಸಮಸ್ಯೆ ಕಾಣಿಸಿಕೊಂಡರೆ ಉಳಿದವುಗಳಿಗೆ ಇದು ಹರಡುತ್ತದೆ. ಈ ರೋಗ ಕಾಣಿಸಿಕೊಂಡಾಗ ವೈದ್ಯರನ್ನು ಕರೆಸಿ ಔಷಧಿಗಳನ್ನು ಕೊಡಬಹುದು ಮನೆಮದ್ದುಗಳನ್ನು ಮಾಡಿ ಅವು ಆಹಾರ ಸೇವನೆ ಮಾಡುವಂತೆ ಮಾಡಬಹುದು. ಹೊರಗಡೆ ಯಾವುದಾದರೂ ಹಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಾಗ ನಾವು ನಮ್ಮ ಹಸುಗಳನ್ನು ಹೊರಗೆ ಬಿಡಬಾರದು.

ಕೆಲವೊಮ್ಮೆ ನೊಣ ಸೊಳ್ಳೆಗಳಿಂದ ಮಾತ್ರವಲ್ಲದೆ ಕೆಲವೊಂದು ಪಕ್ಷಗಳಿಂದಲೂ ಕೂಡ ಈ ರೋಗ ಬರುವ ಸಾಧ್ಯತೆ ಇರುತ್ತವೆ ಪಕ್ಷಿಗಳು ಈಗಾಗಲೇ ರೋಗ ಕಾಣಿಸಿಕೊಂಡ ಪ್ರಾಣಿಯ ಮೈ ಮೇಲೆ ಕುಳಿತುಕೊಂಡು ಬಂದು ಇನ್ನೊಂದು ಹಸುವಿನ ಮೇಲೆ ಬಂದು ಕುಳಿತಾಗ ಕಾಯಿಲೆ ಹರಡುವ ಸಂಭವ ಇರುತ್ತದೆ. ಕಾಲುಬಾಯಿ ರೋಗ ಬಂದಾಗ ಸರಿಯಾದ ಚಿಕಿತ್ಸೆಯನ್ನು ಕೊಡದಿದ್ದಾಗ ಹಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಪೊಟ್ಯಾಶಿಯಂ ಪರಮಾಗನೆಟ್ ಬಳಸಬೇಕು.

ಇದು ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ ಇದನ್ನು ನೀರಿನಲ್ಲಿ ಸ್ವಲ್ಪ ಹಾಕಿ ಬಳಸಬೇಕು ನಾವು ಕೊಟ್ಟಿಗೆಗೆ ಹೋಗುವಾಗ ಈ ನೀರಿನಿಂದ ಕಾಲುಗಳನ್ನು ತೊಳೆದುಕೊಂಡು ಹೋದರೆ ಯಾವುದೇ ಬ್ಯಾಕ್ಟೀರಿಯಾಗಳು ಬರುವುದಿಲ್ಲ. ಈ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಸ್ವಲ್ಪ ಬಣ್ಣ ಬದಲಾಗುತ್ತದೆ ಅದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ನೀರಿನಿಂದ ಹಸುವಿನ ಕೆಚ್ಚಲನ್ನು ಕೂಡ ತೊಳೆಯಬಹುದು. ಇದರಿಂದ ಕೆಚ್ಚಲು ಬಾವು ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತದೆ.

ಪೊಟ್ಯಾಶಿಯಂ ಪರಮಾಗನೆಟ್ ನಿಮಗೆ ಎಲ್ಲಾ ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ. ರೈತರು ಮಾದರಿ ರೈತ ಆಗಬೇಕು ಎಂದರೆ ಇವುಗಳನ್ನೆಲ್ಲ ಉಪಯೋಗಿಸಬೇಕು ಆಗ ದನಕರುಗಳಿಗೆ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು. ನಿಮ್ಮ ಬಳಿ ಒಂದು ಹಸು ಅಥವಾ ಒಂದು ಆಡು ಇರಲಿ ಅಥವಾ ಹತ್ತು ಆಡು ಹತ್ತು ಹಸುಗಳು ಇರಲಿ ಇವುಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾಗಳಿಂದ ಆಗುವ ತೊಂದರೆಗಳನ್ನು ತಡೆಯಬಹುದು.

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಹೆಚ್ಚಾಗುವ ಕಾರಣ ಮಳೆ ಬರುವುದಕ್ಕಿಂತ ಎರಡು ತಿಂಗಳು ಮೊದಲು ಸರ್ಕಾರದಿಂದ ವ್ಯಾಕ್ಸಿನೇಷನ್ ಇರುತ್ತದೆ ಅವುಗಳನ್ನು ಮಾಡಿಸಬೇಕು. ವರ್ಷದಲ್ಲಿ ಎರಡು ಬಾರಿ ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು. ಇದರಿಂದ ಕಾಲುಬಾಯಿ ರೋಗವನ್ನು ತಡೆಗಟ್ಟಬಹುದು ಈ ಕಾಯಿಲೆ ಕುರಿತಾಗಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿಸಬಾರದು.

ದೇಶಿಯ ತಳಿಗಳಲ್ಲಿ ಇವುಗಳನ್ನು ತಡೆದುಕೊಳ್ಳುವ ಶಕ್ತಿ ಸ್ವಲ್ಪ ಇರುತ್ತದೆ ಆದರೆ ಬೇರೆ ತಳಿಯ ಹಸುಗಳು ಈ ರೋಗಗಳನ್ನು ತಡೆದುಕೊಳ್ಳುವುದಿಲ್ಲ ಅವುಗಳಲ್ಲಿ ಕಾಯಿಲೆ ವಾಸಿಯಾಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಕಾಲುಬಾಯಿ ರೋಗ ಕಾಣಿಸಿಕೊಂಡಾಗ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಔಷಧವನ್ನು ತಯಾರಿಸಬಹುದು.ಅದನ್ನು ತಯಾರಿಸುವುದಕ್ಕೆ ಬೇಕಾದ ವಸ್ತುಗಳು ಮೆಂತೆ ಹತ್ತು ಗ್ರಾಂ ಜೀರಿಗೆ ಹತ್ತು ಗ್ರಾಂ ಹರಿಶಿಣ ಹತ್ತು ಗ್ರಾಂ ಐದರಿಂದ ಆರು ಬೆಳ್ಳುಳ್ಳಿ ಎಸಳುಗಳು ಒಂದು ಕೊಬ್ಬರಿ ಬೆಲ್ಲ ನೂರಾ ಇಪ್ಪತ್ತು ಗ್ರಾಂ ಕಾಳುಮೆಣಸಿನ ಪುಡಿ ಹತ್ತು ಗ್ರಾಂ.

ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿಕೊಂಡು ಅದಕ್ಕೆ ಮೆಂತೆ ಜೀರಿಗೆ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಬೇಕು ಅದನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು ನಂತರ ಅವುಗಳೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಬೇಕು ಇದು ಕೇವಲ ಒಂದು ದಿನಕ್ಕೆ ಇಷ್ಟು ಪ್ರಮಾಣದ ಔಷಧಿಯನ್ನು ಕೊಡಬೇಕು ಈ ರೀತಿಯಾಗಿ ನಾಲ್ಕರಿಂದ ಐದು ದಿನಗಳವರೆಗೆ ಕೊಟ್ಟಾಗ ಇದರ ಜೊತೆಗೆ ಇಂಗ್ಲಿಷ್ ಔಷಧಿಗಳನ್ನು ಕೊಟ್ಟಾಗ ರೋಗ ಬೇಗ ವಾಸಿಯಾಗುತ್ತದೆ.

ಆಡುಗಳು ಅಥವಾ ಹಸುಗಳು ಗರ್ಭಿಣಿ ಇದ್ದಾಗ ಕಾಳುಮೆಣಸಿನ ಪುಡಿಯನ್ನು ಕಡಿಮೆ ಪ್ರಮಾಣದಲ್ಲಿ ಅಥವಾ ಹಾಕದಿದ್ದರೂ ನಡೆಯುತ್ತದೆ.ಈ ರೀತಿಯಾಗಿ ಕಾಲುಬಾಯಿ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಒಳ್ಳೆಯದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.