ಕೊರೋನ ವೈರಸ್ ನಮ್ಮನ್ನು ಕಾಡುತ್ತಿರುವ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಎಂಬ ಎರಡು ಸಿನಿಮಾ ಜನರ ಮನಸಲ್ಲಿ ಅಚ್ಚೊತ್ತಿತು. ನಂತರ ಲವ್ ಮಾಕ್ಟೇಲ್ ಸಿನಿಮಾದ ಆದಿ ಹಾಗೂ ನಿಧಿಮಾ ಅದೆ ಜೋಡಿ ಲವ್ ಮಾಕ್ಟೇಲ್ 2 ಸಿನಿಮಾವನ್ನು ಜನರ ಕಣ್ಣಮುಂದೆ ತಂದು ಕಳೆದ ವರ್ಷ ನಿಜಜೀವನದಲ್ಲಿಯೂ ಜೋಡಿಯಾಗಿ ಮದುವೆಯಾದರು. ಅವರ ಮದುವೆಗೆ ಪುನೀತ್ ರಾಜಕುಮಾರ್ ಅವರು ಆಗಮಿಸಿ ವಧು-ವರರನ್ನು ಆಶೀರ್ವದಿಸಿ ಭಾರಿ ಬೆಲೆಬಾಳುವ ಉಡುಗೊರೆ ನೀಡಿದ್ದಾರೆ. ಹಾಗಾದರೆ ಅವರು ನೀಡಿರುವ ಉಡುಗೊರೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಬಿಗ್ ಸಕ್ಸೆಸ್ ಕಂಡಂತಹ ಆದಿ ಹಾಗೂ ನಿಧಿಮಾ ಜೋಡಿಗೆ ಸಾಕಷ್ಟು ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ತೇಲಾಡುತ್ತಿದ್ದಂತಹ ಈ ಮುದ್ದಾದ ಜೋಡಿ ಕಳೆದ ವರ್ಷವಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರುವ ವಿಷಯ ಎಲ್ಲರಿಗೂ ಗೊತ್ತಿದೆ. ಈ ಮುದ್ದಾದ ಜೋಡಿಯ ಮದುವೆಗೆ ಕುಟುಂಬ ಸಮೇತವಾಗಿ ಆಗಮಿಸಿದಂತಹ ಪುನೀತ್ ರಾಜಕುಮಾರ್ ನವ ವಧುವರರಿಗೆ ಆಶೀರ್ವದಿಸಿ ಉಡುಗೊರೆ ನೀಡಿದ್ದಾರೆ.
ಮಹಾಮಾರಿ ಕೊರೋನ ವಕ್ಕರಿಸಿದ ಕಾರಣ ಸಿನಿಮಾ ಥಿಯೇಟರ್ ಗಳೆಲ್ಲ ಬಂದಾಗಿ ಜನರು ಎಂಟರಟೇನ್ಮೆಂಟ್ ಸಿಗದೆ ಪರದಾಡುತ್ತಿದ್ದಂತಹ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಎಂಬ ಸಿನಿಮಾ ಪ್ರೇಕ್ಷಕರ ಗಮನ ಸೆಳೆದು ಅದೆಷ್ಟೊ ಜನ ಅಭಿಮಾನಿಗಳು ಆದಿ ಮತ್ತು ನಿಧಿಮಾ ಕ್ಯಾರೆಕ್ಟರ್ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಣ್ಣೀರು ಹಾಕಿದರು.
ಇಷ್ಟರಮಟ್ಟಿಗೆ ಎಲ್ಲರ ಗಮನ ಸೆಳೆದಿದ್ದ ಸಿನಿಮಾ ಅತ್ಯದ್ಭುತವಾದ ಯಶಸ್ಸು ಕಂಡ ನಂತರ ಸಿನಿಮಾ ನೋಡಿದವರೆಲ್ಲಾ ಈ ಸಿನಿಮಾವನ್ನು ಬಿಟ್ಟಿಯಾಗಿ ನೋಡಿ ತಪ್ಪು ಮಾಡಿಬಿಟ್ಟೆ. ಅದೆ ಥಿಯೇಟರ್ ನಲ್ಲಿ ತೆರೆಕಂಡಿದ್ದರೆ ಇದರ ಲೆವೆಲ್ ಬೇರೆ ರೇಂಜಿಗೆ ಇರುತ್ತಿತ್ತು ಎಂಬೆಲ್ಲಾ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹೀಗೆ ಜನರ ಮನಸ್ಸನ್ನು ಅರಿತು ಕೊಂಡಂತಹ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಲವ್ ಮಾಕ್ಟೇಲ್ ಪಾರ್ಟ್2 ಮಾಡುವ ಮೂಲಕ ಮತ್ತಷ್ಟು ಯಶಸ್ಸು ಕಂಡರು.
ಹೀಗೆ ಬರೋಬ್ಬರಿ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದಂತಹ ಈ ಮುದ್ದಾದ ಜೋಡಿಗಳು ಮನೆಯವರೆಲ್ಲರ ಒಪ್ಪಿಗೆ ಪಡೆದು ತಮ್ಮ ಪ್ರೀತಿಯನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14 ನೇ ತಾರೀಖು 2021 ರಂದು ಗಿಟ್ಟಿಸಿಕೊಂಡರು. ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆದಿ ಹಾಗೂ ನಿಧಿಯ ಮದುವೆಗೆ ನಮ್ಮೆಲ್ಲರ ಪ್ರೀತಿಯ ಬೆಟ್ಟದ ಹೂವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಹೆಂಡತಿ ಅಶ್ವಿನಿ ಅವರೊಂದಿಗೆ ಆಗಮಿಸಿ ನವ ವಧುವರರಿಗೆ ಶುಭ ಕೊರುವುದರೊಂದಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬೆಲೆಬಾಳುವಂತಹ ಚಿನ್ನದ ಉಂಗುರಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ತಮಗೆ ಹತ್ತಿರವಿರುವವರು ಯಾರೆ ಬಂದು ಮದುವೆಗೆ ಆಗಮಿಸಿದ್ದರು ಕೂಡ ಬಿಡುವು ಮಾಡಿಕೊಂಡು ತಪ್ಪದೆ ಹೋಗುತ್ತಿದ್ದರು. ಪುನೀತ್ ಅವರ ಪತ್ನಿ ಅಶ್ವಿನಿ ಅವರು ಕೂಡ ಪುನೀತ್ ಅವರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ವಿಶೇಷ ಸಂದರ್ಭಗಳಲ್ಲಿ ನೋಡುವುದೆ ಕಣ್ಣಿಗೆ ಹಬ್ಬವಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಪುನೀತ್ ರಾಜಕುಮಾರ್ ಅವರನ್ನು ಭಗವಂತ ಇಷ್ಟು ಬೇಗ ತನ್ನತ್ತ ಕರೆದುಕೊಂಡಿದ್ದಕ್ಕೆ ನಮ್ಮೆಲ್ಲರಿಂದ ಆತನಿಗೆ ಧಿಕ್ಕಾರವಿರಲಿ. ನೀವು ಕೂಡ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಅಭಿಪ್ರಾಯ ತಿಳಿಸಿ.