ಕನ್ನಡ ಕಿರುತೆರೆ ನಟಿ ರಶ್ಮಿಪ್ರಭಾಕರ್ ಗೆಳೆಯ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ ವಿವಾಹ ಸಮಾರಂಭ ನೆರವೇರಿತು. ಕಿರುತೆರೆ ಅನೇಕ ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು. ರಶ್ಮಿ ಪ್ರಭಾಕರ್ ಪ್ರಸಿದ್ಧ ಲಕ್ಷ್ಮೀ ಬಾರಮ್ಮಧಾರವಾಹಿ ಸೇರಿದಂತೆ ಶುಭ ವಿವಾಹ, ಜೀವನ ಚೈತ್ರ, ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಹಾಗೂ ತೆಲುಗಿನಲ್ಲಿ ಪೌರ್ಣಿಮಿ , ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಕೈ ಹಿಡಿದ ನಿಖಿಲ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಈಗ ಸತಿ- ಪತಿಗಳಾಗಿದ್ದಾರೆ.

ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ರಶ್ಮಿ ಪ್ರಭಾಕರ್ ನೃತ್ಯ ಪ್ರದರ್ಶನಕ್ಕೆಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಮೊದಲಿಗೆ ನಿಖಿಲ್‌ರನ್ನು ಭೇಟಿಯಾದರಂತೆ. ಕೆಲ ಕಾಲ ಇಬ್ಬರೂ ಗೆಳೆಯರಾಗಿದ್ದರು, ಲಾಕ್‌ಡೌನ್ ಸಮಯದಲ್ಲಿ ಈ ಇಬ್ಬರೂ ಒಟ್ಟಿಗೆ ಸೇರಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ಸಹ ತೊಡಗಿದ್ದರು. ನಂತರ ಒಂದು ಒಳ್ಳೆಯ ದಿನ ನಿಖಿಲ್ ಮೊದಲಿಗೆ ರಶ್ಮಿಗೆ ಪ್ರೊಪೋಸ್ ಮಾಡಿದರಂತೆ, ರಶ್ಮಿ ಸಹ ಹೆಚ್ಚು ಯೋಚಿಸದೆ ಒಪ್ಪಿಕೊಂಡಿದ್ದಾರೆ.

ರಶ್ಮಿ ಹಾಗೂ ನಿಖಿಲ್ ಗೆಳೆತನದ ಬಗ್ಗೆ ಕುಟುಂಬದವರಿಗೆ ಮೊದಲೇ ಗೊತ್ತಿದ್ದ ಕಾರಣ ಎರಡೂ ಕುಟುಂಬದವರು ಖುಷಿಯಿಂದಲೇ ಇವರ ಮದುವೆಗೆ ಒಪ್ಪಿಕೊಂಡಿದ್ದಾರೆ. ಕಲಾವಿದರ ಜೀವನ ಹೇಗಿರುತ್ತದೆ ಎಂಬುದನ್ನು ನಿಖಿಲ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಹಾಗಾಗಿ ನಾನು ಮದುವೆಯ ಬಳಿಕವೂ ಕೆಲಸ ಮಾಡುವುದರ ಬಗ್ಗೆ ನಿಖಿಲ್‌ಗೆ ಆಕ್ಷೇಪಣೆ ಇಲ್ಲ ಎಂದಿದ್ದಾರೆ ರಶ್ಮಿ.

ರಶ್ಮಿ ಪ್ರಭಾಕರ್ ಮದುವೆಗೆ ನೇಹಾ ಗೌಡ, ಚಂದನ್, ಕವಿತಾ, ಅಂಕಿತಾ ಅಮರ್ ಹಾಗೂ ಕಾವ್ಯಾ ಶಾಸ್ತ್ರಿ ಮುಂತಾದವರು ಆಗಮಿಸಿದ್ದರು. ಒಟ್ಟಿನಲ್ಲಿ ಕನ್ನಡ ಕಿರುತೆರೆಯ ಕೆಲ ಕಲಾವಿದರು, ತಂತ್ರಜ್ಞರು ಈ ಮದುವೆಗೆ ಸಾಕ್ಷಿಯಾದರು. ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಈ ಮದುವೆ ನಡೆದಿದೆ. ಸಾಂಪ್ರದಾಯಿಕವಾಗಿ ಮದುವೆಯಾಗಲು ರಶ್ಮಿ ನಿರ್ಧಾರ ಮಾಡಿದ್ದು, ಆರತಕ್ಷತೆ ಕಾರ್ಯಕ್ರಮ ಇರುವುದಿಲ್ಲ. ಕೊರೊನಾ ವೈರಸ್ ನಿಯಮಗಳು ಸಡಿಲವಾಗಿದ್ದರೂ ಕೂಡ, ಅದ್ದೂರಿ ಮದುವೆ ಆಗೋದಿಲ್ಲ ಎಂದು ರಶ್ಮಿ ಈ ಹಿಂದೆ ‘ವಿಜಯ ಕರ್ನಾಟಕ ವೆಬ್’ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ನಿಶ್ಚಿತಾರ್ಥ ಆಗುವವರೆಗೂ ರಶ್ಮಿ ಪ್ರಭಾಕರ್ ಹುಡುಗನ ವಿಚಾರವನ್ನು ಎಲ್ಲಿಯೂ ಬಹಿರಂಗ ಮಾಡಿರಲಿಲ್ಲ. ವಿಶಿಷ್ಟವಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಕುತೂಹಲ ಹುಟ್ಟುಹಾಕುವ ರೀತಿ ಪೋಸ್ಟ್ ಹಾಕಿ ನಿಖಿಲ್ ಫೋಟೋ ರಿವೀಲ್ ಮಾಡಿದ್ದರು. ಮೂರು ವರ್ಷಗಳಿಂದ ನಿಖಿಲ್ ಹಾಗೂ ರಶ್ಮಿ ಸ್ನೇಹಿತರಾಗಿದ್ದರು. ಈ ಹಿಂದೆ ನಿಖಿಲ್ ಚಾನೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿಖಿಲ್ ನೀಡಿದ ಬೆಂಬಲದ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿ ಹಂಚಿಕೊಳ್ಳುತ್ತಿರುತ್ತಾರೆ.

ನವೆಂಬರ್ ತಿಂಗಳಿನಲ್ಲಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ರಶ್ಮಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಮದುವೆಯನ್ನು ಸರಳವಾಗಿ ಆಗಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮಾತಾಗಿದ್ದ ರಶ್ಮಿ ಪ್ರಭಾಕರ್ ವಿವಾಹವಾಗಿದ್ದಾರೆ. ರಶ್ಮಿ ಕಲ್ಯಾಣವು ಬೆಂಗಳೂರಿನ ಕನ್ವೆಶನ್ ಸೆಂಟರ್ ಒಂದರಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಕಲ್ಯಾಣ ನಡೆದಿದ್ದು, ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ಜರುಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!