ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಮನೆ ಆರನೇ ಮನೆ ಬುಧ ಗ್ರಹ ಈ ರಾಶಿಯ ಅಧಿಪತಿ ಈ ರಾಶಿ ಅವರು ಸಾಮಾನ್ಯವಾಗಿ ಎಲ್ಲರ ಜೊತೆ ಚೆನ್ನಾಗಿ ಇದ್ದರು ತನ್ನ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವ ಸ್ವಭಾವ ಇರುವುದಿಲ್ಲ ಹಾಗೂ ಅತ್ಯಂತ ನಿಕಟ ಹಾಗೂ ನಂಬಿಕಸ್ತ ವ್ಯಕ್ತಿ ಜೊತೆ ಮಾತ್ರ ತನ್ನ ಭಾವನನ್ನು ಹಂಚಿಕೊಳ್ಳುತ್ತಾರೆ ಒಮ್ಮೆ ಯಾರಲ್ಲಿ ಆದರೂ ನಂಬಿಕೆ ಇಟ್ಟರೆ ಯಾವುದೇ ಸಂದರ್ಭದಲ್ಲು ಕೂಡ ಅವರ ಜೊತೆಗೆ ಇರುವ ಮನೋಭಾವ ಇವರದ್ದು ಎಲ್ಲ ರಾಶಿಯ ಗೋಚರ ಫಲದ ಮೇಲೆ ವ್ಯಕ್ತಿಯ ನಡತೆ ಜೀವನ ಏರುಪೇರು ಹಾಗೂ ಉದ್ಯೋಗ ಬಗ್ಗೆ ಹೇಳುತ್ತೇವೆ

ದಿನ ವಾರ ಹಾಗೂ ಮಾಸದ ಭವಿಷ್ಯವನ್ನು ಕೂಡ ನಾವು ತಿಳಿದುಕೊಳ್ಳಬಹುದು. ಇನ್ನೂ ಆ ವ್ಯಕ್ತಿಗೆ ಈ ತಿಂಗಳು ಶುಭ ಇದೆಯೋ ಅಥವಾ ಅಶುಭ ಅದುಕ್ಕೆ ಏನೆಲ್ಲಾ ಪರಿಹಾರ ಮಾಡಬೇಕು ಎನ್ನುವುದನ್ನು ಕೂಡ ಆತನ ರಾಶಿಯ ಮುಖಾಂತರ ಅರಿಯುವ ಅವಕಾಶ ಇದೆ ಹಾಗಾದರೆ ಜೂನ್ ತಿಂಗಳು ಕನ್ಯಾ ರಾಶಿ ಏನೆಲ್ಲಾ ಎಚ್ಚರಿಕೆ ಕ್ರಮ ಕೈಗೊಳ್ಳ ಬೇಕು ಎನ್ನುವುದನ್ನು ನೋಡೋಣ ಬನ್ನಿ

ಜೂನ್ 15 ಮಿಥುನ ರಾಶಿಗೆ ರವಿ ಗ್ರಹ ಪ್ರವೇಶ ಹಾಗಾಗಿ ವ್ಯಯದಿಪತಿ ಕರ್ಮ ಸ್ಥಾನಕ್ಕೆ ಬರುವುದರಿಂದ ಹಾಗೂ ಜೂನ್ 18 ವೃಷಭಕ್ಕೆ ಶುಕ್ರ ಪ್ರವೇಶ ಅಂದರೆ ಭಾಗ್ಯಾಧಿಪತಿ ಭಾಗ್ಯ ಸ್ಥಾನ ಹಾಗೂ ಜೂನ್ 26 ಕುಜನ ಪ್ರವೇಶ ಅಷ್ಟಮಾಧಿಪತಿ ಆಗಮನ ಇದರಿಂದ ಕನ್ಯಾ ರಾಶಿಯ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಜೂನ್ 15 ನಂತರ ಕನ್ಯಾ ರಾಶಿಯವರು ತನ್ನ ಕೆಲಸವನ್ನು ಕಳೆದುಕೊಳ್ಳುವ ಸ್ಥಿತಿಗೆ ಬರುವಿರಿ ಯಾಕೆಂದರೆ ವ್ಯಯದಿಪಥಿ ಕರ್ಮ ಸ್ಥಾನ ಇರುವ ಕಾರಣ ತಮ್ಮ ಕೆಲಸಕ್ಕೆ ತಾವೇ ರಾಜೀನಾಮೆ ನೀಡಿ ಬೇರೆ ಕಡೆ ಕೆಲಸಕ್ಕೆ ಹೋಗುವುದು

ಇಲ್ಲವೇ ಮೇಲಿನ ಅಧಿಕಾರಿಗಳು ಅವರಾಗಿಯೇ ಕೆಲಸದಲ್ಲಿದ್ದ ತೆಗೆಯುವ ಸಂದರ್ಭ ಎದುರು ಆಗುವುದು ಹಾಗಾಗಿ ಜಾಗ್ರತೆ ಅವಶ್ಯಕ. ಪಿತ್ರಾರ್ಜಿತ ಆಸ್ತಿಯಲ್ಲಿ ವ್ಯಾಜ್ಯ ಇದ್ದಲ್ಲಿ ಅದರಿಂದ ಮಾನಸ್ಸಿಕ ನೆಮ್ಮದಿ ಕೆಡುವುದು ಹಾಗೂ ಆಸ್ತಿ ವಿಚಾರ ಆಗಲಿ ತನ್ನ ತಂದೆಯ ಬಳಿ ಜಗಳ ಮನಸ್ತಾಪ ಇಂದ ಅವರ ಆರೋಗ್ಯ ಕೆಡುವ ಸಾಧ್ಯತೆ ಇದೆ ಇದರಿಂದ ಧನವ್ಯಯ ಆಗುವುದು ಜೂನ್ 18 ನಂತ ರ ಸರಿ ಹೋಗುವುದು

ಜೂನ್ 26 ತನಕ ಕನ್ಯಾ ರಾಶಿಯ ದಂಪತಿಗಳು ಬಹಳ ತಾಳ್ಮೆ ಇಂದ ಇದ್ದಲ್ಲಿ ಒಳಿತು ಇಲ್ಲವಾದಲ್ಲಿ ಜಗಳ ಆಗುವುದು ಗಂಡ ಹೆಂಡತಿ ನಡುವೆ ಸ್ನೇಹಿತರ ನಡುವೆ ಜಗಳ ಇನ್ನು ಮದುವೆ ಮಾಡಲು ತಯಾರಿ ಅಲ್ಲಿರುವರು ಯಾವುದೋ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಅದು ಸರಿ ಇಲ್ಲ ಅಂತಲೋ ಇಲ್ಲ ಒಡವೆ ಇದು ನನಗೆ ಬೇಡ ಬಟ್ಟೆ ಕಡಿಮೆ ವೆಚ್ಚದಲ್ಲಿ ಕೊಡಿಸಿದ್ದು ಅಂತ ಹೀಗೆ ಕಿರಿಕಿರಿ ಇಂದ ಎರಡು ಮನೆಯವರಲ್ಲಿ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ

ಹಾಗಾಗಿ ತಾಳ್ಮೆ ಅಗತ್ಯ ಈ ತಿಂಗಳು ವಾಹನ ಚಲಿಸುವಾಗ ಆದಷ್ಟು ಜಾಗರೂಕತೆ ಇಂದ ಇದ್ದಲ್ಲಿ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ಅವಘಡ ಆಗುವ ಸಾದ್ಯತೆ ಇದೆ ನಿಮಗೆ ಅನುಕೂಲ ಇದ್ದಲ್ಲಿ ವಾಹನ ಚಲಿಸದೆ ಬೇರೆ ಮಾರ್ಗವನ್ನು ಅನೋಮೋದಿಸಿದರೆ ಒಳಿತು ಇದಿಷ್ಟು ಜೂನ್ ತಿಂಗಳಲ್ಲಿ ಕನ್ಯಾ ರಾಶಿ ಅವರ ಫಲಾನುಫಲ ಆದಷ್ಟು ಎಚ್ಚರಿಕೆ ಆಗಿ ಇರಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!