ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಒಂದಾ ಎರಡಾ ಆದರೂ ತೂಕದಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ನಾನಾ ರೀತಿಯ ವ್ಯಾಯಾಮ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಕೆಲವರು ಹೇಳುತ್ತಾರೆ. ಇನ್ನೆರಡು ತಿಂಗಳು ಕಳೆದರೆ ಚಳಿಗಾಲದ ಸೀಸನ್ ಬರಲಿದೆ. ಈ ಋತುವಿನಲ್ಲಿ ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಬಿಸಿ ಆಹಾರದ ಮೊರೆ ಹೋಗುವವರೆ ಹೆಚ್ಚು.
ಇದರಿಂದ ದೇಹ ತೂಕ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಕೂಡ ಇದೆ. ಇದೇ ಸೀಸನ್ನಲ್ಲಿ ಎಲ್ಲ ಕಡೆ ದೊರೆಯುವ ಹಣ್ಣೆಂದರೆ ಪೇರಲೆ ಅಥವಾ ಸೀಬೆಹಣ್ಣು. ಇದನ್ನು ದಿನನಿತ್ಯ ಸೇವಿಸುವ ಮೂಲಕ ಕೂಡ ನಿಮ್ಮ ಸ್ಥೂಲಕಾಯತೆ ಸಮಸ್ಯೆಗೆ ಪರಿಹಾರ ಕಾಣಬಹುದು. ಆರೋಗ್ಯ ಕಾಪಾಡಿಕೊಳ್ಳಬೇಕಾದರೆ, ಆಹಾರ ಕ್ರಮ, ವ್ಯಾಯಾಮ ಇತ್ಯಾದಿಗಳನ್ನು ನಿತ್ಯವೂ ಪಾಲಿಸಿಕೊಂಡು ಹೋಗಬೇಕು. ತಿನ್ನುವಂತಹ ಆಹಾರವು ಆರೋಗ್ಯಕಾರಿ ಆಗಿದ್ದರೆ, ಆಗ ಯಾವುದೇ ಸಮಸ್ಯೆಗಳು ಕಾಡದು. ಮುಖ್ಯವಾಗಿ ಕೆಲವೊಂದು ಸಂದರ್ಭದಲ್ಲಿ ನಾವು ಫಾಸ್ಟ್ ಫುಡ್ ಗೆ ಮೊರೆ ಹೋಗುವ ಕಾರಣದಿಂದಾಗಿ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವುದು.
ಹೀಗಾಗಿ ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಹಣ್ಣು ಹಾಗೂ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ, ಆಗ ಖಂಡಿತವಾಗಿಯೂ ಆರೋಗ್ಯದಲ್ಲಿ ಉನ್ನತಿಯನ್ನು ಕಾಣಬಹುದು. ನಾವು ನಿಮಗೆ ಈ ಲೇಖನದಲ್ಲಿ ಪೇರಳೆ ಹಣ್ಣಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಪೇರಲೆ ಹಣ್ಣಿನಲ್ಲಿ ಫೋಲೇಟ್ ಎಂಬ ಅಂಶವಿದ್ದು, ಇದುಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆಯೇ ಈ ಹಣ್ಣು ಸೋಡಿಯಂನ ನಕರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ಡಯಟ್ನಲ್ಲಿ ಸೀಬೆಹಣ್ಣನ್ನು ಸೇರಿಸುವುದು ಉತ್ತಮ.
ಪೇರಲೆ ಅಥವಾ ಸೀಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಇರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಜೀರ್ಣಕ್ರಿಯೆ ಸಾಮರ್ಥ್ಯವನ್ನು ಚೇತರಿಸಿಕೊಳ್ಳುವುದು ಬಹಳ ಮುಖ್ಯ. ಅಂದರೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುವಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪೇರಲೆ ಎಂಬುದು ಜೀರ್ಣಕ್ರಿಯೆಗೆ ಮನೆಮದ್ದು ಎನ್ನಬಹುದು. ಪೇರಲೆಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ತುಂಬಾ ಕಡಿಮೆ. 100 ಹಣ್ಣಿನಲ್ಲಿ ಕೇವಲ 14 ಗ್ರಾಂ ಕಾರ್ಬೋಹೈಡ್ರೇಟ್ ಕಂಡುಬರುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ವಸ್ತುಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣುಗಳನ್ನು ತೂಕ ಇಳಿಸುವ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅಂತಹ ಹಣ್ಣುಗಳಲ್ಲಿ ಪೇರಲ ಕೂಡ ಒಂದು ಎಂದು ಸಲಹೆ ನೀಡಲಾಗುತ್ತದೆ. ಸೀಬೆಹಣ್ಣನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಪ್ರೋಟೀನ್ ಹಸಿವು ಸಂಬಂಧಿತ ಹಾರ್ಮೋನ್ ಗ್ರೇಲಿನ್ ಅನ್ನು ನಿಯಂತ್ರಿಸುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಪೇರಲೆಯಲ್ಲಿ ಬಿ 1, ಬಿ 3, ಬಿ 6 ಮತ್ತು ಫೋಲೇಟ್‌ನಂತಹ ಬಿ ವಿಟಮಿನ್ಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ ರಾಮಬಾಣವಾಗಿ ಸೀಬೆಹಣ್ಣು ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಲು ಪೇರಲೆ ಸಹಾಯ ಮಾಡುತ್ತದೆ.
ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಇದು ಮಧುಮೇಹವನ್ನು ನಿಯಂತ್ರಿಸುವುದು.
ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಬಿಡುಗಡೆ ಮಾಡುವುದು. ಇದರಿಂದ ಬೇಗನೆ ಸಕ್ಕರೆ ಮಟ್ಟವು ಏರುವುದು ತಪ್ಪುವುದು. ಆಹಾರದಲ್ಲಿನ ನಾರಿನಾಂಶವು ರಕ್ತನಾಳದಲ್ಲಿ ಹೀರಿಕೊಳ್ಳುವಂತಹ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುವುದು ಹಾಗೂ ಮಧುಮೇಹವನ್ನು ನಿರ್ವಹಿಸಲು ಸಹಕಾರಿ.
ಮಿತ ಪ್ರಮಾಣದಲ್ಲಿ ಪೇರಳೆ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀರ ಕೆಳಮಟ್ಟಕ್ಕೆ ಇಳಿಯಬಹುದು. ಅತಿಯಾಗಿ ತಿಂದರೆ ಅದರಿಂದ ಅನಿಯಮಿತ ಎದೆಬಡಿತ, ವೇಗವಾದ ಹೃದಯಬಡಿತ, ನಿಶ್ಯಕ್ತಿ, ಪೇಲವ ಚರ್ಮ, ಆತಂಕ, ಬೆವರು, ಹಸಿವು ಉಂಟಾಗಬಹುದು. ನೀವು ಮಧುಮೇಹಕ್ಕೆ ಔಷಧಿ ಸೇವನೆ ಮಾಡುತ್ತಲಿದ್ದರೆ, ಆಗ ನೀವು ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳಿಗೆ ಚಳಿಗಾಲದ ಡಯೆಟ್ ಆಗಿ ಸಿಬೇ ಹಣ್ಣು ಸೇವಿಸಬಹುದು.
ಥೈರಾಯ್ಡ್ ಆರೋಗ್ಯ ಕಾಪಾಡುವುದುಪೇರಳೆ ಹಣ್ಣಿನಲ್ಲಿ ಇರುವಂತಹ ತಾಮ್ರದ ಅಂಶವು ಥೈರಾಯ್ಡ್ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಥೈರಾಯ್ಡ್ ಚಯಾಪಚಯ ಕ್ರಿಯೆಗೆ ಬೇಕಾಗುವಂತಹ ಹಾರ್ಮೋನ್ ಥೈರೊಕ್ಸಿನ್ ನ್ನು ಇದು ಸ್ರವಿಸಲು ಹಾಗೂ ಉತ್ಪತ್ತಿ ಮಾಡಲು ನೆರವಾಗುವುದು. ಥೈರಾಯ್ಡ್ ಹಾರ್ಮೋನ್ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುವುದು ಮತ್ತು ಥೈರಾಯ್ಡ್ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವುದು.
ಜೀರ್ಣಕ್ರಿಯೆ ಆರೋಗ್ಯ ವಿಟಮಿನ್ ಸಿ ಮತ್ತು ಇತರ ಕೆಲವೊಂದು ಆಂಟಿಆಕ್ಸಿಡೆಂಟ್ ಗಳು ಪೇರಳೆ ಹಣ್ಣಿನಲ್ಲಿದ್ದು, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಫ್ರೀ ರ್ಯಾಡಿಕಲ್ ನಿಂದ ಕಾಪಾಡುವುದು. ಇದು ಕೆಲವು ರೀತಿಯ ಕ್ಯಾನ್ಸರ್ ಗಳಾಗಿರುವ ಕರುಳು, ಮೇದೋಗ್ರಂಥಿ ಮತ್ತು ಹೊಟ್ಟೆಯ ಕ್ಯಾನ್ಸರ್ ತಡೆಯುವುದು.
ಪೇರಳೆಯಲ್ಲಿ ಇರುವಂತಹ ಆಹಾರದ ನಾರಿನಾಂಶವು ನೈಸರ್ಗಿಕ ವಿರೇಚಕ ಗುಣ ಹೊಂದಿದ್ದು, ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು, ಮಲಬದ್ಧತೆ ನಿವಾರಣೆ ಮಾಡಿ, ಜಠರಕರುಳಿನ ಹಲವಾರು ಸಮಸ್ಯೆಗಳು, ಹೊಟ್ಟೆ ನೋವು, ಹೊಟ್ಟೆ ಕಿರಿಕಿರಿ, ಗ್ಯಾಸ್, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸವುದು.ಸತು, ಕಬ್ಬಿಣಾಂಶ, ಮೆಗ್ನಿಶಿಯಂ, ಫಾಲಟೆ ಅಂಶವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.