ಸಾಮಾನ್ಯವಾಗಿ ಎಲ್ಲರಿಗೂ ಅದರಲ್ಲೂ ಹುಡುಗರಿಗೆ ಬೈಕ್ ಕ್ರೇಜ್ ಇರುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಅನ್ನು ಇಷ್ಟ ಪಡುತ್ತಾರೆ. ಹೀರೊ ಸ್ಪ್ಲೆಂಡರ್ ಬೈಕ್ ಓಡಿಸಲು ಪೆಟ್ರೋಲ್ ಬಳಸದಂತೆ ಹಣ ಉಳಿತಾಯ ಮಾಡಬಹುದು. ಹಾಗಾದರೆ ಹೀರೊ ಸ್ಪ್ಲೆಂಡರ್ ಬೈಕ್ ನಿಂದ ಹೇಗೆ ಹಣ ಉಳಿಸಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಪಟ್ಟಿಯಲ್ಲಿ ಮೊದಲಿಗೆ ಹೀರೊ ಸ್ಪ್ಲೆಂಡರ್ ಬೈಕ್ ಎಂಬ ಹೆಸರು ಬರುತ್ತದೆ. ಈ ಬೈಕ್ ನ ಬೆಲೆ ಮತ್ತು ನಿರ್ವಹಣಾ ವೆಚ್ಚವು ಬಹಳ ಕಡಿಮೆಯಾಗಿದ್ದು, ಇದು ಶ್ರೀಸಾಮಾನ್ಯರು ತಮ್ಮ ಬಜೆಟ್‌ನಲ್ಲಿ ಸುಲಭವಾಗಿ ಕೊಂಡುಕೊಳ್ಳಬಹುದು ಆದರೆ ಕಳೆದ ಕೆಲವು ವಾರಗಳಿಂದ ಪೆಟ್ರೋಲ್ ಬೆಲೆಯಲ್ಲಿ ವಿಪರೀತ ಏರಿಕೆಯಾದ ಕಾರಣ ಶ್ರೀಸಾಮಾನ್ಯರು ಕೂಡ ಬೈಕ್ ಓಡಿಸಲು ಹಿಂದೆ ಸರಿಯುತ್ತಿದ್ದಾರೆ ಆದರೆ ಇದೀಗ ಒಂದು ಒಳ್ಳೆಯ ಸುದ್ದಿಯೊಂದಿದೆ ಅದೇನೆಂದರೆ ಮಾರುಕಟ್ಟೆಯಲ್ಲಿ ಹೀರೊ ಸ್ಪ್ಲೆಂಡರ್ ಬೈಕ್ ಗಾಗಿ ಇವಿ (ಇಲೆಕ್ಟ್ರಿಕ್ ವೆಹಿಕಲ್ ) ಕನ್ವರ್ಷನ್ ಕಿಟ್ ಬಿಡುಗಡೆ ಮಾಡಲಾಗಿದೆ.

ಹೀರೊ ಸ್ಪ್ಲೆಂಡರ್ ಬೈಕ್ ಖರೀದಿಸಲು ಮತ್ತು ಪೆಟ್ರೋಲ್ ಉಳಿಸಲು ಬಯಸುವವರಿಗೆ ಇದೀಗ ತಮ್ಮ ನೆಚ್ಚಿನ ಬೈಕ್ ನಲ್ಲಿಯೆ ಇಲೆಕ್ಟ್ರಿಕ್ ಕಿಟ್ ಅಳವಡಿಸಿ ಹಣ ಉಳಿಸುವ ಆಯ್ಕೆ ಇದೆ. ಈ ವಿದ್ಯುತ್ ಕಿಟ್‌ನ ಬಳಕೆಯನ್ನು ಆರ್‌ಟಿಓ ಅನುಮೋದಿಸಿದೆ. ಮಹಾರಾಷ್ಟ್ರದ ಥಾಣೆ ಮೂಲದ ಇವಿ ಸ್ಟಾರ್ಟಪ್ ಕಂಪನಿ ಗೊಗೊಎ 1 ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದರ ಬೆಲೆ ಕೇವಲ 35,000 ರೂಪಾಯಿಗಳು ಅದರೊಂದಿಗೆ 6,300 ರೂಪಾಯಿ ಜಿಎಸ್ ಟಿ ಪಾವತಿಸಬೇಕಾಗಲಿದೆ ಅಲ್ಲದೆ ಬ್ಯಾಟರಿ ಬೆಲೆಯನ್ನು ಕೂಡ ಪ್ರತ್ಯೇಕ ಪಾವತಿಸಬೇಕು. ಒಟ್ಟಾರೆ ಈ ಕಿಟ್ ಹಾಗೂ ಬ್ಯಾಟರಿ ಖರೀದಿಸಲು 95,000 ರೂಪಾಯಿಯನ್ನು ಪಾವತಿಸಬೇಕು. ಇದಲ್ಲದೆ ಇದಕ್ಕೆ ಹೀರೊ ಸ್ಪ್ಲೆಂಡರ್ ಖರೀದಿಯ ಬೆಲೆಯನ್ನು ಕೂಡ ಕೊಡಬೇಕು. ಹೀಗಿರುವಾಗ ಹೀರೊ ಸ್ಪ್ಲೆಂಡರ್ ಬೈಕ್ ನ ಬೆಲೆಯು ಏರಿದೆ ಆದರೆ ಇದು ಒನ್ ಟೈಮ್ ಇನ್ವೆಸ್ಟ್ ಮೆಂಟ್ ಆಗಲಿದೆ.

ಈ ಕಿಟ್ ಜೊತೆಗೆ ನಿಮಗೆ 3 ವರ್ಷಗಳ ವಾರಂಟಿ ಕೂಡ ಸಿಗಲಿದೆ. ರಶ್ಲೆನ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಒಮ್ಮೆ ಚಾರ್ಜ್ ಮಾಡಿದರೆ ಈ ಬೈಕ್ ಅನ್ನು 151 ಕಿ.ಮೀ ಓಡಿಸಬಹುದಾಗಿದೆ. ಈ ವಿಷಯ ನಿಜಕ್ಕೂ ಒಳ್ಳೆಯ ಸುದ್ದಿಯಾಗಿದೆ. ಬೈಕ್ ಖರೀದಿಸುವ ಮನಸಿದ್ದರೂ ಪೆಟ್ರೋಲ್ ಬೆಲೆ ಏರಿಕೆಯಿಂದ ಹಿಂದೇಟು ಹಾಕುತ್ತಿರುವ ಯುವಕರು ಹೀರೊ ಸ್ಪ್ಲೆಂಡರ್ ಬೈಕ್ ಅನ್ನು ಖರೀದಿಸಬಹುದು. ಈ ಮಾಹಿತಿಯನ್ನು ತಪ್ಪದೆ ಬೈಕ್ ಪ್ರಿಯರಿಗೆ ತಿಳಿಸಿ

Leave a Reply

Your email address will not be published. Required fields are marked *