ರೈತರು ಜಮೀನಿನಲ್ಲಿ ಕಷ್ಟಪಟ್ಟು ದುಡಿಯುತ್ತಾರೆ ಆದರೆ ಅವರಿಗೆ ಪಟ್ಟ ಶ್ರಮಕ್ಕೆ ಸರಿಯಾಗಿ ಫಲ ಸಿಗುವುದಿಲ್ಲ. ತಾಳೆ ಬೆಳೆಯನ್ನು ಬೆಳೆಯುವುದು ಬಹಳ ಕಡಿಮೆ. ಮೈಸೂರು ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮುಕುಂದ ಎಂಬ ರೈತ ತಾಳೆ ಬೆಳೆಯನ್ನು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಹಾಗಾದರೆ ತಾಳೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮುಕುಂದ ಎಂಬ ರೈತ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ತಾಳೆ ಬೆಳೆಯನ್ನು ಬೆಳೆದು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಅವರು 18 ವರ್ಷದಿಂದ ತಮ್ಮ 5ವರೆ ಎಕರೆ ಜಮೀನಿನಲ್ಲಿ ತಾಳೆ ಬೆಳೆ ಬೆಳೆಯುತ್ತಿದ್ದಾರೆ. ಉಳಿದ ಬೆಳೆಗಳಿಗೆ ಹೋಲಿಸಿದರೆ ತಾಳೆ ಬೆಳೆಯಿಂದ ಹೆಚ್ಚಿನ ಆದಾಯ ಬರುತ್ತದೆ.
ಅವರು 60 ಟನ್ ತಾಳೆ ಹಣ್ಣು ಬೆಳೆಯುತ್ತಾರೆ. ಒಂದು ಟನ್ ಗೆ 16,000 ರೂಪಾಯಿ ಕಂಪನಿ ಕೊಡುತ್ತದೆ, 2,000 ರೂಪಾಯಿ ಬೋನಸ್ ಕೊಡುತ್ತಾರೆ. ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಬರುತ್ತದೆ. ಮರ ಎತ್ತರ ಹೋದಂತೆ ಗೊಂಚಲು ದೊಡ್ಡದಾಗಿ ಬರುತ್ತದೆ. ಗೊಂಚಲು 25 ಕೆಜಿ ತೂಕ ಇರುತ್ತದೆ. ತಾಳೆ ಗೊನೆಯನ್ನೆ ಮಾರಾಟ ಮಾಡಲಾಗುತ್ತದೆ.
ಮುಕುಂದ ಅವರು ತಾಳೆ ಬೆಳೆಯನ್ನು ಬೆಳೆಯುವುದರೊಂದಿಗೆ ಕಾಳುಮೆಣಸು, ಬೀನ್ಸ್ ಬೆಳೆಯುತ್ತಾರೆ ಅಲ್ಲದೆ ಭತ್ತವನ್ನು ಬೆಳೆಯುತ್ತಾರೆ ಹಾಗೂ ನೂರು ಮೇಕೆಗಳ ಫಾರ್ಮ್ ಅನ್ನು ಕೂಡ ಮಾಡಿದ್ದಾರೆ. ತಾಳೆ ಬೆಳೆಗೆ ಕಂಪನಿ ಗೊಬ್ಬರವನ್ನು ಕೊಡುತ್ತದೆ. ತಾಳೆ ಹಣ್ಣು ಕಿತ್ತಳೆ ಹಣ್ಣಿನ ಬಣ್ಣದಲ್ಲಿರುತ್ತದೆ.
ತಾಳೆ ಬೆಳೆಯ ಬಗ್ಗೆ ಕೆಲವು ಮೂಢನಂಬಿಕೆಗಳು ಇದ್ದವು ಆದರೆ ಮುಕುಂದ ಅವರು 18 ವರ್ಷದಿಂದ ಬೆಳೆಯುತ್ತ ಬಂದಿದ್ದು ಅವರಿಗೆ ಯಾವುದೆ ರೀತಿಯಲ್ಲಿ ನಷ್ಟ ಆಗಿಲ್ಲ. ತಾಳೆ ಬೆಳೆಯನ್ನು 15 ದಿನಗಳಿಗೊಮ್ಮೆ ಕಟಾವು ಮಾಡಬೇಕಾಗುತ್ತದೆ, ಒಮ್ಮೆ ಕಟಾವು ಮಾಡಿದಾಗ 2-3 ಟನ್ ತಾಳೆ ಬೆಳೆ ಸಿಗುತ್ತದೆ. ತಾಳೆ ನೆಟ್ಟು ಎರಡರಿಂದ ಮೂರುವರ್ಷದಲ್ಲಿ ಫಲ ಬರುತ್ತದೆ. ತಾಳೆ ಬೆಳೆ ಬೆಳೆಯಲು ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಮುಕುಂದ ಅವರು ಡ್ರಿಪ್ ಮೂಲಕ ನೀರನ್ನು ಒದಗಿಸುತ್ತಾರೆ.
ಬಹಳಷ್ಟು ರೈತರು ತಾಳೆ ಬೆಳೆಯನ್ನು ಬೆಳೆಯಲು ಹೆದರುತ್ತಾರೆ ಅವರಿಗೆ ಮುಕುಂದ ಅವರು ತಾಳೆ ಬೆಳೆಯನ್ನು ಬೆಳೆಯಲು ಹೆದರುವ ಅವಶ್ಯಕತೆ ಇಲ್ಲ. ಎಣ್ಣೆಯ ಬೆಲೆ ಹೆಚ್ಚಾದಂತೆ ತಾಳೆ ಬೆಳೆಯ ಬೆಲೆಯು ಏರಿಕೆಯಾಗುತ್ತಾ ಹೋಯಿತು. ಒಂದು ಎಕರೆಗೆ 57 ತಾಳೆಮರಗಳನ್ನು ಬೆಳೆಸಬಹುದು. ಯಾರಾದರೂ ತಾಳೆ ಬೆಳೆಯಲು ಪ್ರಯತ್ನಿಸುತ್ತಿದ್ದರೆ ಅವರನ್ನು ಹೆದರಿಸುವುದನ್ನು ಬಿಟ್ಟು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲ ಬೆಳೆಗಳ ಬೆಲೆ ಏರುಪೇರು ಆಗುತ್ತಲೆ ಇರುತ್ತದೆ ಆದರೆ ತಾಳೆ ಬೆಳೆಯ ಬೆಲೆ ಏರುಪೇರು ಆಗುವುದು ಕಡಿಮೆ. ಕಂಪನಿಯವರು ಹೇಳಿದ ಮಾರ್ಕೆಟ್ ನಲ್ಲಿ ತಾಳೆ ಬೆಳೆಯನ್ನು ಹಾಕಬೇಕು ಮತ್ತು ರೈತರೆ ತೂಕ ಮಾಡಬೇಕು. ಬೆಳೆಯು ಬಂದ ತೂಕ ಅದರ ಬೆಲೆ ಎಲ್ಲ ಮಾಹಿತಿ ರೈತರ ಮೊಬೈಲ್ ಗೆ ಮೆಸೇಜ್ ಬಂದಿರುತ್ತದೆ. ಮಿಶ್ರ ಬೇಸಾಯ ಮಾಡುವುದರಿಂದ ಭೂಮಿ ಫಲವತ್ತಾಗುತ್ತದೆ. ಮುಕುಂದ ಅವರಿಗೆ ಬರುವ ಆದಾಯದಲ್ಲಿ ಅವರ ಮೂರು ಜನ ಮಕ್ಕಳು ಓದುತ್ತಿದ್ದಾರೆ ಅಲ್ಲದೆ ಅವರು ಸೈಟ್ ಖರೀದಿಸಿದ್ದಾರೆ. ರೈತರು ಹೆದರದೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಆದಾಯ ಗಳಿಸಬಹುದು. ದುಡಿಯದೆ ಶೋಕಿ ಮಾಡುವುದರಿಂದ ಆದಾಯ ಗಳಿಸಲು ಸಾಧ್ಯವಿಲ್ಲ. ಜಮೀನು ಹೆತ್ತ ತಾಯಿ ಇದ್ದಂತೆ ಎಂದು ಮುಕುಂದ ಅವರು ರೈತರಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430