ಹಳ್ಳಿಗಳಲ್ಲಿ ಕಂಡುಬರುವ ಸಣ್ಣನೆಯ ತೊಂಡೆಕಾಯಿ ಹಳ್ಳಿಗರಿಗೆ ಪರಿಚಿತವಾದ ತರಕಾರಿಯಾಗಿದೆ. ಪೇಟೆಗಳಲ್ಲಿ ಇದೆ ತರಕಾರಿಯನ್ನು ಹಣ ಕೊಟ್ಟು ಖರೀದಿಸುತ್ತಾರೆ. ತೊಂಡೆಕಾಯಿಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಆದರೆ ಪ್ರಯೋಜನಗಳ ಬಗ್ಗೆ ಹಳ್ಳಿಗರಿಗೆ ತಿಳಿದಿಲ್ಲ. ಹಾಗಾದರೆ ತೊಂಡೆಕಾಯಿಯ ಆರೋಗ್ಯಕರ ಪ್ರಯೋಜನವನ್ನು ಈ ಲೇಖನದಲ್ಲಿ ನೋಡೋಣ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಚಪ್ಪರಗಳಲ್ಲಿ ತೊಂಡೆಕಾಯಿ ಕಂಡುಬರುತ್ತದೆ, ತೊಂಡೆಕಾಯಿಗೆ ಸೌತೆಕಾಯಿ ಎಂದೂ ಕೂಡ ಹೇಳುತ್ತಾರೆ. ತೊಂಡೆಕಾಯಿ ನೋಡಲು ಸೌತೆ ಕಾಯಿಯಂತೆ ಒಳಗಿನ ಬೀಜವು ಸಹ ಸೌತೆಕಾಯಿ ಬೀಜದಂತೆ ಇರುತ್ತದೆ. ತೊಂಡೆಕಾಯಿ ಗಾತ್ರದಲ್ಲಿ ಬೆರಳಿನಷ್ಟು ಇರುತ್ತದೆ. ತೊಂಡೆಕಾಯಿಯನ್ನು ಕತ್ತರಿಸಿದಾಗ ಬೆರಳಿಗೆ ಅಂಟಿನ ದ್ರವ ಹಿಡಿದುಕೊಳ್ಳುತ್ತದೆ
ಈ ಕಾರಣದಿಂದ ಜನರು ಹೆಚ್ಚು ತೊಂಡೆಕಾಯಿಯನ್ನು ಬಳಸಲು ಇಷ್ಟಪಡುವುದಿಲ್ಲ. ತೊಂಡೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿವೆ. ತೊಂಡೆಕಾಯಿ ಬಳ್ಳಿಯಲ್ಲಿ ಬಿಡುತ್ತದೆ. ಬಹಳ ಹಿಂದಿನ ಕಾಲದಿಂದಲೂ ತೊಂಡೆಕಾಯಿ, ಬಳ್ಳಿ, ಬೇರು, ಹೂವುಗಳನ್ನು ಔಷಧಿಯ ಗಿಡಮೂಲಿಕೆಯಾಗಿ ಅನೇಕ ರೋಗಗಳ ನಿವಾರಣೆಗೆ ಬಳಸುತ್ತಿದ್ದರು. ಮಲಬದ್ಧತೆ ಸಮಸ್ಯೆಯನ್ನು ಎದುರಿಸುವವರು ತೊಂಡೆಕಾಯಿಯನ್ನು ಸೇವಿಸಬೇಕು.
ತೊಂಡೆಕಾಯಿಯಲ್ಲಿ ಅಧಿಕ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ. ಮಧುಮೇಹವು ಇಂದಿನ ಕಾಲದಲ್ಲಿ ವಿಶ್ವಮಟ್ಟದ ಸಮಸ್ಯೆಯಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಸಾಮಾನ್ಯವಾದರೆ ಮಧುಮೇಹವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಇನ್ಸುಲಿನ್ ಪ್ರಮಾಣ ಅಸಾಮಾನ್ಯವಾದಾಗ ಮಧುಮೇಹ ಕಂಡುಬರುತ್ತದೆ.
ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ತೊಂಡೆಕಾಯಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ ನಿಯಂತ್ರಣದಲ್ಲಿಡುವ ಸಾಮರ್ಥ್ಯ ತೊಂಡೆಕಾಯಿಗಿದೆ. ಹಿಂದಿನ ಕಾಲದಲ್ಲಿ ಹಿರಿಯರು ಸಕ್ಕರೆಯ ಪ್ರಮಾಣ ಹೆಚ್ಚಿರುವವರಿಗೆ ತೊಂಡೆಕಾಯಿಯನ್ನು ಸೇವಿಸಲು ಸಲಹೆ ನೀಡುತ್ತಿದ್ದರು.
ಕ್ಯಾನ್ಸರ್ ಭಯಾನಕ ರೋಗದ ಹೆಸರನ್ನು ಕೇಳಿದರೆ ಭಯವಾಗುತ್ತದೆ. ಕ್ಯಾನ್ಸರ್ ಕೆಲವೊಮ್ಮೆ ಅದಾಗದೆ ಬರುತ್ತದೆ ಕೆಲವೊಮ್ಮೆ ನಾವು ತಂದುಕೊಳ್ಳುತ್ತೇವೆ. ನಮ್ಮ ದೈನಂದಿನ ಜೀವನ ಶೈಲಿ, ಧೂಮಪಾನ ಹಾಗೂ ಮಧ್ಯಪಾನದಿಂದ ಕ್ಯಾನ್ಸರ್ ಬರುವುದು ಸಹಜ. ಕ್ಯಾನ್ಸರ್ ನಿವಾರಣೆಗೆ ಅನೇಕ ಚಿಕಿತ್ಸೆಗಳಿವೆ ಆದರೆ ರೋಗ ಬರುವುದಕ್ಕಿಂತ ಬರದಂತೆ ತಡೆಯುವುದು ಮುಖ್ಯವಾಗಿದೆ. ಪ್ರಕೃತಿದತ್ತವಾದ ಕೆಲವೊಂದು ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಬಳಸಬೇಕು. ಕ್ಯಾನ್ಸರ್ ನಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿ ತೊಂಡೆಕಾಯಿಗಿದೆ. ತೊಂಡೆಕಾಯಿ ಪಲ್ಯ, ಸಾರು ಹೀಗೆ ಸೇವಿಸುತ್ತಾ ಬಂದಲ್ಲಿ ಮನುಷ್ಯನನ್ನು ಕ್ಯಾನ್ಸರ್ ನಿಂದ ದೂರವಿಡುತ್ತದೆ.
ಆಯುರ್ವೇದದಲ್ಲಿ ತೊಂಡೆಕಾಯಿಯ ಬಳ್ಳಿ, ಬೇರು, ಎಲೆ, ಕಾಯಿಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಕಜ್ಜಿ, ತುರಿಕೆ, ಕುಷ್ಠ ರೋಗದಂತಹ ಖಾಯಿಲೆಗಳಿಗೆ ಬಳಸಲಾಗುತ್ತಿತ್ತು. ತೊಂಡೆಕಾಯಿಯಲ್ಲಿ ಕ್ಯಾಲ್ಷಿಯಂ ಅಂಶ ಹೆಚ್ಚಾಗಿದ್ದು ಕಿಡ್ನಿಯಲ್ಲಿ ಕಲ್ಲು ಆಗದಂತೆ ನೋಡಿಕೊಳ್ಳುತ್ತಿತ್ತು ಆದ್ದರಿಂದ ನಿಯಮಿತವಾಗಿ ತೊಂಡೆಕಾಯಿಯನ್ನು ಸೇವಿಸಬೇಕು. ದೇಹದಲ್ಲಿ ಕಬ್ಬಿಣ ಅಂಶದ ಕೊರತೆ, ರಕ್ತ ಹೀನತೆ, ನಿಶಕ್ತಿ ಸಮಸ್ಯೆ ಕಾಡುತ್ತದೆ ಆಗ ಕಬ್ಬಿಣಾಂಶ ಹೆಚ್ಚಿರುವ ತರಕಾರಿಗಳನ್ನು ಸೇವಿಸಬೇಕು. ತೊಂಡೆಕಾಯಿಯಲ್ಲಿ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ರಕ್ತ ಹೀನತೆ ನಿಶಕ್ತಿ ಸಮಸ್ಯೆಯನ್ನು ದೂರಮಾಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ತೊಂಡೆಕಾಯಿ ಬಳಸಿ ಆರೋಗ್ಯವಾಗಿರಿ.