ಪ್ರತಿಯೊಂದು ತರಕಾರಿಯು ತನ್ನದೆ ಆದ ವಿಶಿಷ್ಟ ಗುಣವನ್ನು ಹೊಂದಿರುತ್ತದೆ ಕೆಲವು ತರಕಾರಿಯನ್ನು ಕಹಿ, ಕಡು ವಾಸನೆ ಎಂಬ ಕಾರಣಕ್ಕೆ ಸೇವಿಸುವುದಿಲ್ಲ. ಮೂಲಂಗಿ ವಾಸನೆ ಎಂಬ ಕಾರಣಕ್ಕಾಗಿ ಬಹಳಷ್ಟು ಜನರು ಸೇವಿಸುವುದಿಲ್ಲ ಆದರೆ ಮೂಲಂಗಿಯು ಹೇರಳವಾದ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಮೂಲಂಗಿ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.

ಮಾರ್ಕೆಟ್ ನಲ್ಲಿ ಎಲ್ಲಿ ನೋಡಿದರೂ ಬಿಳಿ ಮೂಲಂಗಿ ತರಕಾರಿಯ ಕಾರುಬಾರು. ಬಹಳಷ್ಟು ಜನರಿಗೆ ಮೂಲಂಗಿ ತರಕಾರಿ ಎಂದರೆ ಆಗುವುದಿಲ್ಲ ಅದರ ವಾಸನೆಗೆ ಯಾರೂ ಇಷ್ಟಪಡುವುದಿಲ್ಲ ಆದರೆ ಮೂಲಂಗಿ ಸ್ವಲ್ಪ ಕಡು ವಾಸನೆ ಹೊಂದಿದೆ ಎನ್ನುವ ಕಾರಣವನ್ನು ಬಿಟ್ಟರೆ ಆರೋಗ್ಯಕರವಾಗಿ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ಆಗಾಗ ಮೂಲಂಗಿ ಗಡ್ಡೆ ಹಾಗೂ ಸೊಪ್ಪಿನ ಸಾರು ಪಲ್ಯ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಮೂಲಂಗಿ ಪೊಟ್ಯಾಷಿಯಂ, ಪೋಲಿಕ್ ಆಮ್ಲ, ಆಂಟಿಆಕ್ಸಿಡೆಂಟ್ ಗಳು, ಗಂಧಕದ ಸಂಯುಕ್ತದಿಂದ ತುಂಬಿದೆ. ಮೂಲಂಗಿ ಜೀರ್ಣಕ್ರಿಯೆಗೆ ನೆರವಾಗುತ್ತದೆ ಮೂಲಂಗಿ ಸೊಪ್ಪಿನ ಎಲೆಯ ಮೇಲ್ಪದರವನ್ನು ಸೇವಿಸಬೇಕು ಇದರಲ್ಲಿ 6 ಪಟ್ಟು ಹೆಚ್ಚು ವಿಟಮಿನ್ ಸಿ ಹಾಗೂ ಬೇರುಗಳಲ್ಲಿ ಇರುವುದಕ್ಕಿಂತ ಹೆಚ್ಚು ಕ್ಯಾಲ್ಷಿಯಂ ಇರುತ್ತದೆ. ಮೂಲಂಗಿ ಸೇವನೆಯಿಂದ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು. ತೂಕ ಇಳಿಸಿಕೊಳ್ಳುವವರ ಆಹಾರದಲ್ಲಿ ಮೂಲಂಗಿ ತಪ್ಪದೆ ಇರಬೇಕು.

ಕಾಮಾಲೆ ರೋಗದ ಚಿಕಿತ್ಸೆಗೆ ಮೂಲಂಗಿ ಎಲೆಗಳನ್ನು ಬಳಸಬಹುದು ಕಾಮಾಲೆ ರೋಗಕ್ಕೆ ಒಂದು ಲೋಟದಷ್ಟು ತಾಜಾ ಮೂಲಂಗಿ ಎಲೆಗಳನ್ನು ಅರೆದು ಹಿಂಡಿ ಸಂಗ್ರಹಿಸಿದ ರಸವನ್ನು ಏನನ್ನು ಬೆರೆಸದೆ ಹಾಗೆಯೆ ಕುಡಿಯಬೇಕು. ಈ ರಸದಲ್ಲಿರುವ ಪೋಷಕಾಂಶಗಳು ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಕರುಳುಗಳಿಂದ ತ್ಯಾಜ್ಯವನ್ನು ನಿವಾರಿಸಲು ನೆರವಾಗುವ ಮೂಲಕ ಯಕೃತ್ತಿನ ಭಾರವನ್ನು ಕಡಿಮೆ ಮಾಡುತ್ತದೆ ಇದರಿಂದ ಕಾಮಲೆ ರೋಗ ಶೀಘ್ರ ಗುಣವಾಗುತ್ತದೆ.

ಮೂಲಂಗಿಗಳನ್ನು ತುರಿದು ಹಿಂಡಿ ರಸ ಸಂಗ್ರಹಿಸಿ ಮೊದಲು ಕಾಲು ಕಪ್ ನಷ್ಟು ನಂತರ ಪ್ರತಿದಿನ ಅರ್ಧ ಕಪ್ ನಷ್ಟು ಒಂದು ತಿಂಗಳವರೆಗೆ ಕುಡಿಯಬೇಕು, ಇದು ಕುಡಿಯಲು ಸ್ವಲ್ಪ ಖಾರ ವಾಗಿರುತ್ತದೆ. ಹೀಗೆ ಮಾಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ. ಎರಡು ವರ್ಷದಿಂದ ಕೊರೋನವೈರಸ್ ನಮ್ಮನ್ನು ದಿನೆದಿನೆ ಕಾಡುತ್ತಿದ್ದು ಇಂತಹ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು.

ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಡಿ ಸಿಕ್ಸ್ ನಾರಿನಂಶ ಹಾಗೂ ಖನಿಜಾಂಶ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೇಹಕ್ಕೆ ಆಂಟಿಆಕ್ಸಿಡೆಂಟ್ ಗಳು ಅವಶ್ಯವಾಗಿ ಬೇಕಾಗುತ್ತದೆ ಏಕೆಂದರೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಸರಿಯಾದ ಕೆಲಸ ಮಾಡಲು ಮೂಲಂಗಿ ಅವಶ್ಯವಿದೆ. ರಕ್ತದೊತ್ತಡ ಹೆಚ್ಚಾದರೂ ಸಮಸ್ಯೆ ಆಗುತ್ತದೆ ಮೂಲಂಗಿ ಸೇವನೆಯಿಂದ ರಕ್ತದೊತ್ತಡ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಚಳಿಗಾಲದಲ್ಲಿ ನಮ್ಮ ದೇಹದ ರಕ್ತದೊತ್ತಡ ಏರುಪೇರಾಗುತ್ತದೆ. ವಯಸ್ಸಾದವರು ಚಳಿಗಾಲದ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು ಇದಕ್ಕೆ ಕಾರಣ ದೇಹದಲ್ಲಿ ಪೊಟ್ಯಾಷಿಯಂ ಹಾಗೂ ಸೋಡಿಯಂ ಸಮತೋಲನ ತಪ್ಪುವುದರಿಂದ ರಕ್ತದೊತ್ತಡ ಉಂಟಾಗುತ್ತದೆ. ಮೂಲಂಗಿಗೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವಂತೆ ಹೃದಯದ ಅಪಧಮನಿಗಳನ್ನು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ದೇಹದಲ್ಲಿ ರಕ್ತದ ಒತ್ತಡ ಏರುಪೇರಾಗದಂತೆ ನೋಡಿಕೊಳ್ಳುವ ಸಾಮರ್ಥ್ಯವಿದೆ. ಈ ಮಾಹಿತಿ ನಿಜಕ್ಕೂ ಉತ್ತಮ ಆರೋಗ್ಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ತಿಳಿಸಿ, ಮೂಲಂಗಿಯನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!