ರಾಜಸ್ಥಾನದ ಸಿಖಾರ್ ಜಿಲ್ಲೆಯಲ್ಲಿ ಇರುವ ಬೇರಿ ಹಳ್ಳಿಯಲ್ಲಿ ವಾಸಿಸುವ ಇವರ ಹೆಸರು ಸಂತೋಷಿ ದೇವಿ , ಗಂಡ ರಾಮ್ ಕರನ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಾ ಇದ್ದಾರೆ. ಮನೆ ವಿಭಜನೆ ಆದಾಗ ರಾಮ್ ಕರನ್ ಪಾಲಿಗೆ ಒಂದೂವರೆ ಎಕರೆ ಜಮೀನು ಬಂತು. ಜನ ದೇವಿಯವರನ್ನ ನೋಡಿ ನಿನ್ನ ಮೂವರು ಮಕ್ಕಳನ್ನು ಓದಿಸಿ ಅವರಿಗೆ ಸರಿಯಾಗಿ ಊಟವನ್ನು ಸಹ ಕೊಡಲು ಸಾಧ್ಯ ಇಲ್ಲ ಎಂದು ಅವರನ್ನು ಹೀಯಾಳಿಸುತ್ತ ಇದ್ದರು. ಇದನ್ನ ಒಂದು ಸವಾಲ್ ಆಗಿ ಸ್ವೀಕರಿಸಿದ ದೇವಿ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ಮಾರಾಟ ಮಾಡಿ ೨೨೦ ದಾಳಿಂಬೆ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನೆಟ್ಟಿದರು ಹಾಗೂ ಉಳಿದ ಹಣದಿಂದ ಗಿಡಗಳಿಗೆ ತುಂತುರು ನೀರಿನ ವ್ಯವಸ್ಥೆ ಮಾಡಿದರು. ಬೇರೆ ಕೆಲಸದವರನ್ನು ಇಟ್ಟುಕೊಳ್ಳುವ ದೇವಿ ಅವರಿಗೆ ಸಂಜೆ ಆದ ಕೂಡಲೇ ಗಂಡ ಮತ್ತು ಮಕ್ಕಳು ಸಹಾಯ ಮಾಡುತ್ತಾ ಇದ್ದರು.
ಒಂದು ಚೂರೂ ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಸಗಣಿಯಿಂದ ಮಾಡಿದ ಗೊಬ್ಬರವನ್ನು ದಾಳಿಂಬೆ ಗಿಡಗಳಿಗೆ ಹಾಕಿದರು. ಗಿಡಗಳು ದಾಳಿಂಬೆ ಹಣ್ಣುಗಳನ್ನೂ ಬಿಡಲು ಪ್ರಾರಂಭಿಸಿದಾಗ ಗಿಡಗಳನ್ನ ಟ್ರಿಮ್ ಮಾಡುತ್ತಿದ್ದ ದೇವಿ ಅವರು ಅನಾವಶ್ಯಕವಾಗಿ ಚೆನ್ನಾಗಿ ಬೆಳೆಯುತ್ತಿದ್ದ ಗಿಡಗಳ ಕೊಂಬೆಗಳನ್ನು ಕತ್ತರಿಸಿದರು. ಇದರಿಂದ ಗಿಡಗಳು ಚೆನ್ನಾಗಿ ಹಣ್ಣನ್ನು ಪೋಷಣೆ ಮಾಡುತ್ತಿತ್ತು. ಇದರಿಂದಾಗಿ ದಾಳಿಂಬೆ ಹಣ್ಣಿನ ಗಾತ್ರ ದೊಡ್ಡದಾಯಿತು. ಮೂರು ವರ್ಷದ ನಂತರ ಮೊದಲ ಬೆಳೆಯ ಲಾಭ ಬಂದು ಮೂರು ಲಕ್ಷ ಹಣ ಗಳಿಸಿದ್ದರು. ದೇವಿ ಅವರು ದಾಳಿಂಬೆ ಗಿದಾಗ ಸುತ್ತ ಮೂರು ಫೀಟ್ ಅಷ್ಟು ಕಟ್ಟೆ ಕಟ್ಟಿದ್ದರಿಂದ ಗಿಡಗಳಿಗೆ ಒಳ್ಳೆಯ ತೇವಾಂಶ ಸಿಗುತ್ತಿತ್ತು. ಹಾಗೆ ದಾಳಿಂಬೆ ಮರಗಳ ನಡುವೆ ಜಾಗ ಇದ್ದ ಕಾರಣ ಮೂಸಂಬೇ, ನಿಂಬೆ ಹಾಗೂ ಸೇಬು ಗಿಡಗಳನ್ನ ಸಹ ನೆಟ್ಟಿದ್ದರು. ಜಮೀನಿನಲ್ಲಿ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಿದರು. ಇವರು ಬೆಳೆದ ಆರ್ಗ್ಯಾನಿಕ್ ದಾಲಿಂಬೆಯನ್ನು ರುಚಿ ನೋಡಿದ ಜನ ಅವರ ತೋಟಕ್ಕೆ ಬಂದು ದಾಳಿಂಬೆ ಹಣ್ಣುಗಳನ್ನು ಖರೀದಿ ಮಾಡಿ ಹೋಗುತ್ತಿದ್ದಾರೆ. ಹಾಗಾಗಿ ದೇವಿ ಅವರು ಹಣ್ಣುಗಳನ್ನು ಯಾವುದೇ ಮಧ್ಯವರ್ತಿಗಳಿಗೆ ಮಾರಾಟ ಮಾಡುವುದಿಲ್ಲ.
ಇನ್ನೊಂದು ಹೆಜ್ಜೆ ಇಟ್ಟು ದೇವಿ ಅವರು ದಾಳಿಂಬೆ ಮರದ ಕತ್ತರಿಸಿದ ರೆಂಬೆಗಳನ್ನು ಬಳಸಿಕೊಂಡು ಅದರಿಂದ ದಾಳಿಂಬೆ ನರ್ಸರಿ ಪ್ರಾರಂಭಿಸಿದ್ದಾರೆ. ಜನ ಮುಗಿಬಿದ್ದು ದೇವಿ ಅವರ ನರ್ಸರಿಯಿಂದ ಗಿಡಗಳನ್ನ ಖರೀದಿ ಮಾಡುತ್ತಿದ್ದಾರೆ. ಹೀಗೆ ಪ್ರತಿ ವರ್ಷ ದಾಳಿಂಬೆ ಹಣ್ಣಿನಿಂದ ಹತ್ತು ಲಕ್ಷ ಹಾಗೂ ಇತರೇ ಹಣ್ಣುಗಳಿಂದ ಹದಿನೈದು ಲಕ್ಷ ಆದಾಯ ಗಳಿಸುತ್ತಾ ಇದ್ದಾರೆ. ಹಲವಾರು ಅವಾರ್ಡ್ ಗಳಿಂದ ಬಂದ ಹಣವನ್ನು ಉಪಯೋಗಿಸಿಕೊಂಡು ಇಂದು ಗೆಸ್ಟ್ ಹೌಸ್ ನಿರ್ಮಿಸಿ ತನ್ನ ತೋಟದಲ್ಲಿನ ವ್ಯವಸಾಯ ಪದ್ಧತಿಯನ್ನು ತಿಳಿಯಲು ಬಂದ ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.
ಪ್ರತಿ ದಿನ ಹದಿನೈದು ಇಪ್ಪತ್ತು ಜನ ತೋಟ ನೋಡಲು ಬರುತ್ತಾರೆ. ಅವರೆಲ್ಲರಿಗೂ ದೇವಿ ಅವರೇ ಅಡುಗೆ ಮಾಡಿ ಊಟ ಕೊಡುತ್ತಾರೆ. ತನ್ನ ಮೂವರು ಮಕ್ಕಳನ್ನು ಪಿಯುಸಿ ಅಗ್ರಿಕಲ್ಚರ್ ಓದಿಸಿರುವ ದೇವಿ ಅವರು ಮಕ್ಕಳಿಗೆ ಜೇವನದ ಹಾದಿಯನ್ನು ಹಾಕಿಕೊಟ್ಟಿದ್ದಾರೆ. ಇತ್ತೀಚೆಗೆ ಅಷ್ಟೆ ಮಗಳ ಮದುವೆ ಮಾಡಿ ಅವರಿಗೂ ಸಹ ಗಿಡಗಳನ್ನ ಕೊಟ್ಟಿದ್ದಾರೆ. ಏನೂ ಅಲ್ಲದ ದೇವಿ ಅವರು ಇಂದು ವ್ಯಸಾಯದಿಂದ, ಹಾಗು ಅವರ ಪರಿಶ್ರಮದಿಂದ ದೇಶ ವಿದೇಶಗಳಲ್ಲಿ ಹೆಸರುವಾಸಿ ಆಗಿದ್ದಾರೆ.