ಮನುಷ್ಯನ ದೇಹಾರೋಗ್ಯವನ್ನು ಕಾಪಾಡಲು ಸಹಕಾರಿಯಾಗುವ ಸೊಪ್ಪುಗಳಲ್ಲಿ ಮೆಂತ್ಯ ಸೊಪ್ಪು ಕೂಡ ಪ್ರಮುಖ ಪಾತ್ರವಹಿಸುತ್ತದೆ ಹಾಗು ಇಂದಿನ ಆದುನಿಕ ಜಗತ್ತಿನ ಜನರ ಅತ್ಯಾಧುನಿಕ ಜೀವನ ಶೈಲೈಯಲ್ಲಿ ತಲೆ ಕೂದಲ ಬಗ್ಗೆ ಯಾರು ತಾನೇ ತಲೆ ಕೆಡಿಸಿಕೊಳ್ಳುವುದಿಲ್ಲ ಹೇಳಿ ಅನೇಕರಿಗೆ ಕೂದಲುದುರುವಿಕೆಯೇ ಒಂದು ದೊಡ್ಡ ಸಮಸ್ಯೆಯಾಗಿ ಬಾದಿಸುತ್ತದೆ. ತಮ್ಮ ಕೆಲಸದ ಒತ್ತಡದಲ್ಲಿ ಜನರು ತಾವು ಸರಿಯಾದ ಸಮಯಕ್ಕೆ ಊಟ ತಿಂಡಿ ನಿದ್ರೆ ಮಾಡುವುದನ್ನೇ ಮರೆತು ತಮ್ಮ ತಮ್ಮ ಕೆಲ್ಸ ಕಾರ್ಯಗಳಲ್ಲಿ ಕಾರ್ಯೋನ್ಮುಖರಾಗುತ್ತಾರೆ.
ಅದರಲ್ಲೂ ಬಹುಪಾಲು ಜನರು ಸಕ್ಕರೆ ಕಾಯಿಲೆ ಇಂದ ಬಳಲುತ್ತಿದ್ದಾರೆ ಅಲ್ಲದೇ ಸರಿಯಾದ ಔಷದೋಪಚಾರಗಳನ್ನು ಮಾಡದೇ ಜನರ ಆರೋಗ್ಯದ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಾ ಬರುತ್ತಿದೆ. ಎಷ್ಟೋ ಜನಗಳಿಗೆ ಇದಕ್ಕೆಲ್ಲಾ ಪರಿಹಾರ ಮನೆಯಲ್ಲೇ ಇದೆ ಎಂಬುದರ ಅರಿವೆಯೇ ಇಲ್ಲ. ಅಂಥದ್ದೊಂದು ಪಾವಡವನ್ನು ಈ ಮೆಂತ್ಯ ಸೊಪ್ಪು ಸೃಸ್ಟಿಸುತ್ತದೆ ಎಂದರೆ ನೀವು ನಂಬುತ್ತಿರಾ ನಂಬಲೆ ಬೇಕು ಯಾಕಂದ್ರೆ ಈ ಮೆಂತ್ಯ ಸೊಪ್ಪು ಬರಿಯ ಸೊಪ್ಪಲ್ಲ ಹಲವಾರು ರೋಗಗಳಿಗೆ ಇದು ರಾಮಭಾಣವಾಗಿ ಕೆಲಸ ಮಾಡುತ್ತದೆ. ಅದೇನೆಂದು ನಾವು ಹೇಳ್ತೇವೆ ನೋಡಿ.
ಮೆಂತ್ಯ ಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಬೆಳಿಗ್ಗಿನ ತಿಂಡಿಗಳಿಗೆ ಹಲವಾರು ರೀತಿಯ ದಿನನಿತ್ಯದ ಸಾಂಬಾರು ಹಾಗೂ ಪಲ್ಯಗಳಿಗೆ ಈ ಸೊಪ್ಪನ್ನು ಜನಸಾಮಾನ್ಯರು ಸರ್ವೇಸಾಮಾನ್ಯವಾಗಿ ಉಪಯೋಗಿಸುತ್ತಾರೆ ಮೆಂತ್ಯ ಸೊಪ್ಪು ಬರಿಯ ಸೊಪ್ಪಲ್ಲ ಸಾರಜನಕ ಕೊಬ್ಬು ರಂಜಕ ಸುಣ್ಣ ಕಬ್ಬಿಣದ ಅಂಶ ತೇವಾಂಶ ಖನಿಜಾಂಶ ಥಿಯಮಿನ್ ರೈಬೋಫ್ಲಾವಿನ್ ಕಾರ್ಬೊಹೈಡ್ರೆಟ್ಸ್ ನಿಯಾಸಿನ್ ವಿಟಮಿನ್ ಎ ವಿಟಮಿನ್ ಬಿ ಹಾಗೂ ವಿಟಮಿನ್ ಬಿ2 ಈ ಎಲ್ಲ ಪೂಷಕಾಂಶಗಳನ್ನು ತನ್ನಲ್ಲಿ ತುಂಬಿಕೊಂಡ ಒಂದು ಪೋಷಕಾಂಶಗಳ ಬುತ್ತಿ ಎಂದೇ ಹೇಳಬಹುದಾಗಿದೆ .
ಇನ್ನು ಮೆಂತ್ಯ ಸೊಪ್ಪು ಯಾವ್ಯಾವ ರೋಗಗಳಿಗೆ ರಾಮಭಾಣ ಎನ್ನುವುದನ್ನು ತಿಳಿಯೋಣ. ವಾರಕ್ಕೆ ಎರಡು ಬಾರಿ ಮೆಂತ್ಯ ಸೊಪ್ಪನ್ನು ಎಳನೀರಿನಲ್ಲಿ ಅರೆದು ಕೂದಲಿಗೆ ಹಚ್ಚಿಕೊಂಡು ನಂತರ ಎರಡು ತಾಸು ಬಿಟ್ಟು ಸ್ನಾನ ಮಾಡುತ್ತಿದ್ದರೆ ಇದನ್ನು ವಾರಕ್ಕೆ ಮೂರು ಬಾರಿಯಾದರೂ ನಿಯಮಿತವಾಗಿ ಮಾಡುತಾ ಬಂದರೆ ಕೂದಲು ಉದುರುವಿಕೆಯೂ ನಿಲ್ಲಿತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುವಲ್ಲಿ ಸಹಾಯ ಮಾಡುತ್ತದೆ
ಮೆಂತ್ಯ ಸೊಪ್ಪನ್ನು ತುಪ್ಪದಲ್ಲಿ ಉರಿದು ಪ್ರತಿನಿತ್ಯ ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಪಿತ್ತದ ಸಮಸ್ಯೆ ಕಡಿಮೆಯಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಧುಮೇಹದ ಸಮಸ್ಯೆ ಇರುವ ರೋಗಿಗಳು ಒಂದು ಚಮಚ ಮೆಂತ್ಯ ಸೊಪ್ಪಿನ ರಸವನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ರೋಗ ಉಲ್ಬಣಿಸುವುದಿಲ್ಲ ಹಾಗೂ ಉತ್ತಮ ರೀತಿಯಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಮೆಂತ್ಯ ಸೊಪ್ಪನ್ನು ಅರೆದು ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಸಾಮಾನ್ಯ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳುವ ಅಭ್ಯಾಸವನ್ನಿಟ್ಟುಕೊಂಡರೆ ಕ್ರಮೇಣ ಮೊಡವೆಗಳು ಕಡಿಮೆಯಾಗಿ ಮುಖವೂ ಕಾಂತಿಯುತವಾಗುತ್ತದೆ. ಮೆಂತ್ಯ ಸೊಪ್ಪನ್ನು ಅರೆದು ಮೊಲೆಗಳಿಗೆ ಲೇಪಿಸುವುದರಿಂದ ಹಾಲಿನ ಉತ್ಪತ್ತಿ ಸ್ಥಗಿತಗೊಳ್ಳುತ್ತದೆ