ನಮ್ಮ ಸುತ್ತಮುತ್ತ ಇರುವ ಹಲವು ಗಿಡಗಳು ಔಷಧೀಯ ಗುಣವನ್ನು ಹೊಂದಿರುತ್ತದೆ. ಔಷಧೀಯ ಸಸ್ಯಗಳನ್ನು ಬಳಸಿ ಮನೆಯಲ್ಲೇ ಸುಲಭವಾಗಿ ಮನೆಮದ್ದನ್ನು ತಯಾರಿಸಿ ರೋಗವನ್ನು ಗುಣ ಮಾಡಿಕೊಳ್ಳಬಹುದು. ಅಂತಹ ಔಷಧೀಯ ಗುಣ ಹೊಂದಿರುವ ಗಿಡಗಳಲ್ಲಿ ಮುಳ್ಳು ಹರಿವೆ ಗಿಡವು ಒಂದು ಪ್ರಮುಖ ಔಷಧೀಯ ಗಿಡವಾಗಿದೆ. ಈ ಗಿಡದಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಅದರ ಬಳಕೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಂಡುಬರುವ ಮುಳ್ಳು ಹರಿವೆ ಔಷಧೀಯ ಗುಣವನ್ನು ಹೊಂದಿದೆ. ಹರಿವೆ ಗಿಡದ ಜಾತಿಯಲ್ಲಿ ಕೆಂಪು ಹರಿವೆ, ಬಿಳಿ ಹರಿವೆ, ಮುಳ್ಳು ಹರಿವೆ ಎಂಬ ಗಿಡ ಇರುತ್ತದೆ. ಈ ಗಿಡಕ್ಕೆ ಮುಳ್ಳು ಹರಿವೆ, ಕಾಡು ಹರಿವೆ ಎಂತಲೂ ಕರೆಯುತ್ತಾರೆ. ಈ ಗಿಡಕ್ಕೆ ಚಿಕ್ಕ-ಚಿಕ್ಕ ಎಲೆಗಳು ಇರುತ್ತದೆ ಎಲೆಗಳ ಪಕ್ಕದಲ್ಲಿ ಮುಳ್ಳುಗಳಿರುತ್ತವೆ. ಈ ಗಿಡಗಳು ದೇಶದ ಬಹುತೇಕ ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿಯೂ ಕಂಡುಬರುತ್ತದೆ. ರಸ್ತೆ ಪಕ್ಕದಲ್ಲಿ ಈ ಗಿಡಗಳು ಕಾಣಿಸುತ್ತದೆ ಮತ್ತು ಬಹುಬೇಗನೆ ಬೆಳೆಯುತ್ತದೆ. ಹಳ್ಳಿಗಳಲ್ಲಿ ಈ ಸೊಪ್ಪಿನ ಪಲ್ಯ, ಸಾಂಬಾರ್, ಚಟ್ನಿ ಮಾಡುತ್ತಾರೆ. ಈ ಗಿಡದಲ್ಲಿ ಸಾಸಿವೆ ಕಾಳಿನಂತ ಸಣ್ಣ ಸಣ್ಣ ಬೀಜಗಳಿರುತ್ತವೆ. ಈ ಗಿಡಗಳನ್ನು ಬೆಳೆಸಲು ಹೆಚ್ಚಿನ ಗೊಬ್ಬರ, ನೀರು ಬೇಕಾಗುವುದಿಲ್ಲ.
ಆಯುರ್ವೇದದಲ್ಲಿ ಈ ಗಿಡದ ಎಲೆಗಳನ್ನು ಹಿಂದಿನ ಕಾಲದಿಂದ ಇಂದಿನವರೆಗೂ ಬಳಸುತ್ತಾರೆ. ಈ ಗಿಡ ಮನುಷ್ಯನ ದೇಹದ ಮೂಳೆಗಳಿಗೆ ಮರುಜೀವ ಕೊಡುತ್ತದೆ. ದೇಹದ ಯಾವುದೇ ಭಾಗದಲ್ಲಿ ಮೂಳೆ ಮುರಿದು ಹೋದರೆ, ಕ್ರ್ಯಾಕ್ ಆದರೆ ಈ ಮನೆಮದ್ದಿನಿಂದ ಬೇಗ ವಾಸಿಯಾಗುತ್ತದೆ. ಈ ಗಿಡದಲ್ಲಿ ಬಹಳ ನ್ಯೂಟ್ರಿಯೆಂಟ್ಸ್, ವಿಟಮಿನ್ಸ್ ಗಳಿವೆ ಅಲ್ಲದೆ ಜಿಂಕ್, ಕ್ಯಾಲ್ಷಿಯಂ, ಐರನ್, ವಿಟಮಿನ್ಸ್, ಮೆಗ್ನೀಷಿಯಂ ಹೇರಳವಾಗಿ ಇವೆ. ಆಯುರ್ವೇದ ಪಂಡಿತರು ಹಳ್ಳಿ ಮತ್ತು ನಗರಗಳಲ್ಲಿ ಬಿದ್ದು ಮೂಳೆ ಮುರಿದಿದ್ದರೆ, ಮೂಳೆ ಕ್ರ್ಯಾಕ್ ಬಂದಿದ್ದರೆ ಅದನ್ನು ಕೂಡಿಸಲು ಈ ಗಿಡದ ಮದ್ದನ್ನು ಮಾಡುತ್ತಾರೆ, ಮೂಳೆಯನ್ನು ಕೂಡಿಸುವ ಶಕ್ತಿ ಮುಳ್ಳು ಹರಿವೆಗೆ ಇದೆ. ಆಕ್ಸಿಡೆಂಟ್ ಆಗಿದ್ದು ಮೂಳೆ ಮುರಿದರೆ ಈ ಗಿಡದಿಂದ ಬೇಗ ಉಪಶಮನ ಮಾಡಿಕೊಳ್ಳಬಹುದು. ಮೂಳೆ ಮುರಿದರೆ ಸಾಮಾನ್ಯವಾಗಿ ವೈದ್ಯರ ಬಳಿ ಹೋದರೆ ಬ್ಯಾಂಡೇಜ್ ಹಾಕುತ್ತಾರೆ ಆಗ ವಾಸಿಯಾಗಲು ಮೂರು ತಿಂಗಳು ಅವಕಾಶ ಬೇಕು.
ಮೂಳೆ ಮುರಿದಾಗ ಡಾಕ್ಟರ್ ಬಳಿ ಸರಿಯಾಗಿ ಬ್ಯಾಂಡೇಜ್ ಹಾಕಿಸಿಕೊಂಡ ನಂತರ ಮುಳ್ಳು ಹರಿವೆ ಎಲೆಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಎರಡು ಮೆಣಸಿನ ಕಾಳನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 15-20 ಎಂಎಲ್ ರಸವನ್ನು ಕುಡಿಯುವುದರಿಂದ ಮೂಳೆ ಜಾಯಿಂಟ್ ಆಗಲು ಪ್ರಾರಂಭವಾಗುತ್ತದೆ. ಡಾಕ್ಟರ್ ಕೊಟ್ಟ ಔಷಧೀಯ ಜೊತೆಗೆ ಈ ಮನೆ ಮದ್ದನ್ನು ತೆಗೆದುಕೊಳ್ಳಬಹುದು. ಮೂಳೆ ನೋವು ಇರುವವರು ಮುಳ್ಳು ಹರಿವೆಯ ಸಾರು, ಪಲ್ಯ ಮಾಡಿಕೊಂಡು ಸೇವಿಸಬೇಕು. ಮುಳ್ಳು ಹರಿವೆ ಸೊಪ್ಪನ್ನು ಸೇವಿಸುವುದರಿಂದ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿ ಕೆಲವರಿಗೆ ಹಸಿವಾಗುವುದಿಲ್ಲ ಅಲ್ಲದೆ ಮಲಬದ್ಧತೆ, ಫೈಲ್ಸ್ ಸಮಸ್ಯೆ ಇರುವವರಿಗೆ ಮುಳ್ಳು ಹರಿವೆ ಸೊಪ್ಪಿನ ಪಲ್ಯ, ಸಾರನ್ನು ಸೇವಿಸಬೇಕು.
ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ ಈ ಸೊಪ್ಪಿನ ರಸವನ್ನು ಹಾಕಿ ಪಟ್ಟಿ ಕಟ್ಟಬೇಕು ಇದರಿಂದ ನೋವು ಬೇಗ ನಿವಾರಣೆಯಾಗುತ್ತದೆ. ಈ ಸೊಪ್ಪನ್ನು ಗರ್ಭಿಣಿ ಮಹಿಳೆಯರು ಹಾಗೂ ಎದೆಹಾಲು ಕುಡಿಸುವ ಮಹಿಳೆಯರು ಸೇವಿಸಬಾರದು ಉಳಿದಂತೆ ಎಲ್ಲರೂ ಈ ಸೊಪ್ಪನ್ನು ಸೇವಿಸಬಹುದು. ಈ ಸೊಪ್ಪನ್ನು ಪ್ರತಿದಿನ ಸೇವಿಸುವುದರಿಂದ ಮೂಳೆಯ ಆರೋಗ್ಯವನ್ನು ಹೆಚ್ಚಿಸಿಕೊಂಡು ಬಹಳಷ್ಟು ವರ್ಷಗಳವರೆಗೂ ಆರಾಮಾಗಿ ಜೀವನ ಕಳೆಯಬಹುದು. ಈ ಸೊಪ್ಪನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಈ ಗಿಡಕ್ಕೆ ಮುಳ್ಳುಗಳು ಇರುವುದರಿಂದ ಹುಷಾರಾಗಿ ಬಳಸಬೇಕು. ಇಷ್ಟೊಂದು ಆರೋಗ್ಯಕರ ಪ್ರಯೋಜನಗಳಿರುವ ಈ ಸೊಪ್ಪನ್ನು ಮನೆಯಲ್ಲಿ ಬೆಳೆಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.