ದೇಶದ ಜನತೆ ಕೋವಿಡ್ ನೈಂಟೀನ್ ಎಂಬ ವೈರಸ್ ನಿಂದ ಕಳೆದ ಒಂದು ವರ್ಷದಿಂದ ಹೈರಾಣಾಗಿದ್ದಾರೆ. ಬಹಳಷ್ಟು ಜನರು ಕೊರೋನ ವೈರಸ್ ನಿಂದ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ವೆಂಟಿಲೇಟರ್ ಸಹಾಯದಿಂದ ಬದುಕಿ ಬಂದಿದ್ದಾರೆ. ಕೊರೋನ ವೈರಸ್ ನಿಂದ ಜೀವ ಉಳಿಸಿಕೊಂಡು ಬಂದವರು ಸ್ವಲ್ಪ ಜಾಗೃತಿ ತಪ್ಪಿದರೆ ಫಂಗಸ್ ಅಟ್ಯಾಕ್ ಮಾಡುತ್ತದೆ. ಈ ಬಗ್ಗೆ ಜಾಗೃತಿ ಇರಲಿ ಭಯ ಬೇಡ ಎಂದು ಜನರಲ್ಲಿ ಡಾಕ್ಟರ್ ಅಂಜನಪ್ಪ ಅವರು ವಿಡಿಯೋದಲ್ಲಿ ಜಾಗೃತಿ ಮೂಡಿಸಿದ್ದಾರೆ, ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಹಾಗಾದರೆ ಬ್ಲ್ಯಾಕ್ ಫಂಗಸ್ ಬಗ್ಗೆ ಡಾಕ್ಟರ್ ಅಂಜನಪ್ಪ ಅವರು ಏನು ಹೇಳಿದ್ದಾರೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕೊರೋನ ವೈರಸ್ ಮತ್ತು ಫಂಗಸ್ ಬಗ್ಗೆ ಡಾಕ್ಟರ್ ಅಂಜನಪ್ಪ ಅವರು ಸಂಪೂರ್ಣ ಮಾಹಿತಿಯನ್ನು ಈ ಮೂಲಕ ತಿಳಿಸಿದ್ದಾರೆ. ಮನುಷ್ಯನಿಗೆ ಇನ್ಫೆಕ್ಷನ್ ಆಗುವುದು ವೈರಸ್, ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ. ಇದೀಗ ಬ್ಲ್ಯಾಕ್ ಫಂಗಸ್ ಹೆಚ್ಚಾಗುತ್ತಿದೆ ಇದನ್ನು ಕಪ್ಪು ಶಿಲೀಂಧ್ರ ಎನ್ನುವರು. ಫಂಗಸ್ ಎಲ್ಲ ಕಡೆ ಇರುತ್ತದೆ ಮನೆಯಲ್ಲಿ ತೆಂಗಿನ ಚಿಪ್ಪನ್ನು ಎಸೆಯದೆ ಹಾಗೆ ಇಟ್ಟರೆ ಸ್ವಲ್ಪ ದಿನದ ನಂತರ ಬೂಸ್ಟ್ಲ ಹಿಡಿಯುತ್ತದೆ ಇದನ್ನು ಫಂಗಸ್ ಎನ್ನುವರು. ಕೊರೋನ ಪೋಸಿಟಿವ್ ಬಂದವರು ಲಕ್ಷಣ ಕಂಡುಬರದೆ ಇದ್ದರೆ ಮನೆಯಲ್ಲಿ ಇದ್ದು ಗುಣ ಮಾಡಿಕೊಳ್ಳಬೇಕು ಆದರೆ ಕೆಲವರು ಆಸ್ಪತ್ರೆಗೆ ಹೋಗಿದ್ದಾರೆ, ಇನ್ನೂ ಕೆಲವರಿಗೆ ಉಸಿರಾಡಲು ಕಷ್ಟವಾಗುತ್ತಿತ್ತು ಇದರಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಆಕ್ಸಿಜನ್ ಸಾಕಾಗದೆ ವೆಂಟಿಲೇಟರ್ ಹಾಕುತ್ತಾರೆ ಆಗ ಕೆಲವು ಡ್ರಗ್ಸ್ ಇವೆ ಅದರಲ್ಲಿ ಸ್ಟೀರಾಯ್ಡ್ ಒಂದು ಮುಖ್ಯ ಡ್ರಗ್. ವೆಂಟಿಲೇಟರ್ ಹಾಕುವುದರಿಂದ ಕೆಲವರು ಸಾಯುತ್ತಾರೆ ಆಗ ಸ್ಟೀರಾಯ್ಡ್ ನಿಂದ ಕೆಲವರು ಉಳಿಯುತ್ತಾರೆ. ಅಂತವರು ಮನೆಗೆ ಬಂದ ನಂತರ ಧೂಳು, ಮಣ್ಣಿನಲ್ಲಿ ಕೆಲಸ ಮಾಡಿದರೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ.
ಈ ಫಂಗಸ್ ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ. ಈ ಫಂಗಸ್ ಕಪ್ಪು ಕಲರ್ ಇರುವುದರಿಂದ ಬ್ಲ್ಯಾಕ್ ಫಂಗಸ್ ಎಂಬ ಹೆಸರು ಬಂತು. ನಾಲಿಗೆ, ಚರ್ಮದ ಮೇಲೆ ರಿಂಗೊರಂ ಎಂದು ಆಗುತ್ತದೆ ಅದು ಕಾಮನ್ ಫಂಗಸ್. ಸ್ಟೀರಾಯ್ಡ್ ತೆಗೆದುಕೊಂಡ ಮನುಷ್ಯನಲ್ಲಿ ರಿಜಿಸ್ಟೆನ್ಸ್, ಇಮ್ಯುನಿಟಿ ಪವರ್ ಇರುವುದಿಲ್ಲ ಇದರಿಂದ ಫಂಗಸ್ ದೇಹದ ಒಳಗೆ ಸುಲಭವಾಗಿ ಪ್ರವೇಶ ಮಾಡುತ್ತದೆ. ಬ್ಲ್ಯಾಕ್ ಫಂಗಸ್ ಬಂದವರಿಗೆ ಮೂಗು ಊದಿಕೊಳ್ಳುವುದು, ಕಣ್ಣು ಕೆಂಪಾಗುತ್ತದೆ. ಸೈನಸ್ ಒಳಗೆ ಇನ್ಫೆಕ್ಷನ್ ಆಗುತ್ತದೆ ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಕಣ್ಣಿಗೆ ಸಂಬಂಧಿಸಿದ ರಕ್ತನಾಳಗಳು ಬ್ಲಾಕ್ ಆಗಿ ಕಣ್ಣು ದೃಷ್ಟಿಯನ್ನು ಕಳೆದುಕೊಳ್ಳುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಕೊರೋನ ವೈರಸ್ ನಿಂದ ಗುಣವಾಗಿ ನಂತರ ಈ ಫಂಗಸ್ ಅಟ್ಯಾಕ್ ಆದರೆ ಸಣ್ಣ ಆಸ್ಪತ್ರೆಗಳಲ್ಲಿ ಇದಕ್ಕೆ ಟ್ರೀಟ್ಮೆಂಟ್ ಇಲ್ಲ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್ ಮಾಡಲಾಗುತ್ತದೆ ಒಂದು ಇಂಜೆಕ್ಷನ್ ಮಾಡಿದರೆ ಗುಣವಾಗುತ್ತದೆ ಆದರೆ ಒಂದು ಇಂಜೆಕ್ಷನ್ ಗೆ 7,000 ರೂಪಾಯಿ ಕೊಡಬೇಕು ಅದನ್ನು ಬ್ಲಾಕ್ ನಲ್ಲಿ ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿವರೆಗೆ ಮಾರುತ್ತಾರೆ ಅಲ್ಲದೆ ಅದು ಕೂಡ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಬ್ಲ್ಯಾಕ್ ಫಂಗಸ್ ಕೂಡ ಹೊಸ ಖಾಯಿಲೆ ಅಲ್ಲ ಪ್ರತಿವರ್ಷ ಎರಡರಿಂದ ಮೂರು ಕೇಸ್ ಕಂಡುಬರುತ್ತಿತ್ತು ಆದರೆ ಈಗ ವಾರಕ್ಕೆ ಎರಡರಿಂದ ಮೂರು ಕೇಸ್ ಪತ್ತೆ ಆಗುತ್ತಿದೆ. ಕೊರೋನ ಬಂದ ಎಲ್ಲ ರೋಗಿಗಳಿಗೆ ಈ ಖಾಯಿಲೆ ಬರುವುದಿಲ್ಲ, ಐಸಿಯು ಅಡ್ಮಿಟ್ ಆಗಿ ಜೀವ ಉಳಿಸಿಕೊಂಡು ಬರುವವರಿಗೆ ಬರುವ ಸಾಧ್ಯತೆ ಇರುತ್ತದೆ. ಧೂಳು, ಮಣ್ಣಿನ ಹತ್ತಿರ ಹೋಗಬಾರದು ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಕೂಡ ಮಾಸ್ಕ್ ಹಾಕಬೇಕು, ಕೈಯನ್ನು ಬಾಯಿ, ಮೂಗಿನ ಹತ್ತಿರ ಟಚ್ ಮಾಡಬಾರದು. ವೈರಸ್ ಗೆ ತನ್ನದೇ ಆದ ಜೀವಕೋಶ ಇರುವುದಿಲ್ಲ ಮನುಷ್ಯನ ಜೀವಕೋಶದ ಸಹಾಯದಿಂದ ಬದುಕುತ್ತದೆ ಆದರೆ ಫಂಗಸ್ ಗೆ ತನ್ನದೇ ಆದ ಜೀವಕೋಶ ಇರುತ್ತದೆ ಅವಕಾಶ ಸಿಕ್ಕರೆ ಮನುಷ್ಯನ ದೇಹವನ್ನು ಪ್ರವೇಶ ಮಾಡುತ್ತದೆ ಆದ್ದರಿಂದ ಇದನ್ನು ಅವಕಾಶವಾದಿ ಫಂಗಸ್ ಎನ್ನುವರು.
ಮಾಸ್ಕ್ ಹಾಕಿಕೊಳ್ಳುವುದು, ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಕೋವಿಡ್ ಸಂಪೂರ್ಣ ಗುಣಮುಖ ಆಗುವವರೆಗೆ ಎಲ್ಲರೂ ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್ ಅನುಸರಿಸಬೇಕು. ನಮ್ಮ ಹೆಲ್ತ್ ಮಿನಿಸ್ಟರ್ ಬ್ಲ್ಯಾಕ್ ಫಂಗಸ್ ಗುಣವಾಗುವ ಇಂಜೆಕ್ಷನ್ ಅನ್ನು ತರಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಡಾಕ್ಟರ್ ಅಂಜನಪ್ಪ ಅವರು ಸರ್ಕಾರ ಬಡವರಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಹಣ ಇರುವವರು ಹೆಚ್ಚು ಹಣ ಕೊಟ್ಟು ಜೀವ ಉಳಿಸಿಕೊಳ್ಳುತ್ತಾರೆ ಆದರೆ ಬಡವರಿಗೆ ಇದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ. ಜನರಲ್ಲಿ ಭಯ ಬೇಡ ಆದರೆ ಎಚ್ಚರಿಕೆ ಇರಲಿ ಎಲ್ಲರೂ ಕೋವಿಡ್ 19 ನಿಯಮಗಳನ್ನು ಪಾಲಿಸಿ ಎಚ್ಚರಿಕೆ ವಹಿಸಿದರೆ ಬ್ಲ್ಯಾಕ್ ಫಂಗಸ್ ಬರದಂತೆ ತಡೆಯಬಹುದು ಎಂದು ಅವರು ಈ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. ನಿಜಕ್ಕೂ ಡಾಕ್ಟರ್ ಅಂಜನಪ್ಪ ಅವರ ಈ ಮಾತುಗಳನ್ನು ಎಲ್ಲರೂ ಕೇಳಲೇಬೇಕು ಹೆದರಿಕೆ ಪಡುವುದು ಬೇಡ ಹೆದರಿಕೆಯಿಂದ ಖಾಯಿಲೆ ಹೆಚ್ಚಾಗುತ್ತದೆ. ಇನ್ನಾದರೂ ಕೊರೋನ ಬಗ್ಗೆ ಆಗಲಿ, ಫಂಗಸ್ ಬಗ್ಗೆ ಆಗಲಿ ಎಚ್ಚರಿಕೆ ವಹಿಸೋಣ