ಗರ್ಭಿಣಿಯಾಗಲು ಬಯಸುವವರು ಆ ದಿನಗಳಲ್ಲಿ ಸೇರಿದರೆ ಉತ್ತಮ

0 1,642

ಎಲ್ಲಾ ಮಹಿಳೆಯರಿಗೂ ತಾನೂ ತಾಯಿ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಮತ್ತು ಅದು ಸ್ತ್ರೀ ಆಗಿ ಹುಟ್ಟಿದವಳ ಹೆಬ್ಬಯಕೆ ಕೂಡಾ. ಆದರೆ ಮಹಿಳೆಯರ ಜೀವನ ಸುಲಭವಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿ ಕೂಡಾ ಒಂದಲ್ಲ ಒಂದು ಕಠಿಣ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದರಲ್ಲೂ ಮಹಿಳೆಯರಿಗೆ ತಾಯಿ ಆಗುವ ಪ್ರಯತ್ನ ಬಹಳ ಕಷ್ಟ. ಕಾರಣಾಂತರಗಳಿಂದ ಮಹಿಳೆಗೆ ಗರ್ಭ ಧರಿಸಲು ತಡವಾದರೆ ಸಮಾಜದ ಹತ್ತು ಹಲವಾರು ಪ್ರಶ್ನೆಗಳಿಗೆ , ದುಷಣೆಗಳಿಗೆ ಒಳಗಾಗಬೇಕಾಗುತ್ತದೆ . ಯಾವುದೇ ಗಂಭೀರ ಸಮಸ್ಯೆ ಇರಲಿ, ಇಲ್ಲದೆ ಇದ್ದರೂ ಈ ನಡುವೆ ಕೆಲವೊಮ್ಮೆ ಕೆಲವರಿಗೆ ಈ ರೀತಿ ಉಂಟಾಗುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಡವಾಗಿ ಮದುವೆ ಆಗುವುದು ಅಥವಾ ಬೇಗನೆ ಮದುವೆ ಆದರೂ ಸಹ ಮಕ್ಕಳನ್ನು ಮಾಡಿಕೊಳ್ಳಲು ಕಾಲಾವಕಾಶ ಬೇಕು ಎಂದು ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಮಾಡಿಕೊಳ್ಳದೆ ಇರುವುದು ಇವೆಲ್ಲ ಕಾರಣಗಳಿಂದ ಮಹಿಳೆಯರಲ್ಲಿ ನೈಸರ್ಗಿಕವಾಗಿ ಗರ್ಭಧಾರಣೆ ಎನ್ನುವುದು ಅತ್ಯಂತ ಕಡಿಮೆ ಆಗಿದೆ.

ಹಾಗಾಗಿ ಸಾಕಷ್ಟು ಜನರು ಗರ್ಭ ಧರಿಸಲು ಹಲವಾರು ರೀತಿಯ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾ ಇದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಎಂದರೆ ಮಹಿಳೆಯರ ಗರ್ಭಕೋಶದಲ್ಲಿ ಇರುವ ನ್ಯೂನ್ಯತೆ ಆಗಿರಬಹುದು ಅಥವಾ ಪುರುಷರ ವೀರ್ಯದ ಸಂಖ್ಯೆ ಹಾಗೂ ಗುಣಮಟ್ಟದಲ್ಲಿ ಉಂಟಾದ ಸಮಸ್ಯೆ ಕೂಡಾ ಆಗಿರಬಹುದು. ಸಹಜವಾಗಿ ನೈಸರ್ಗಿಕವಾಗಿ ಗರ್ಭಧಾರಣೆ ಆಗದೇ ಇರಲು ಬರೀ ಮಹಿಳೆಯನ್ನು ಮಾತ್ರ ಧುಷಣೆ ಮಾಡುವುದು ಸರಿಯಲ್ಲ ಪುರುಷ ಮತ್ತು ಮಹಿಳೆ ಇಬ್ಬರೂ ಪಾಲುದಾರರು ಆಗುತ್ತಾರೆ. ನೈಸರ್ಗಿಕವಾಗಿ ಗರ್ಭಧಾರಣೆ ಆಗುವುದರ ಸಲುವಾಗಿ ಪುರುಷ ಮತ್ತು ಮಹಿಳೆಯರು ಈ ಒಂದು ಕ್ಯಾಲೆಂಡರ್ ಅನುಸರಿಸುವುದು ಉತ್ತಮ.

ಹೇಗೆ ರೈತರು ಮಳೆ ಬಂದಾಗ ಮಾತ್ರ ಬೀಜ ಬಿತ್ತನೆ ಮಾಡಿ ಫಸಲು ಪಡೆಯುತ್ತಾರೆ ಅದೇ ರೀತಿ ಮಹಿಳೆಯನ್ನು ಭೂಮಿಗೆ ಹೋಲಿಕೆ ಮಾಡಿದರೆ, ಪುರುಷರ ವೀರ್ಯ ಎಂಬ ಬೀಜ ಸರಿಯಾದ ಸಮಯದಲ್ಲಿ ಮಹಿಳೆಯ ಅಂಡಾಣುವಿನ ಜೊತೆ ಬೆರೆತಾಗ ಮಾತ್ರ ಗರ್ಭಧಾರಣೆ ಆಗಿ ಮಗುವೆಂಬ ಫಸಲು ಪಡೆಯಲು ಸಾಧ್ಯ. ಹಾಗಿದ್ದರೆ ಅಂತಹ ಸರಿಯಾದ ಸಮಯ ಯಾವುದು? ಮಹಿಳೆಯ ಋತುಚಕ್ರದ ಸಮಯ ಇಪ್ಪತ್ತೆಂಟು ದಿನಗಳಿಗೆ ಒಮ್ಮೆ ಆಗುವ ಹಾಗೇ ಮೊದಲು ಮಾಡಿಕೊಳ್ಳಬೇಕು ಇದಕ್ಕೆ ಸರಿಯಾದ ಚಿಕಿತ್ಸೆಯ ಅಗತ್ಯ ಇದ್ದರೆ ಅದನ್ನು ಪಡೆದುಕೊಳ್ಳಬೇಕು.

ಋತುಚಕ್ರ ಸರಿಯಾಗಿ ಆಗಲು ಆರಂಭ ಆದ ನಂತರ ಮಹಿಳೆಯ ಋತು ಚಕ್ರ ಆರಂಭವಾದ ದಿನದಿಂದ ಹಿಡಿದು ಹನ್ನೊಂದು ಹನ್ನೆರಡು ಹದಿಮೂರು ಮತ್ತು ಹದಿನಾಲ್ಕು ಈ ನಾಲ್ಕು ದಿನಗಳು ಪುರುಷ ಹಾಗೂ ಮಹಿಳೆಯ ಸಂಪರ್ಕ ಆದರೆ ಗರ್ಭ ನಿಲ್ಲುತ್ತದೆ. ಈ ನಾಲ್ಕು ದಿನದ ಅವಧಿಯಲ್ಲಿ ಮಹಿಳೆಯ ಅಂಡಾಣು ಬಿಡುಗಡೆ ಆಗುವುದರಿಂದ ಈ ಸಮಾಯ ಗರ್ಭಧಾರಣೆಗೆ ಉತ್ತಮ.

Leave A Reply

Your email address will not be published.