ಕೊರೋನ ವೈರಸ್ ತಗುಲಿ ಬಹಳಷ್ಟು ಜನರು ಸವನಪ್ಪಿದ್ದಾರೆ, ಇನ್ನೂ ಕೆಲವರು ಕೊರೋನ ವೈರಸ್ ನಿಂದ ತಮ್ಮವರನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಕೊರೋನ ವೈರಸ್ ಬರದಂತೆ ತಡೆಯಬಹುದು. ನಾಟಿ ಕೋಳಿ ಮಾಂಸ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ ಇದರಿಂದ ನಾಟಿ ಕೋಳಿಗೆ ಬೇಡಿಕೆ ಬಂದಿದೆ. ಹಾಗಾದರೆ ಎಲ್ಲಿ ನಾಟಿ ಕೋಳಿಗೆ ಬೇಡಿಕೆ ಬಂದಿದೆ ಹಾಗೂ ನಾಟಿ ಕೋಳಿಯ ಮಾಂಸವನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಕೊರೋನದಿಂದ ಬಹಳಷ್ಟು ಜನರು ಬಲಿಯಾಗಿದ್ದಾರೆ ಅಲ್ಲದೆ ಜನರಲ್ಲಿ ಭಯ ಹುಟ್ಟಿದೆ. ಎಲ್ಲಿ ನೋಡಿದರೂ ಕೊರೋನ, ಕೊರೋನ, ಕೊರೋನ. ಎಲ್ಲರಿಗೂ ಯಾವಾಗ ಕೊರೋನದಿಂದ ಮುಕ್ತಿ ಸಿಗುತ್ತದೆ ಎಂದು ಅನಿಸಿದೆ. ಕೊರೋನ ವೈರಸ್ ತಗುಲಿ ಈಗಾಗಲೆ ಬಹಳಷ್ಟು ಜನರು ಬಲಿಯಾಗಿದ್ದಾರೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಕೊರೋನ ವೈರಸ್ ನ ವಿರುದ್ಧ ನಮ್ಮ ದೇಹ ಹೋರಾಡುತ್ತದೆ. ನಾಟಿ ಕೋಳಿ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ ಆದ್ದರಿಂದ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಾಟಿ ಕೋಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸದ್ಯ ಕೊರೋನ ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ. ಹೀಗಾಗಿ ಈ ನಾಟಿ ಕೋಳಿಗಳಿಗೆ ಭಾರಿ ಬೇಡಿಕೆ ಬಂದಿದೆ. ಅಂತೆಯೆ ಹಳ್ಳಿಗಳಿಂದ ಕೋಳಿ ಮಾರಾಟಗಾರರು ಬೆಳಗ್ಗೆಯೇ ಪಟ್ಟಣಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 6-10 ಗಂಟೆಯೊಳಗೆ ಬಂದು ಕೋಳಿಗಳನ್ನು ಮಾರಾಟ ಮಾಡಿಕೊಂಡು ಹೋಗುತ್ತಿದ್ದಾರೆ. ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಿದೆ ಬೆಳಗ್ಗೆ 8 ಗಂಟೆಯ ಒಳಗೆ ಯಾವುದೇ ಚೌಕಾಸಿ ಇಲ್ಲದೆ ಕೋಳಿಗಳೆಲ್ಲಾ ಮಾರಾಟವಾಗುತ್ತಿದೆ ಅಷ್ಟರ ಮಟ್ಟಿಗೆ ಬೇಡಿಕೆ ಕಂಡುಬರುತ್ತಿದೆ.
ಕಳೆದ ವರ್ಷ ಸಾಮಾನ್ಯವಾಗಿರುವ ಒಂದು ನಾಟಿ ಕೋಳಿಗೆ 250 ರೂಪಾಯಿ ಇತ್ತು ಆದರೆ ಇದೀಗ ಅದರ ಬೆಲೆ 400 ರೂಪಾಯಿ ಆಗಿದೆ. ಕೊಂಚ ದುಬಾರಿ ಎನಿಸಿದರೂ ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಮಾರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ನಾಟಿ ಕೋಳಿಯ ಮಾಂಸದಲ್ಲಿ ಪ್ರೊಟೀನ್, ವಿಟಮಿನ್ ಅಂಶ ಹೆಚ್ಚಾಗಿರುತ್ತದೆ. ದೇಹದ ಮಾಂಸಖಂಡಗಳು ಗಟ್ಟಿಯಾಗಿ ಕೊರೋನ ವಿರುದ್ಧ ಹೋರಾಟ ಮಾಡಲು ಸಹಾಯಕಾರಿ ಆಗುತ್ತದೆ ಅನ್ನುವುದು ವೈದ್ಯರ ಅಭಿಪ್ರಾಯ. ಭಾರತದಲ್ಲಿ ಬೇರೆ ಮಾಂಸಗಳಿಗಿಂತ ಕೋಳಿಮಾಂಸ ಹೆಚ್ಚು ಮಾರಾಟವಾಗುತ್ತದೆ. ಕೋಳಿಯ ಎದೆಯಭಾಗದಲ್ಲಿ ಹೆಚ್ಚು ಮಾಂಸ ಕಡಿಮೆ ಚರ್ಮ ಮತ್ತು ಮೂಳೆ ಇರುವುದರಿಂದ ಹೆಚ್ಚಾಗಿ ಇಷ್ಟಪಡುತ್ತಾರೆ. ಕೋಳಿಯ ಮಾಂಸದಲ್ಲಿ ದೇಹಕ್ಕೆ ಬೇಕಾಗುವ ಗುಡ್ ಕೊಲೆಸ್ಟ್ರಾಲ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಕೊಬ್ಬಿನಂಶ ಕೇವಲ 3% ಮಾತ್ರ ಇರುತ್ತದೆ.
ಕೋಳಿಯ ಮಾಂಸದಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಬಿ12 ಇರುತ್ತದೆ ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ, ಖನಿಜಾಂಶ, ಪೊಟ್ಯಾಷಿಯಂ ಇದೆ, ಸ್ನಾಯುಗಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಕೋಳಿಮಾಂಸ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಅಲ್ಲದೆ ಆಯಾಸವನ್ನು ನಿವಾರಿಸುತ್ತದೆ. ಹೃದಯದ ಸಮಸ್ಯೆಯನ್ನು ನಿವಾರಿಸುತ್ತದೆ, ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಕೊರೋನ ವೈರಸ್ ಯಾವುದೇ ರೀತಿಯಲ್ಲಿ ನಮ್ಮ ದೇಹವನ್ನು ಅಟ್ಟ್ಯಾಕ್ ಮಾಡುವುದಿಲ್ಲ. ಈ ಎಲ್ಲ ಕಾರಣದಿಂದ ಗದಗ ಜಿಲ್ಲೆಯಲ್ಲಿ ಕೋಳಿ ಮಾರಾಟ ಭರ್ಜರಿ ನಡೆಯುತ್ತಿದೆ.