ಹಿಂದಿನ ಕಾಲದಲ್ಲಿ ಮನೆಯಲ್ಲಿ ಧಾನ್ಯಗಳನ್ನು ಕುಟ್ಟಿ ಹಿಟ್ಟನ್ನು ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಹೊಸ ಹೊಸ ಮಷೀನ್ ಗಳನ್ನು ಕಂಡುಹಿಡಿದರು ಇಂತಹ ಮಷೀನ್ ಗಳು ಜನರಿಗೆ ಉದ್ಯೋಗವನ್ನು ಸೃಷ್ಟಿ ಮಾಡಿತು ಇಂತಹುದೇ ಒಂದು ಮಲ್ಟಿ ಗ್ರೈಂಡರ್ ಮಷೀನ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಸಣ್ಣ ಸಣ್ಣ ಹಳ್ಳಿಗಳಲ್ಲಿ ಗಿರಣಿಗಳು ಇರುವುದು ತುಂಬಾ ಕಡಿಮೆ. ಇರುವ ಗಿರಣಿಗಳಲ್ಲಿ ಗೋಧಿ, ರಾಗಿ , ಜೋಳ, ಮೆಣಸಿನ ಕಾಯಿ, ಅರಿಶಿನ ಹಿಟ್ಟನ್ನು ಮಾಡಲು ಬೇರೆ ಬೇರೆ ಮಷೀನ್ ಗಳನ್ನು ಬಳಸಲಾಗುತ್ತದೆ. ಈ ಎಲ್ಲ ಮಷೀನ್ ಗಳು ಒಂದೇ ಗಿರಣಿಯಲ್ಲಿ ಸಿಗುವುದು ವಿರಳ. ಗ್ರಾಹಕರು ಕಾಳುಗಳನ್ನು ಹಿಟ್ಟು ಮಾಡಿಸಲು ಬೇರೆ ಬೇರೆ ಗಿರಣಿಗಳಿಗೆ ಹೋಗಬೇಕಾಗುತ್ತದೆ.
ಇತ್ತೀಚೆಗೆ ಚಿಬ್ಬರ್ ಅಗ್ರಿ ಇಕ್ವಿಪ್ಮೆಂಟ್ ಎಂಬ ಪಂಜಾಬಿನ ಮಷೀನ್ ತಯಾರಕರು ಆಹಾರ ಧಾನ್ಯಗಳನ್ನು ಪುಡಿ ಮಾಡುವ ಒಂದು ಮಷೀನ್ ಕಂಡುಹಿಡಿದಿದ್ದಾರೆ. ಇಲ್ಲಿ ಎಲ್ಲಾ ರೀತಿಯ ಗೋಧಿ, ರಾಗಿ, ಜೋಳ, ಅಕ್ಕಿ, ಅರಿಶಿನ ಮೆಣಸಿನಕಾಯಿಯನ್ನು ಪುಡಿ ಮಾಡಬಹುದು. ಈ ಮಷೀನ್ ಗಳು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಈ ಮಷೀನ್ ಕೊಂಡಾಗ ಇದರಲ್ಲಿ ಬಳಸುವ ಜಾಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮಷೀನ್ ಗಳಲ್ಲಿ ಜಾಳಿಗೆಗಳು ಮುಖ್ಯವಾದ ಪಾತ್ರವಹಿಸುತ್ತದೆ ಮಷೀನ್ ಗಳು ಜಾಳಿಗೆಗಳ ಮೂಲಕ ಧಾನ್ಯಗಳನ್ನು ಹಿಟ್ಟು ಮಾಡುತ್ತದೆ.
ಈ ಮಷೀನ್ ಗೆ ಹೆಚ್ಚಿನ ವಿದ್ಯುತ್ ಅವಶ್ಯಕತೆ ಇರುವುದಿಲ್ಲ.ಮನೆಯ ವಿದ್ಯುತ್ ನಿಂದ ಕೂಡ ಇದನ್ನು ಉಪಯೋಗಿಸಬಹುದು. ಇದರ ಮೂಲಕ ಅಕ್ಕಿ ಗಿರಣಿ ಕೂಡ ಮಾಡಬಹುದಾಗಿದೆ. ಬಟನ್ ಒತ್ತುವುದರ ಮೂಲಕ ಇದರ ಕಾರ್ಯ ನಿರ್ವಹಿಸಬಹುದು. ಮಷೀನ್ ನಲ್ಲಿ ತುಂಬಾ ಸುಲಭವಾಗಿ ಜಾಳಿಗೆಗಳನ್ನು ಬದಲಾಯಿಸಬಹುದು.ಇದು ಸ್ವಯಂಚಾಲಿತ ಆಗಿದ್ದು ಹೆಚ್ಚಿನ ಕೆಲಸ ಇರುವುದಿಲ್ಲ.ಇದಕ್ಕೆ ಯಾವುದೇ ತರಹದ ಹೆಚ್ಚಿನ ವಿದ್ಯುತ್ ಹಾಗೂ ಲೈಸೆನ್ಸ್ ಕೂಡ ಬೇಕಾಗುವುದಿಲ್ಲ.ಈ ರೀತಿಯ ಮಷೀನ್ ಗಳು ಹಳ್ಳಿಗಳಲ್ಲಿ ತುಂಬಾ ಉಪಯುಕ್ತವಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಪ್ರಾರಂಬಿಸಿ ಹೆಚ್ಚಿನ ಲಾಭ ಕೂಡ ಪಡೆಯಬಹುದು.