ಏಡಿಗಳು ಒಂದು ದಪ್ಪನಾದ ಹೊರಕವಚದಿಂದ ಸಾಮಾನ್ಯವಾಗಿ ಆವರಿಸಲ್ಪಟ್ಟಿರುತ್ತವೆ. ಒಂದು ಏಕ ಜೋಡಿ ಕೊಂಡಿಗಳಿಂದ ಅಂದರೆ ಚಿಮುಟ ಕೊಂಡಿಗಳಿಂದ ಸಜ್ಜುಗೊಂಡಿರುತ್ತವೆ. ಪ್ರಪಂಚದ ಎಲ್ಲಾ ಸಾಗರಗಳಲ್ಲೂ ಏಡಿಗಳು ಕಂಡುಬರುತ್ತವೆಯಾದರೂ ಅನೇಕ ಏಡಿಗಳು ಸಿಹಿನೀರಿನಲ್ಲಿ ಮತ್ತು ನೆಲದ ಮೇಲೆ ಅದರಲ್ಲೂ ನಿರ್ದಿಷ್ಟವಾಗಿ ಉಷ್ಣವಲಯದ ಪ್ರದೇಶಗಳಲ್ಲಿನ ನೆಲದ ಮೇಲೆ ವಾಸಿಸುತ್ತವೆ. ಆದ್ದರಿಂದ ಏಡಿ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಏಡಿಗಳ ಗಾತ್ರವು ವೈವಿಧ್ಯಮಯವಾಗಿರುತ್ತದೆ. ಕೆಲವೇ ಮಿಲಿಮೀಟರುಗಳಷ್ಟು ಅಗಲವಿರುವ ಬಟಾಣಿ ಏಡಿಯಿಂದ ಮೊದಲ್ಗೊಂಡು 4 ಮೀಟರ್ ರವರೆಗಿನ ಉದ್ದದ ಕಾಲನ್ನು ಹೊಂದಿರುವ ಜಪಾನಿ ಜೇಡ ಏಡಿಯವರೆಗೆ ಏಡಿಗಳ ಗಾತ್ರದ ವೈವಿಧ್ಯತೆಯಿದೆ.ಲಭ್ಯವಿರುವ ಏಡಿಯ ಜಾತಿಗಳ ಪೈಕಿ ಸುಮಾರು ಜಾತಿಗಳು ಸಿಹಿನೀರಿನ, ಭೂಚರ ಅಥವಾ ಅರೆಭೂಚರ ಜಾತಿಗಳಾಗಿವೆ. ಪ್ರಪಂಚದ ಉಷ್ಣವಲಯದ ಮತ್ತು ಅರೆಉಷ್ಣವಲಯದ ಪ್ರದೇಶಗಳ ಉದ್ದಗಲಕ್ಕೂ ಅವು ಕಂಡುಬರುತ್ತವೆ.
ಪ್ರಪಂಚದ ಉದ್ದಗಲಕ್ಕೂ ಹಲವಾರು ವಿಭಿನ್ನ ವಿಧಾನಗಳಲ್ಲಿ ಏಡಿಗಳನ್ನು ಒಂದು ಆಹಾರಭಕ್ಷ್ಯವಾಗಿ ಸಿದ್ಧಪಡಿಸಿ ತಿನ್ನಲಾಗುತ್ತದೆ. ಕೆಲವೊಂದು ಜಾತಿಗಳನ್ನು ಇಡಿಯಾಗಿ ತಿನ್ನಲಾಗುತ್ತದೆ. ಮೃದುಚಿಪ್ಪಿನ ಏಡಿಯನ್ನು ಆಹಾರದಲ್ಲಿ ಬಳಸುವಾಗ ಅದರ ಚಿಪ್ಪನ್ನೂ ತಿನ್ನಲಾಗುತ್ತದೆ. ಇನ್ನುಳಿದ ಜಾತಿಗಳ ಏಡಿಗಳನ್ನು ಬಳಸುವಾಗ ಕೇವಲ ಚಿಮುಟಕೊಂಡಿಗಳನ್ನು ಮತ್ತು ಕಾಲುಗಳನ್ನು ತಿನ್ನಲಾಗುತ್ತದೆ. ಏಡಿಗಳಲ್ಲಿ ಅತ್ಯುತ್ತಮ ರುಚಿಕರವಾದ ಮತ್ತು ಸ್ವಾದಿಷ್ಟವಾದ ಎಂದರೆ ಅದು ರಾಜ ಏಡಿ. ರಾಜ ಹಿಡಿಯುವ ಸ್ವಲ್ಪ ದೊಡ್ಡ ಗಾತ್ರದಲ್ಲಿದ್ದು ಇದು ಸಿಹಿನೀರಿನಲ್ಲಿ ಸಿಗುತ್ತದೆ.
ಕೆಲವೊಂದು ಪ್ರದೇಶಗಳಲ್ಲಿ ಮಸಾಲೆಗಳು ಪಾಕಶಾಲೆಯಲ್ಲಿನ ಅಡುಗೆಯ ಅನುಭವವನ್ನು ಸುಧಾರಿಸುತ್ತವೆ. ಏಷ್ಯಾದಲ್ಲಿ ಮಸಾಲಾ ಏಡಿ ಮತ್ತು ಮೆಣಸಿನಕಾಯಿ ಏಡಿಗಳು ಅತೀವವಾಗಿ ಮಸಾಲೆಭರಿತ ಆಹಾರಭಕ್ಷ್ಯಗಳ ಉದಾಹರಣೆಗಳಾಗಿವೆ. ಮೆರಿಲ್ಯಾಂಡ್‌ನಲ್ಲಿ ನೀಲಿ ಏಡಿಯನ್ನು ಅನೇಕವೇಳೆ ಎಲೆಯ ಮಸಾಲೆಯೊಂದಿಗೆ ತಿನ್ನಲಾಗುತ್ತದೆ. ಚೀನಾದಲ್ಲಿ ಹೆಚ್ಚಾಗಿ ಎಲ್ಲಾ ಪ್ರಭೇದದ ಪ್ರಾಣಿಗಳನ್ನು ಸೇವಿಸುತ್ತಾರೆ. ಅವರು ಹೆಚ್ಚಾಗಿ ರಾಜ ಏಡಿಯನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಏಕೆಂದರೆ ಇದು ಅತ್ಯಂತ ಸ್ವಾದಿಷ್ಟಕರವಾದ ಆಹಾರವಾಗಿದೆ.