ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಸಾಧನ ಮೊಬೈಲ್ ಆಗಿದೆ. ಜಗತ್ತಿನಲ್ಲಿ ಮೊಬೈಲ್ ಪ್ರತಿಯೊಬ್ಬರ ನಾಡಿಮಿಡಿತದಂತಾಗಿದೆ. ಮೊಬೈಲ್ ನ ಮೂಲಕ ಪ್ರತಿಯೊಂದು ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ತಾಲೂಕಿನ ಪ್ರತಿಯೊಂದು ವ್ಯಕ್ತಿಯನ್ನು ಕೂಡ ಸಂಪರ್ಕಿಸಬಹುದಾಗಿದೆ. ಜಗತ್ತಿನಲ್ಲಿ ಮೊಬೈಲ್ ಸಂಪರ್ಕ ಸಾಧನವಾಗಿ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಆದ್ದರಿಂದ ನಾವು ಇಲ್ಲಿ ಕಂಪನಿಗಳಲ್ಲಿ ಮೊಬೈಲ್ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿಯೊಂದು ಮೊಬೈಲ್ ತಯಾರಿಕಾ ಕಂಪನಿಯ ಇಂಜಿನಿಯರ್ಗಳು ಸ್ಯಾಂಪಲ್ ಮೊಬೈಲನ್ನು ತಯಾರಿಸಿ ಬೋರ್ಡ್ ಮೀಟಿಂಗ್ನಲ್ಲಿ ಇರಿಸುತ್ತಾರೆ. ಈ ಮೀಟಿಂಗ್ನಲ್ಲಿ ಅದರ ಸ್ಪೆಸಿಫಿಕೇಶನ್ ಅದರ ಡಿಸೈನ್ ಬಗ್ಗೆ ಮೀಟಿಂಗ್ ನಲ್ಲಿ ಚರ್ಚಿಸಿ ಡೈರೆಕ್ಟರ್ಸ್ ಗಳ ಒಪ್ಪಿಗೆ ನಂತರ ಆ ಮಾಡೆಲ್ ನ ಮೊಬೈಲ್ ತಯಾರಿಕೆಯು ಆರಂಭವಾಗುತ್ತದೆ. ಪ್ರತಿಯೊಂದು ಮೊಬೈಲ್ ಕಂಪನಿಯು ಅದರ ತಯಾರಿಕೆಯಲ್ಲಿ 5 ಸ್ಟೆಪ್ ಅನ್ನು ಬಳಸುತ್ತದೆ. ಮೊದಲನೆಯದಾಗಿ ಮೇಕಿಂಗ್ ಆಫ್ ಪ್ರೋಟೋಟೈಪ್ಸ್ , ಎರಡನೆಯದು ಸಾಫ್ಟ್ವೇರ್ ಇನ್ಸ್ಟಾಲೇಶನ್, ಮೂರನೆಯದು ಟೆಸ್ಟಿಂಗ್, ನಾಲ್ಕನೆಯದು ಮಾಸ್ ಪ್ರೊಡಕ್ಷನ್, ಕೊನೆಯದಾಗಿ ಪ್ಯಾಕಿಂಗ್. ಮೊದಲನೆಯದಾಗಿ ಮೊಬೈಲ್ ಬಾಡಿಯನ್ನು ತಯಾರಿಸಲು ದೊಡ್ಡ ದೊಡ್ಡ ಅಲ್ಯೂಮಿನಿಯಂ ಸೀಟುಗಳನ್ನು ಯಂತ್ರದ ಸಹಾಯದ ಮೂಲಕ ಮೊಬೈಲ್ ನ ಗಾತ್ರಕ್ಕೆ ಕಟ್ ಮಾಡಿ ಅದಕ್ಕೆ ಬೇಕಾದ ಜಾಗದಲ್ಲಿ ಹೋಲ್ ಗಳನ್ನು ಮಾಡಿ ತಯಾರಿಸಿಕೊಳ್ಳುತ್ತಾರೆ.
ನಂತರ ಟಚ್ ಸ್ಕ್ರೀನ್ ಅನ್ನು ತಯಾರಿಸಿಕೊಳ್ಳಲು ಗ್ಲಾಸನ್ನು ಯಂತ್ರಗಳ ಸಹಾಯದ ಮೂಲಕ ಮೊಬೈಲ್ ಗಾತ್ರಕ್ಕೆ ಕಟ್ ಮಾಡಿ ಸರಿಯಾಗಿ ತಯಾರಿಸಿಕೊಳ್ಳುತ್ತಾರೆ. ನಂತರ ಗ್ಲಾಸಿಗೆ ಇಂಡಿಯನ್ ಪಿನ್ ಆಕ್ಸೈಡ್ ಕೋಟಿಂಗ್ ಅನ್ನು ಮಾಡುತ್ತಾರೆ. ನಂತರ ಇದಕ್ಕೆ ಟಚ್ ಸ್ಕ್ರೀನ್ ಲೇಯರ್ ಗಳನ್ನು ಸೇರಿಸಿ ಟಚ್ ಸ್ಕ್ರೀನ್ ಗ್ಲಾಸನ್ನು ತಯಾರಿಸಿ ಮಾಡುತ್ತಾರೆ. ನಂತರ ಆ ಟಚ್ಸ್ಕ್ರೀನ್ ಸಂಪೂರ್ಣವಾಗಿ ಕೆಲಸ ಮಾಡುತ್ತಿದೆಯೋ ಎಂಬುದನ್ನು ಪರೀಕ್ಷಿಸುತ್ತಾರೆ. ನಂತರ ಮೊಬೈಲ್ಗೆ ಮದರ್ ರ್ಬೋರ್ಡ್ ಅನ್ನು ತಯಾರಿಸಿಕೊಳ್ಳುತ್ತಾರೆ. ಇದು ಮೊಬೈಲ್ನ ಅತ್ಯಂತ ಮಹತ್ವದ ಭಾಗವಾಗಿದೆ. ಇದರಲ್ಲಿ ಕ್ಯಾಮೆರಾ, ಸ್ಪೀಕರ್, ಮೈಕ್, ಟಚ್ಸ್ಕ್ರೀನ್, ಮೆಮೊರಿ ಕಾರ್ಡ್ ಈ ರೀತಿ ಮೊಬೈಲ್ಗೆ ಸಂಬಂಧಪಟ್ಟ ಎಲ್ಲಾ ಭಾಗಗಳ ಜೊತೆ ಸಂಪರ್ಕವನ್ನು ಹೊಂದಿರುತ್ತದೆ. ಇದರೊಳಗೆ ಮೊಬೈಲ್ನ ಸಂಪೂರ್ಣ ಕೆಲಸದ ಎಲ್ಲಾ ಭಾಗಗಳು ಅಡಕವಾಗಿರುತ್ತದೆ. ಇಂತಹ ಪಿಸಿಬಿ ನಮ್ಮ ಟೆಕ್ನಾಲಜಿಗೆ ಅತ್ಯುತ್ತಮ ನಿದರ್ಶನವಾಗಿದೆ. ಕೇವಲ ಇದರಿಂದ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.
ಇಂತಹ ಪಿಸಿಬಿಯನ್ನು ಮೊಬೈಲ್ ಬಾಡಿ ಒಳಗೆ ಜೋಡಿಸಿ ಮಾಡಿ ನಂತರ ಕ್ಯಾಮೆರಾ ಟಚ್ಸ್ಕ್ರೀನ್ ಮತ್ತು ಇತರ ಭಾಗಗಳನ್ನು ಪಿಸಿಬಿ ಜೊತೆ ಕನೆಕ್ಟ್ ಮಾಡುತ್ತಾರೆ. ನಂತರ ಬಾಡಿಯನ್ನು ಪಿಕ್ಸ್ ಮಾಡಲಾಗುತ್ತದೆ. ಎಲ್ಲಾ ಭಾಗಗಳನ್ನು ಸೇರಿಸಿ ನಂತರ ಸ್ಕ್ರು ಅನ್ನು ಹಾಕಿ ಸರಿಯಾಗಿ ಜೋಡಿಸುತ್ತಾರೆ. ಕೊನೆಯದಾಗಿ ಮೊಬೈಲ್ಗೆ ವಾಟರ್ ಲೆವೆಲ್ ಸ್ಟಿಕ್ಕರ್ ಅನ್ನು ಅಂಟಿಸುತ್ತಾರೆ. ಫೈನಲ್ ಆಗಿ ರೆಡಿಯಾದ ಮೊಬೈಲನ್ನು ಟೆಸ್ಟಿಂಗ್ ಮಾಡುತ್ತಾರೆ. ಮೊದಲನೆಯದಾಗಿ ಪ್ರತಿ ಮೊಬೈಲ್ಗೆ ರೇಡಿಯೋ ಫ್ರೀಕ್ವೆನ್ಸಿ ಯನ್ನು ಚೆಕ್ ಮಾಡಿ ನಂತರ ಬಾಕಿ ಎಲ್ಲಾ ಭಾಗಗಳನ್ನು ಚೆಕ್ ಮಾಡುತ್ತಾರೆ. ನಂತರ ಸಾಫ್ಟ್ವೇರ್ ಇನ್ಸ್ಟಾಲೇಷನ್ ಮಾಡುತ್ತಾರೆ. ನಂತರ ಸಾಫ್ಟ್ವೇರ್ ಗಳು ಸರಿಯಾಗಿ ಕೆಲಸ ಮಾಡುತ್ತಿದೆಯೋ ಎಂಬುದನ್ನು ಚೆಕ್ ಮಾಡುತ್ತಾರೆ. ನಂತರ ಮೊಬೈಲ್ ಗಳಿಗೆ ಐಎಂಇಐ ನಂಬರ್ ಅನ್ನು ಎಡ್ ಮಾಡುತ್ತಾರೆ. ನಂತರ ಪ್ಯಾಕಿಂಗ್ ಮಾಡುತ್ತಾರೆ. ಹೀಗೆ ಮೊಬೈಲನ್ನು ಕಂಪನಿಗಳು ತಯಾರಿಸುತ್ತವೆ.