ಮಾತು ಎಂದರೆ ಮಾನವರು ಮತ್ತು ಕೆಲವು ಪ್ರಾಣಿಗಳು ಬಳಸುವ ಸಂವಹನದ ಧ್ವನಿರೂಪ. ಇದು ಪದಕೋಶದಿಂದ ಪಡೆದ ಘಟಕಗಳ ಪದ ಸಂಬಂಧಿ ಸಂಯೋಜನೆ ಮೇಲೆ ಆಧಾರಿತವಾಗಿದೆ. ಮನುಷ್ಯನ ಜೀವನಕ್ಕೆ ಈ ಮಾತು ಎಷ್ಟು ಉಪಯುಕ್ತಕಾರಿ ಎಂದು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಜಗತ್ತಿನಲ್ಲಿರುವ ಕೆಲವು ಜನರಿಗೆ ಕಡಿಮೆ ಮಾತನಾಡುವವರು ಮತ್ತು ಕೆಲವು ಜನರಿಗೆ ಹೆಚ್ಚು ಮಾತನಾಡುವವರು ಇಷ್ಟವಾಗುತ್ತಾರೆ. ಕಡಿಮೆ ಮಾತನಾಡುವ ಜನರು ಕೆಲವೊಮ್ಮೆ ಕಷ್ಟದಲ್ಲಿ ಸಿಲುಕುತ್ತಾರೆ. ಹಾಗಿದ್ದರೆ ಕಡಿಮೆ ಮಾತನಾಡುವಂತ ವ್ಯಕ್ತಿಗಳಲ್ಲಿರುವ ನಷ್ಟಗಳ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಆಚಾರ್ಯ ಚಾಣಕ್ಯರು ಒಂದು ಶ್ಲೋಕದಲ್ಲಿ ಹೇಳುವ ಪ್ರಕಾರ ಎಲ್ಲಿಯವರೆಗೆ ತನ್ನ ಮಧುರವಾದ ಧ್ವನಿಯು ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಕೋಗಿಲೆಯು ತನ್ನ ದಿನವನ್ನು ಕಳೆಯುತ್ತದೆ. ನಂತರ ಅದರಿಂದ ಬರುವ ಧ್ವನಿಯೂ ಎಲ್ಲರಿಗೂ ಇಷ್ಟವಾಗುತ್ತದೆ. ಇದರ ಅರ್ಥ ಮನುಷ್ಯರು ಮಾತನಾಡುವಾಗ ಮೃದುವಾಗಿ ನಯವಾಗಿ ಮಾತನಾಡಬೇಕು. ಕಹಿಯಾಗಿ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳ್ಳೆಯದಾಗಿದೆ. ಎಲ್ಲಿಯತನಕ ಕೋಗಿಲೆಯ ಬಾಯಿಂದ ಧ್ವನಿಯೂ ಬರುವುದಿಲ್ಲವೋ ಅಲ್ಲಿಯವರೆಗೆ ಕೋಗಿಲೆಯು ಶಾಂತವಾಗಿಯೇ ಇರುತ್ತದೆ.
ಕಾಗೆಯ ಧ್ವನಿ ಕರ್ಕಶವಾಗಿ ಇದ್ದರೂ ಸಹ ಅದು ಕೂಗುವುದನ್ನು ಬಿಡುವುದಿಲ್ಲ. ಆ ಧ್ವನಿಯು ಬೇರೆಯವರಿಗೆ ತುಂಬಾ ತೊಂದರೆಯನ್ನು ನೀಡುತ್ತದೆ. ಅದೇ ರೀತಿ ಮನುಷ್ಯನ ಧ್ವನಿಯು ಎಲ್ಲಿಯವರೆಗೆ ಮಧುರವಾಗಿರುವುದಿಲ್ಲವೊ ಅಲ್ಲಿಯವರೆಗೆ ಅವರು ಶಾಂತವಾಗಿರುವುದು ಉತ್ತಮ. ಈ ರೀತಿ ಮಾಡಿದಾಗ ಜನರು ಅವರನ್ನು ಇಷ್ಟ ಪಡುತ್ತಾರೆ. ಅವರೊಂದಿಗೆ ಸ್ನೇಹ ಬೆಳೆಸಲು ಇಷ್ಟ ಪಡುತ್ತಾರೆ. ಹಾಗೆಂದು ಮನುಷ್ಯನ ನೇರ ನುಡಿಯವರಾಗಿರಬಾರದು. ಉದಾಹರಣೆಗೆ ಕಾಡಿನಲ್ಲಿ ನೇರವಾಗಿರುವ ಮರಗಳನ್ನು ಮೊದಲು ಕತ್ತರಿಸಲಾಗುತ್ತದೆ. ಅಂಕುಡೊಂಕು ಮರಗಳನ್ನು ಹಾಗೆ ಬಿಡಲಾಗುತ್ತದೆ.
ಕಡಿಮೆಯ ಮಾತನಾಡುವ ಜನರು ಇನ್ನೊಬ್ಬರನ್ನು ನಿಂದಿಸುವ ಹಾಗೆ ಮಾತನಾಡುವುದಿಲ್ಲ. ಕೆಲವರು ಕಡಿಮೆ ಮಾತನಾಡುವ ಜನರನ್ನು ನೋಡಿ ಅಪಹಾಸ್ಯ ಮಾಡುತ್ತಾರೆ. ಇಂಥವರು ಯಾವ ಕೆಲಸಕ್ಕೂ ಬರುವುದಿಲ್ಲ. ಮನುಷ್ಯರು ಅವಶ್ಯಕತೆಯಿದ್ದು ಜಾಗದಲ್ಲಿ ಸರಿಯಾಗಿ ಮಾತನಾಡುವುದು ಉತ್ತಮ. ಅಂತಹ ಜಾಗದಲ್ಲಿ ಮೌನವಾಗಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಡಿಮೆ ಮಾತನಾಡುವುದು ಉತ್ತಮವಾಗಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತನಾಡುವುದರಿಂದ ಮಾತ್ರ ನಾವು ಎಲ್ಲ ವಿಚಾರಗಳನ್ನು ಜಯಿಸಬಹುದಾಗಿದೆ. ಇದೇ ರೀತಿ ಪ್ರತಿಯೊಬ್ಬರೂ ಅವಶ್ಯಕತೆಗೆ ತಕ್ಕಂತೆ ಮಾತನಾಡುವುದು ಉತ್ತಮ