ಎಲ್ಲಿ ನೋಡಿದರೂ ಕೊರೋನ ವೈರಸ್ ನ ಸುದ್ದಿ. ನಮ್ಮ ದೇಶದಲ್ಲಿ ಈಗಾಗಲೆ ಕೊರೋನ ವೈರಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ, ಇನ್ನು ಅದೆಷ್ಟು ಜನರು ಈ ಹೆಮ್ಮಾರಿಗೆ ಬಲಿಯಾಗಬೇಕೊ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ನೈಸರ್ಗಿಕವಾಗಿ ವೈರಸ್ ನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಪ್ರಾಣಾಯಾಮ ‌ಹೇಗೆ ಮಾಡುವುದು ಹಾಗೂ ಪ್ರಾಣಾಯಾಮ ಮಾಡುವುದರಿಂದ ಆಗುವ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯ

ಪ್ರಾಣಾಯಾಮ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಋಷಿ-ಮುನಿಗಳು ಗ್ರಂಥದಲ್ಲಿ ಪ್ರಾಣಾಯಾಮ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಉಲ್ಲೇಖಿಸಿದ್ದಾರೆ. ನಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಆಗಿದ್ದರೆ ಅದು ನಿವಾರಣೆಯಾಗುತ್ತದೆ ಎಂದು ವೈದ್ಯರು, ಯೋಗಪಟುಗಳು ಹೇಳುತ್ತಾರೆ. ಪ್ರಾಣಾಯಾಮ ಪ್ರಾಣ‌ ಪ್ಲಸ್ ಆಯಾಮ, ಪ್ರಾಣ ಎಂದರೆ ಉಸಿರು ಗಾಳಿ ಎಂದರ್ಥ, ಆಯಾಮ ಎಂದರೆ ವಿವಿಧ ಭಂಗಿಗಳು. ಗಾಳಿಯನ್ನು ವಿವಿಧ ಭಂಗಿಗಳ ಅಥವಾ ಆಯಾಮಗಳ ಮೂಲಕ ದೇಹಕ್ಕೆ ಕೊಂಡೊಯ್ಯುವುದನ್ನು ಪ್ರಾಣಾಯಾಮ ಎನ್ನುವರು.

ಮನೆಯಲ್ಲಿ ಚೇರ್ ಮೇಲೆ ಕುಳಿತುಕೊಂಡು ಎರಡು ಅಂಗೈಯನ್ನು ಕೆಳಗೆ ಮಾಡಿ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು ಆಗ ನಿಮ್ಮ ಗಮನ ಉಸಿರಿನ ಕಡೆ ಇರಬೇಕು ಮತ್ತು ಉಸಿರನ್ನು ಬಿಡಬೇಕು. ನಂತರ ಎರಡು ಅಂಗೈಗಳು ಮೇಲೆಕ್ಕೆ ನೋಡುವಂತಿರಬೇಕು ಆಗ ಉಸಿರನ್ನು ತೆಗೆದುಕೊಳ್ಳುವುದು ಬಿಡುವುದು ಮಾಡಬೇಕು ಆಗಲೂ ಗಮನ ಉಸಿರಿನ ಕಡೆ ಇರಬೇಕು. ಉಸಿರು ಶ್ವಾಸಕೋಶಕ್ಕೆ ಫಿಲ್ಲ್ ಆಗುವುದನ್ನು ಗಮನಿಸಬಹುದು. ಅಂಗೈಯನ್ನು ಕೆಳಗೆ ಮಾಡಿ ಉಸಿರು ತೆಗೆದುಕೊಳ್ಳುವಾಗ ಸರಿಯಾಗಿ ಶ್ವಾಸಕೋಶದಲ್ಲಿ ಉಸಿರು ಫಿಲ್ ಆಗುವುದಿಲ್ಲ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ದೇಹ ಎಂದಮೇಲೆ ಒಂದಕ್ಕೊಂದು ಕನೆಕ್ಷನ್ ಇರುತ್ತದೆ ಇಡೀ ದೇಹದಲ್ಲಿ ಸಂಚಾರವಾಗುತ್ತಿರುವುದು ಒಂದೆ ರಕ್ತ, ಒಂದೆ ಪ್ರಾಣ ಅಲ್ಲದೆ ದೇಹ, ಭೂಮಿ, ಸೌರವ್ಯೂಹಕ್ಕೆ ಒಂದಕ್ಕೊಂದು ಕನೆಕ್ಟ್ ಆಗುವುದು ಒಂದೆ ಗಾಳಿ.

ಕೈಯನ್ನು ಬಾಯಿಯ ಮುಂದೆ ತಂದು ವಿಸಿಲ್ ಹಾಕುವಂತೆ ಗಾಳಿಯನ್ನು ಊದಬೇಕು ಆಗ ಕೈಯಿಗೆ ತಣ್ಣನೆಯ ಗಾಳಿ ಸ್ಪರ್ಶವಾಗುತ್ತದೆ. ನಂತರ ಅದೆ ರೀತಿ ಬಾಯನ್ನು ಅಗಲ ಮಾಡಿ ಗಾಳಿಯನ್ನು ಊದಿ ಆಗ ಬಿಸಿ ಗಾಳಿಯ ಸರ್ಶವಾಗುತ್ತದೆ. ಪ್ರಾಣವನ್ನು ಹೊರಗೆ ತೆಗೆದುಕೊಳ್ಳುವಲ್ಲಿ ವಿವಿಧ ಆಯಾಮಗಳಲ್ಲಿ ಬೇರೆ ಬೇರೆ ಆಕ್ಷನ್ ಇರುತ್ತದೆ. ಅದೆ ರೀತಿ ಉಸಿರನ್ನು ಒಳಗೆ ತೆಗೆದುಕೊಳ್ಳುವಲ್ಲಿ ವಿವಿಧ ಆಯಾಮಗಳಲ್ಲಿ ಬೇರೆ ಬೇರೆ ಆಕ್ಷನ್ ಇರುತ್ತದೆ. ಈ ಪ್ರಾಣಾಯಾಮದಿಂದ ಶ್ವಾಸಕೋಶದಲ್ಲಾಗುವ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಭ್ರಮರಿ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶದಲ್ಲಿ ಕಫ ಇದ್ದರೆ ನಿವಾರಣೆಯಾಗುತ್ತದೆ. ಚೇರ್ ಮೇಲೆ ಕುಳಿತುಕೊಂಡು ಎರಡು ಕೈನ ತೋರು ಬೆರಳು ಹಣೆಯ ಬಲಗಡೆ ಮತ್ತು ಎಡಗಡೆ ಭಾಗದ ಮೇಲೆ ಇಡಬೇಕು, ಎರಡು ಕೈನ ಮಧ್ಯದ ಬೆರಳಿನಿಂದ ಕಣ್ಣಿನ ಮೇಲೆ ಮುಚ್ಚಬೇಕು. ನಂತರ ಎರಡು ಕೈಯ ಹೆಬ್ಬೆರಳು ಎರಡು ಕಿವಿಯ ಭಾಗದ ಮೇಲೆ ಇಟ್ಟುಕೊಂಡು ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ನಿಧಾನವಾಗಿ ಬಿಡಬೇಕು, ಈ ರೀತಿ 5 ಸಲ ಮಾಡಬೇಕು ನಂತರ ಹೆಚ್ಚು ಸಲ ಮಾಡಬೇಕು. ಇದರಿಂದ ಶ್ವಾಸಕೋಶದಲ್ಲಿ ಕಂಪನ ಉಂಟಾಗಿ ಕಫ ಕರಗುತ್ತದೆ. ಈ ಪ್ರಾಣಾಯಾಮವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಊಟದ ಮೊದಲು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಯೋಗಪಟು ಅಥವಾ ಆಯುರ್ವೇದ ವೈದ್ಯರ ಬಳಿ ಸಲಹೆ ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಪ್ರತಿದಿನ ಪ್ರಾಣಾಯಾಮ ಮಾಡಿ, ಆರೋಗ್ಯವಾಗಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!