ತಂದೆ, ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ತಂದೆ, ತಾಯಿ ಪಟ್ಟ ಅನುಭವ, ಕಷ್ಟ ನಾವು ಅನುಭವಿಸುವುದಿಲ್ಲ. ಒಬ್ಬ ತಂದೆಯ ಜೀವನ ನಮಗೆ ಮಾದರಿಯಾಗುತ್ತದೆ. ಒಬ್ಬ ತಂದೆಯ ಅನುಭವದಿಂದ ತಿಳಿದ ಜೀವನದ ಕಟು ಸತ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.
ಒಬ್ಬ ತಂದೆ ಮಕ್ಕಳಿಗೆ ಪತ್ರ ಬರೆಯುತ್ತಾನೆ. ಪತ್ರದಲ್ಲಿ ತಂದೆ ನಾನು ಈ ಪತ್ರ ಬರೆಯಲು ಮೂರು ಕಾರಣಗಳಿವೆ. ಜೀವನ ಅದೃಷ್ಟ ದುರಾದೃಷ್ಟ ಇವು ಮೂರು ಚಂಚಲವಾದುದು, ಯಾರು ಕೂಡ ಇವುಗಳ ಅಂತರಾಳವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಬ್ಬ ತಂದೆಯಾಗಿ ನಾನು ಇದನ್ನು ನಿಮಗೆ ಹೇಳಲಿಲ್ಲವೆಂದರೆ ಯಾರೂ ಕೂಡ ನಿಮಗೆ ಹೇಳುವುದಿಲ್ಲ. ನಾನು ಈ ಪತ್ರದಲ್ಲಿ ಬರೆದಿರುವುದು ನನ್ನ ಜೀವನದಲ್ಲಿ ಅನುಭವಿಸಿರುವುದು, ನಿಮಗೆ ಇದು ಅರ್ಥವಾದರೆ ಬಹುಶಃ ಜೀವನದ ಬಹಳ ಸಮಯ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಜೊತೆ ಸ್ನೇಹ ಹೊಂದಿರದವರೊಂದಿಗೆ ದ್ವೇಷ ಬೆಳೆಸಿಕೊಳ್ಳಬೇಡಿ. ನಿಮ್ಮ ಜೊತೆ ಪ್ರೀತಿಯಿಂದ ಇರುವವರೊಂದಿಗೆ ಒಳ್ಳೆತನದಿಂದ ಇರಿ ಹಾಗೆಯೆ ಜಾಗೃತವಾಗಿದೆ ಏಕೆಂದರೆ ಪ್ರತಿಯೊಬ್ಬರೂ ಮಾಡುವ ಪ್ರತಿಯೊಂದು ಕೆಲಸಕ್ಕೂ ಒಂದು ಉದ್ದೇಶವಿರುತ್ತದೆ. ಯಾರಾದರೂ ನಿಮ್ಮ ಜೊತೆ ಸ್ನೇಹಿತರಾಗಿದ್ದು, ಅವರು ಸದಾ ನಿಮ್ಮೊಂದಿಗೆ ಹಾಗೆಯೆ ಇರಬೇಕು ಅಂತಿಲ್ಲ. ಒಳ್ಳೆತನದಿಂದ ಅವರನ್ನು ನಂಬಿ ಮನಸ್ಸಿಗೆ ಗಾಯ ಮಾಡಿಕೊಳ್ಳಬೇಡಿ. ಯಾರು, ಯಾವುದು ಶಾಶ್ವತವಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಿ, ಇದು ನಿಮಗೆ ಅರ್ಥವಾದ ದಿನ ನಿಮ್ಮ ಸುತ್ತಲಿನವರು ನಿಮ್ಮೊಂದಿಗೆ ಸ್ನೇಹದಿಂದ ಇಲ್ಲದೆ ಇದ್ದರೂ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
ಜೀವನ ಬಹಳ ಚಿಕ್ಕದು ಒಂದು ದಿನ ವ್ಯರ್ಥವಾದರೆ ಆ ದಿನವನ್ನು ಅನುಭವಿಸಲು ಮತ್ತೆ ಎಂದಿಗೂ ಬರುವುದಿಲ್ಲ. ಪ್ರೀತಿ ಅನ್ನೋದು ಒಂದು ಚಂಚಲವಾದ ಭಾವನೆ ಕಾಲ ಬದಲಾವಣೆ, ಮನಸ್ಥಿತಿಗಳ ಪ್ರಭಾವದಿಂದ ಅದು ಬದಲಾಗುತ್ತದೆ. ನೀವು ಬಹಳ ಪ್ರೀತಿಸುವವರು ದೂರವಾದರೆ ಬೇಸರ ಮಾಡಿಕೊಳ್ಳಬೇಡಿ, ತಾಳ್ಮೆಯಿಂದಿರಿ ಕಾಲದ ಬದಲಾವಣೆ ಅದರ ದುಃಖ, ನೋವನ್ನು ಮರೆಸುತ್ತದೆ ಹಾಗೂ ಅದರ ಅಂತರಾಳದ ರಹಸ್ಯವನ್ನು ತಿಳಿಸುತ್ತದೆ. ಸುತ್ತಲಿರುವವರ ಜೀವನದ ಬದಲಾವಣೆಯನ್ನು ಗಮನಿಸಿ. ಪ್ರೀತಿಯ ಸುಖವನ್ನು ಮತ್ತು ಪ್ರೀತಿಯ ಸೋಲನ್ನು ಹೆಚ್ಚು ಚಿಂತಿಸಬೇಡಿ. ಅವು ಜೀವನದಲ್ಲಿ ಅತಿ ದೊಡ್ಡ ವಿಷಯವೇನಲ್ಲ. ಕೆಲವರು ಹೆಚ್ಚು ಓದದೆ ಜೀವನದಲ್ಲಿ ದೊಡ್ಡ ಸ್ಥಾನವನ್ನು ಪಡೆಯುತ್ತಾರೆ, ಹಾಗಂತ ಕಷ್ಟಪಟ್ಟು ಓದದೆ ಇದ್ದರೆ ದೊಡ್ಡ ಸ್ಥಾನ ಪಡೆಯುತ್ತಾರೆ ಎಂದು ಅಲ್ಲ. ಸಂಪಾದನೆ ಮಾಡುವ ಜ್ಞಾನ ನಿಮ್ಮ ಆಯುಧವಾಗಿರಬೇಕು. ನಾನು ನನ್ನ ಕೊನೆಯ ಸಮಯದಲ್ಲಿ ಆರ್ಥಿಕವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುವುದಿಲ್ಲ ಹಾಗೆಯೆ ಅದೆ ರೀತಿ ಜೀವನಪೂರ್ತಿ ಆರ್ಥಿಕವಾಗಿ ನಿಮಗೆ ಸಹಾಯ ಮಾಡಲು ಆಗುವುದಿಲ್ಲ. ನೀವು ದೊಡ್ಡವರಾದ ನಂತರ ನನ್ನ ಜವಾಬ್ದಾರಿ ಮುಗಿಯುತ್ತದೆ. ನಂತರ ನೀವು ಕಾರಲ್ಲಿ ಹೋಗುತ್ತೀರೊ, ಬಸ್ಸಿನಲ್ಲಿ ಹೋಗುತ್ತೀರೊ. ಬಡವನಾಗ್ತೀರೊ ಸಿರಿವಂತನಾಗುತ್ತೀರೊ ಅದು ನಿಮ್ಮಿಷ್ಟ. ಎಲ್ಲರೂ ನಿಮ್ಮೊಂದಿಗೆ ಪ್ರೀತಿಯಿಂದ ಇರುತ್ತಾರೆ ಎಂದು ಅಂದುಕೊಳ್ಳಬೇಡಿ, ಯಾರಿಂದಲೂ ನೀವು ಏನನ್ನು ನಿರೀಕ್ಷಿಸಬೇಡಿ ಇದನ್ನು ನೀವು ಸರಿಯಾಗಿ ಅರ್ಥಮಾಡಿಕೊಳ್ಳದೆ ಇದ್ದರೆ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಎಷ್ಟೆ ಲಾಟರಿ ಟಿಕೆಟ್ ಗಳನ್ನು ತೆಗೆದುಕೊಂಡರು ಹೇಳಿಕೊಳ್ಳುವಷ್ಟು ಬಹುಮಾನ ಎಂದಿಗೂ ಬಂದಿಲ್ಲ. ಕಷ್ಟಪಟ್ಟು ದುಡಿದರೆ ಮಾತ್ರ ಧನವಂತನಾಗುತ್ತಾನೆ ಎಂಬುದಕ್ಕೆ ಇದೆ ಉದಾಹರಣೆ. ಸಾಧನೆಗೆ ಶಾರ್ಟ್ ಕಟ್ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ತನ್ನ ಅನುಭವವನ್ನು ತನ್ನ ಮಕ್ಕಳಿಗೆ ಪತ್ರದಲ್ಲಿ ಬರೆದಿದ್ದಾನೆ. ಜೀವನ ಚಿಕ್ಕದು ಈ ಜೀವನದಲ್ಲಿ ಕಷ್ಟ, ನೋವು, ನಲಿವು ಸರ್ವೇಸಾಮಾನ್ಯ, ಅದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಜೀವನ ಮುಗಿದೆ ಹೋಗುತ್ತದೆ. ಕೆಲವು ಕಷ್ಟಗಳಿಗೆ ನಮ್ಮಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಅಂತಹ ಕಷ್ಟಗಳಿಗೆ ಕಾಲವೆ ಉತ್ತರ ಕೊಡಬೇಕು. ಜೀವನದ ಈ ಕಟುಸತ್ಯವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೊ ಅವರು ಸುಖವಾಗಿರುತ್ತಾರೆ.