ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಕುಮಾರಸ್ವಾಮಿ ನನ್ನ ತಂಗಿ ಅಲ್ಲ ಅಂತ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ರಾಧಿಕಾ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮದೇ ಆದ ನಟನೆಯ ಛಾಪನ್ನು ಮಾಡಿಸಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ, ತಂಗಿ ಪಾತ್ರಗಳಲ್ಲಿ ಅವರು ಮಿಂಚಿದ್ದಾರೆ. ಇನ್ನು ಈ ನಟಿ ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದೆ ಸ್ವಂತ ತಮ್ಮ ಕಾಲ ಮೇಲೆ ನಿಂತು ನಟಿಯಾದವರು. ಇನ್ನು ಇವರ ಹೆಸರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸೇರಿ ಎಲ್ಲರ ಮನೆಮಾತಾದರು. ಇನ್ನು ರಾಧಿಕಾ ಹಾಗೂ ಕುಮಾರಸ್ವಾಮಿಯವರಿಗೆ ಶಮಿಕಾ ಎಂಬ ಹೆಣ್ಣು ಮಗುವಿಗೆ. ಇನ್ನು ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಇಬ್ಬರು ಬೇರೆ ಬೇರೆಯಾಗಿದ್ದಾರೆ, ಇವರು ಮುಂದೊಂದು ಒಂದಾಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ವದಂತಿಯ ಮಧ್ಯ ನಿಖಿಲ್ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ಹೊರಡಿಸಿದ್ದಾರೆ.ನಿಖಿಲ್ ಕುಮಾರಸ್ವಾಮಿ ಅವರು ಶಮಿಕಾಳನ್ನು ನನ್ನ ತಂಗಿ ಎಂದು ಎಂದಿಗೂ ನಾನು ಒಪ್ಪಿಕೊಳ್ಳುವುದಿಲ್ಲ, ಅಷ್ಟು ವಿಶಾಲ ಹೃದಯ ನನ್ನದಲ್ಲ ಎಂಬ ಮಾತು ಕೂಡ ಆಡಿದ್ದರು. ಈ ಮಾತುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯಲ್ಲಿ ಚರ್ಚೆಗೆ ಕಾರಣವಾಗಿದ್ದವು.
ರಾಧಿಕಾ ಅವರು ತಮ್ಮ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಸಂಬಂಧ ಇಲ್ಲದಿರುವ ವಿಷಯ ಸುಳ್ಳು. ನಾವು ಮೊದಲಿನಂತೆ ಇದ್ದೇವೆ. ಹೇಗೆ ನನ್ನ ಹೆಸರಿನೊಂದಿಗೆ ಕುಮಾರಸ್ವಾಮಿ ಅವರ ಹೆಸರು ದೊರೆತಿದೆಯೋ, ನನ್ನ ಜೀವನದ ಕೊನೆಯವರೆಗೂ ಕುಮಾರಸ್ವಾಮಿಯವರ ಪ್ರೀತಿ ಸದಾ ನನ್ನ ಜೊತೆ ಇರುತ್ತದೆ. ನಿಖಿಲ್ ಕುಮಾರಸ್ವಾಮಿ ಅವರು ನನ್ನ ಮಗಳನ್ನು ಅವರ ತಂಗಿಯೆಂದು ಒಪ್ಪಿಕೊಳ್ಳದಿದ್ದರೂ, ಶಮಿಕಾ ಕುಮಾರಸ್ವಾಮಿ ಅವರ ಮಗಳು ಎಂಬುದು ಎಂದೂ ಸುಳ್ಳಾಗುವುದಿಲ್ಲ. ಇಡೀ ಪ್ರಪಂಚಕ್ಕೆ ಗೊತ್ತು ಶ್ರಮಿಕ ಯಾರು ಎಂದು, ಹೀಗೆ ಹೇಳಿಕೆ ನೀಡುವುದರ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.