ಕೆಲವು ಸಲ ರಿಂಗ್ ಇಲ್ಲವೆ ಬಳೆ ಹಾಕಿಕೊಂಡರೆ ಟೈಟ್ ಆಗಿ ತೆಗೆಯಲು ಹರಸಾಹಸ ಪಡಬೇಕಾಗುತ್ತದೆ ಅಲ್ಲದೆ ಬಹಳ ನೋವನ್ನು ಅನುಭವಿಸಬೇಕಾಗುತ್ತದೆ. ಈ ರೀತಿ ಆದಾಗ ಕೆಲವು ಟಿಪ್ಸ್ ಬಳಸುವ ಮೂಲಕ ಟೈಟ್ ಆದ ರಿಂಗ್ ಅಥವಾ ಬಳೆಯನ್ನು ಸುಲಭವಾಗಿ, ನೋವಾಗದಂತೆ ತೆಗೆಯಬಹುದು. ಹಾಗಾದರೆ ಟೈಟ್ ಆದ ರಿಂಗ್, ಬಳೆಯನ್ನು ತೆಗೆಯುವ ಸುಲಭವಾದ ಟಿಪ್ಸ್ ಏನೆಂದು ಈ ಲೇಖನದಲ್ಲಿ ನೋಡೋಣ.
ಕೆಲವು ಸಲ ರಿಂಗ್, ಬಳೆ ಹಾಕಿದಾಗ ಟೈಟ್ ಆಗಿ ತೆಗೆಯಲು ಕಷ್ಟವಾಗುತ್ತದೆ ಆಗ ಸಾಮಾನ್ಯವಾಗಿ ಸೋಪ್ ಹಾಕಿ ತೆಗೆಯುತ್ತೇವೆ ಆದರೂ ಕೆಲವೊಮ್ಮೆ ತೆಗೆಯಲು ಬರುವುದಿಲ್ಲ ಮತ್ತು ಬಹಳ ನೋವಾಗುತ್ತದೆ. ಹೀಗೆ ಬಳೆ ಅಥವಾ ರಿಂಗ್ ತೆಗೆಯಲು ಸುಲಭವಾಗಿ ಬರುವ ಒಂದು ಟಿಪ್ಸ್ ಇದೆ ಅದೇನೆಂದರೆ ಒಂದು ಸ್ವಲ್ಪ ದಪ್ಪ ಇರುವ ದಾರವನ್ನು ತೆಗೆದುಕೊಳ್ಳಬೇಕು. ರಿಂಗ್ ಹಾಕಿದ ಬೆರಳನ್ನು ಫೋಲ್ಡ್ ಮಾಡಿದಾಗ ಸಣ್ಣ ಗ್ಯಾಪ್ ಕಾಣಿಸುತ್ತದೆ ಅದರಲ್ಲಿ ದಾರವನ್ನು ಸ್ವಲ್ಪ ಹಾಕಬೇಕು. ಒಂದು ಕಡೆ ಇರುವ ದಾರವನ್ನು ಹಾಗೆಯೆ ಫ್ರೀ ಬಿಡಬೇಕು, ಇನ್ನೊಂದು ಕಡೆ ಇರುವ ದಾರವನ್ನು ಬೆರಳಿಗೆ ರೌಂಡ್ ಆಗಿ ಸುತ್ತಿಕೊಳ್ಳಬೇಕು. ಉಳಿದ ದಾರವನ್ನು ಬೇರೆ ಬೆರಳುಗಳಲ್ಲಿ ಟೈಟ್ ಆಗಿ ಹಿಡಿದುಕೊಳ್ಳಬೇಕು. ನಂತರ ಫ್ರೀ ಆಗಿ ಬಿಟ್ಟಿರುವ ದಾರವನ್ನು ರಿವರ್ಸ್ ನಲ್ಲಿ ರೌಂಡ್ ರೌಂಡ್ ಆಗಿ ತೆಗೆಯಬೇಕು ಆಗ ರಿಂಗ್ ದಾರದ ಜೊತೆಗೆ ಬರುತ್ತದೆ, ಸ್ವಲ್ಪವೂ ನೋವು ಗೊತ್ತಾಗುವುದಿಲ್ಲ. ಇದು ಟೈಟ್ ಆದ ರಿಂಗ್ ತೆಗೆಯುವ ಟಿಪ್ಸ್ ಹಾಗೆಯೆ ಬಳೆ ಟೈಟ್ ಆದರೆ ಹೇಗೆ ತೆಗೆಯಬೇಕು ಎಂಬುದನ್ನು ನೋಡೋಣ.
ಒಂದು ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಟೈಟ್ ಆದ ಬಳೆಯ ಸುತ್ತಲೂ ಒಳಗೆ ಹಾಕಬೇಕು ಅರ್ಧ ಹಾಕಿದ ನಂತರ ಕವರ್ ಅನ್ನು ನಿಧಾನವಾಗಿ ಹೊರಗೆ ತೆಗೆಯಬೇಕು. ಆಗ ಕವರ್ ಜೊತೆ ಬಳೆಯು ಹೊರಗೆ ಬರುತ್ತದೆ ಹೀಗೆ ಮಾಡುವುದರಿಂದ ಸ್ವಲ್ಪವೂ ನೋವಾಗುವುದಿಲ್ಲ. ಇದು ರಿಂಗ್, ಬಳೆ ತೆಗೆಯಲು ಇರುವ ಸುಲಭ ವಿಧಾನವಾಗಿದೆ. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸುತ್ತಾರೆ, ಇನ್ನು ಮುಂದೆ ಈ ಟಿಪ್ಸ್ ಬಳಸಿ ನೋವಾಗದಂತೆ ಟೈಟ್ ಆದ ಬಳೆ, ರಿಂಗ್ ತೆಗೆಯಿರಿ. ಈ ಟಿಪ್ಸ್ ಬಳಸಲು ದುಡ್ಡು ಖರ್ಚು ಮಾಡುವುದು ಬೇಡ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿದರಾಯಿತು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.