ಸಾಧನೆಯು ಯಾರೊಬ್ಬರ ಸ್ವತ್ತಲ್ಲ. ಸಾಧಿಸುವ ಛಲವಿದ್ದರೆ ಪ್ರತಿಯೊಬ್ಬರೂ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ ಹೊಂದಿರುತ್ತಾರೆ. ಔದ್ಯೋಗಿಕ ಕ್ಷೇತ್ರದ ಯಶಸ್ಸಿಗೆ ಪರಿಣತಿ, ಉತ್ತಮ ಆರೋಗ್ಯ, ಕೌಟುಂಬಿಕ ಬಾಂಧವ್ಯ ಮುಖ್ಯವಾಗಿ ಆಂತರಿಕ ಉಲ್ಲಾಸ ಪೂರಕವಾಗುತ್ತದೆ. ಅದರೊಂದಿಗೆ ಹಣವೂ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ವ್ಯಕ್ತಿ ಉಪಯೋಗಕ್ಕೆ ಬಾರದವನಾಗುತ್ತಾನೋ, ಆಲಸಿಯಾಗಿರುತ್ತಾನೋ ಅವನು ಇನ್ನಿಲ್ಲದ ಕಷ್ಟಕ್ಕೆ ಗುರಿಯಾಗುತ್ತಾನೆ. ಎಷ್ಟೋ ಬಾರಿ ಆರ್ಥಿಕವಾಗಿ ಸದೃಢರಾದ ಶ್ರೀಮಂತರ ಮಕ್ಕಳೂ ವಿವೇಚನಾರಹಿತರಾಗಿ ಸಂಕಷ್ಟಕ್ಕೆ ಗುರಿಯಾಗುವುದುಂಟು. ಆದ್ದರಿಂದ ನಾವು ಇಲ್ಲಿ 24ವರ್ಷಕ್ಕೆ ನ್ಯಾಯಾಧೀಶೆಯಾದ ಒಬ್ಬ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಯಾರು ಸಾಮಾಜಿಕವಾಗಿ, ಭಾವನಾತ್ಮಕವಾಗಿ ಸಮತೋಲನ ಸಾಧಿಸಬಲ್ಲನೋ ಅವರಷ್ಟೇ ಯಶಸ್ಸಿನ ಮೆಟ್ಟಿಲು ಏರಬಲ್ಲರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬಯಸುವವರು ಬಹಳ. ಎಲ್ಲರೂ ಗುರುತಿಸುವ ಸಾಧನೆ ನಾನು ಮಾಡಬೇಕು ಎಂದು ಎಷ್ಟೋ ಜನ ಹಂಬಲಿಸಿತ್ತಾರೆ. ಇದಕ್ಕಾಗಿ “ಗುರಿ ಮುಟ್ಟುವ ವರೆಗೆ ನಿಲ್ಲದಿರು” ಎಂದಿದ್ದ ಸ್ವಾಮಿ ವಿವೇಕಾನಂದರನ್ನೂ ನೆನೆಸಿಕೊಳ್ಳುತ್ತಾರೆ. ತಾವು ಬದುಕಿರುವುದೇ ಸಾಧನೆ ಮಾಡಲು ಮತ್ತು ಏನನ್ನಾದರೂ ಸಾಧಿಸದ ಬದುಕು ವ್ಯರ್ಥ ಎಂದು ಅನೇಕರು ಯೋಚಿಸುತ್ತಾರೆ.
ಈ ದಿಸೆಯಲ್ಲಿ ಶ್ರಮವಹಿಸಿ ಓದಿ ನ್ಯಾಯಾಧೀಶರಾದ ಹುಬ್ಬಳ್ಳಿ ನಗರದ ಶಿರೂರು ಪಾರ್ಕಿನವರಾದ ಚೇತನಾ ಆರೀಕಟ್ಟಿ ಯವರು. ಮೂಲತಹ ಹಾವೇರಿಯ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಾಲುವೆ ಹಳ್ಳಿಯವರಾದ ಇವರ ತಂದೆ ಉದ್ಯೋಗಕ್ಕಾಗಿ ಧಾರವಾಡ ಜಿಲ್ಲೆಯ ಕುಂದಗೋಳಕೆ ಬಂದು ನೆಲೆಸುತ್ತಾರೆ. ಇಂಜಿನಿಯರ್ ಆಗಬೇಕು ಎಂದು ಅಂದುಕೊಂಡಿದ್ದ ಇವರು ತಾಯಿಯ ಆಸೆಯಂತೆ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಈ ಸಾಧನೆಗೆ ಪ್ರತಿಯೊಬ್ಬರೂ ಉತ್ತಮವಾಗಿ ಸಹಾಯ ಮಾಡಿದ್ದಾರೆ.
ಕುಂದಗೋಳದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಚೇತನಾ ಅವರು ನಂತರ ಹುಬ್ಬಳ್ಳಿಯ ಪಿಸಿ ಜಬಿನ್ ಕಾಲೇಜಿನಲ್ಲಿ ಪಿಯುಸಿ ಮುಗಿಸುತ್ತಾರೆ. ನಂತರ ನವನಗರದಲ್ಲಿರುವ ಯೂನಿವರ್ಸಿಟಿಯಲ್ಲಿ ಐದು ವರ್ಷಗಳ ವರೆಗೆ ಕಾನೂನು ಅಧ್ಯಯನವನ್ನು ಪಡೆಯುತ್ತಾರೆ. ನಂತರ ಬೆಂಗಳೂರು ಯೂನಿವರ್ಸಿಟಿಯಲ್ಲಿ ಏಲ್ ಏಲ್ ಎಂ ಮುಗಿಸಿ ನ್ಯಾಯಾಧೀಶರಾಗುತ್ತಾರೆ. ಅತಿ ಸಣ್ಣ ವಯಸ್ಸಿನಲ್ಲೇ ಅಂದರೆ 24 ವರ್ಷದಲ್ಲೇ ನ್ಯಾಯಾಧೀಶರಾಗಿ ಸಾಧನೆಯನ್ನು ಮಾಡುತ್ತಾಳೆ. ಪ್ರತಿನಿತ್ಯ 12 ರಿಂದ 13 ತಾಸುಗಳ ಕಾಲ ಅಧ್ಯಯನವನ್ನು ಮಾಡಿ ಈ ಸಾಧನೆಯ ಮೆಟ್ಟಿಲನ್ನು ಏರಿದ್ದಾಳೆ. ಇವರು ಒಳ್ಳೆ ರೀತಿಯ ಮತ್ತು ಸಮರ್ಥ ರೀತಿಯ ತೀರ್ಪುಗಳನ್ನು ನೀಡಲಿ ಎಂದು ಪ್ರತಿಯೊಬ್ಬರು ಆಶಿಸುತ್ತಾರೆ.