ಜಮೀನನ್ನು ಖರೀದಿಸಲು, ಮಾರಾಟ ಮಾಡಲು, ದಾನ ಮಾಡಲು, ಕ್ರಯ ಮಾಡಲು 11E ನಕ್ಷೆ ಕಡ್ಡಾಯವಾಗಿ ಬೇಕಾಗುತ್ತದೆ. ಹಾಗಾದರೆ 11E ನಕ್ಷೆ ಎಂದರೇನು, ಈ ನಕ್ಷೆ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು, ಈ ನಕ್ಷೆಯಲ್ಲಿ ಏನಿರುತ್ತದೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕರ್ನಾಟಕದಲ್ಲಿ ಜಮೀನಿಗೆ ಸಂಬಂಧಪಟ್ಟಂತೆ ಕ್ರಯ, ದಾನ, ವಿಭಾಗ ಇತ್ಯಾದಿಗಳಿಗೆ 11E ನಕ್ಷೆ ಕಡ್ಡಾಯವಾಗಿ ಅವಶ್ಯವಿದೆ. ಜಮೀನಿನ ಮಾಲೀಕ ಕ್ರಯ ಮಾಡುವ ಜಮೀನಿನ ಭಾಗ, ದಾನ ಮಾಡುವ ಜಮೀನು, ವಿಭಾಗ ಮಾಡಿದ ಜಮೀನಿನ ನಿಖರ ಅಳತೆ ತೋರಿಸುವುದಕ್ಕೆ 11E ನಕ್ಷೆ ಎನ್ನುವರು. ಈ ನಕ್ಷೆಯನ್ನು ಒಂದು ಬಾರಿ ತೆಗೆದುಕೊಂಡರೆ ಆರು ತಿಂಗಳ ಕಾಲ ವ್ಯಾಲಿಡಿಟಿ ಹೊಂದಿರುತ್ತದೆ. ಅವಧಿ ಮುಗಿದ ನಂತರ ನಾಡ ಕಛೇರಿ ಅಥವಾ ತಾಲ್ಲೂಕ್ ಆಫೀಸ್ ನಲ್ಲಿ ಅರ್ಜಿ ಸಲ್ಲಿಸಿ ನವೀಕರಣ ಚಲನ್ ತೆಗೆದುಕೊಂಡು, ಸರ್ವೆ ಆಫೀಸ್ ಗೆ ಸಬ್ಮಿಟ್ ಮಾಡಿದರೆ ಸರ್ವೆ ಡಿಪಾರ್ಟ್ಮೆಂಟ್ ಇಂದ ಹೆಡ್ ಆಫೀಸ್ ಗೆ ಮೇಲ್ ಹೋದ ನಂತರ ರಿನ್ಯೂವಲ್ ಆದ 11E ನಕ್ಷೆ ಸಿಗುತ್ತದೆ. ಈ ನಕ್ಷೆಯಲ್ಲಿ ಜಮೀನಿನ ಮಾಲೀಕನ ಹೆಸರು ಮತ್ತು ಸಹಿ ಇರುತ್ತದೆ, ಹಕ್ಕು ಪಡೆಯುವವರ ಹೆಸರು ಅಂದರೆ ಜಮೀನನ್ನು ಯಾರಿಗೆ ಕೊಡಲಾಗುತ್ತದೆಯೋ ಅವರ ಹೆಸರು ಇರುತ್ತದೆ. ಮಾಲೀಕ ತಾನು ಉಳಿಸಿಕೊಂಡ ಜಮೀನಿನ ಅಳತೆ ಮತ್ತು ಇನ್ನೊಬ್ಬರಿಗೆ ದಾನ ಕೊಡಬಹುದಾದ, ಕ್ರಯ ಮಾಡಬಹುದಾದ, ವಿಭಾಗ ಮಾಡಬಹುದಾದ ಜಮೀನಿನ ಭಾಗವನ್ನು ಕಾಣಬಹುದು. ಈ ನಕ್ಷೆಯಲ್ಲಿ ಸರ್ವೆ ನಂಬರ್ ನೋಡಬಹುದು. ಜಮೀನಿನ ಉತ್ತರ-ದಕ್ಷಿಣ ಪೂರ್ವ-ಪಶ್ಚಿಮ ದಿಕ್ಕುಗಳಲ್ಲಿರುವ ಜಮೀನಿನ ಬಗ್ಗೆಯೂ ನೋಡಬಹುದು ಅಲ್ಲದೆ ಸಾಗು ಭೂಮಿ ಎಷ್ಟು ಎಂಬುದನ್ನು ನೋಡಬಹುದು. ನಕ್ಷೆಯ ಜೊತೆಗೆ ಕೆಲವು ದಾಖಲೆಗಳನ್ನು ರಿಜಿಸ್ಟರ್ ಆಫೀಸಿಗೆ ತೆಗೆದುಕೊಂಡು ಹೋದರೆ ರಿಜಿಸ್ಟರ್ ಮಾಡಿಕೊಡಲಾಗುತ್ತದೆ.
11E ನಕ್ಷೆ ಪಡೆಯಬೇಕಾದರೆ ಮೊದಲು ಝೆರಾಕ್ಸ್ ಅಂಗಡಿಗಳಲ್ಲಿ 11E ನಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಫಾರ್ಮ್ ಸಿಗುತ್ತದೆ ಅದನ್ನು ಭರ್ತಿ ಮಾಡಿ ಅದರೊಂದಿಗೆ ಜಮೀನಿನ ಮಾಲೀಕನ ಆಧಾರ್ ಕಾರ್ಡ್, ಜಮೀನಿನ ಪಹಣಿ ಪತ್ರ ಮತ್ತು ಹಕ್ಕು ಪಡೆಯುವವನ ಆಧಾರ್ ಕಾರ್ಡನ್ನು ನಾಡ ಕಛೇರಿಗೆ ಸಲ್ಲಿಸಬೇಕು. ಅರ್ಜಿ ಶುಲ್ಕ ತುಂಬಬೇಕು ನಗರ ಪ್ರದೇಶದಲ್ಲಿನ ಜಮೀನಿಗೆ 11E ನಕ್ಷೆ ಬೇಕಾದರೆ ರೂ 2,000 ಅರ್ಜಿ ಶುಲ್ಕವಿರುತ್ತದೆ. ಹಳ್ಳಿಯಲ್ಲಿರುವ ಜಮೀನಿಗೆ 11E ನಕ್ಷೆ ಬೇಕಾದರೆ ರೂ 1200 ಅರ್ಜಿ ಶುಲ್ಕ ಇರುತ್ತದೆ. ಸರ್ವೆ ಆಗಿ ಒಂದು ತಿಂಗಳ ನಂತರ 11E ನಕ್ಷೆ ಸಿಗುತ್ತದೆ. ಒಬ್ಬ ಮಾಲೀಕ ತನ್ನ ಪೂರ್ಣ ಜಮೀನನ್ನು ಮಾರಾಟ ಮಾಡುವುದಾದರೆ, ದಾನ ಮಾಡುವುದಾದರೆ, ಕ್ರಯ ಮಾಡುವುದಾದರೆ 11E ನಕ್ಷೆ ಅವಶ್ಯಕತೆ ಇರುವುದಿಲ್ಲ ಆದರೆ ತನ್ನ ಜಮೀನಿನ ಕೆಲವು ಭಾಗವನ್ನು ದಾನ, ಮಾರಾಟ, ಕ್ರಯ ಮಾಡುವುದಾದರೆ ಮಾತ್ರ 11E ನಕ್ಷೆ ಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಜಮೀನು ಇರುವವರಿಗೆ ಅದರಲ್ಲೂ ರೈತರಿಗೆ ತಿಳಿಸಿ.