ಏಷ್ಯಾದ ಬೆಳಕು ಎಂದು ಗೌತಮ ಬುದ್ಧನನ್ನು ಕರೆಯಲಾಗುತ್ತದೆ. ಗೌತಮ ಬುದ್ಧನ ಬಾಲ್ಯ ಹೆಸರು ಸಿದ್ಧಾರ್ಥ. ಅವನ ತಂದೆ ಶುದ್ಧೋದನ ಮತ್ತು ತಾಯಿ ಮಾಯಾದೇವಿ. ಹಾಗೆಯೇ ಇವನಿಗೆ ಯಶೋಧರ ಎಂಬ ಪತ್ನಿಯಿದ್ದಳು. ಅರಮನೆಯಲ್ಲಿ ರಾಜಕುಮಾರನಾಗಿ ಬೆಳೆದಿದ್ದ. ಆದರೆ ಸ್ವಲ್ಪ ವರ್ಷಗಳ ನಂತರ ಅವನು ಅರಮನೆಯಿಂದ ಹೊರಗೆ ಬಂದಾಗ ಮೂರು ದೃಶ್ಯಗಳು ಇವನನ್ನು ಸನ್ಯಾಸತ್ವ ಸ್ವೀಕಾರ ಮಾಡಲು ಪ್ರೇರೇಪಿಸಿದವು. ಆದ್ದರಿಂದ ನಾವು ಬುದ್ಧನ ಒಂದು ಸಂದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಂದು ದಿನ ಗೌತಮ ಬುದ್ಧನ ತನ್ನ ಶಿಷ್ಯರಿಗೆ ಪ್ರವಚನವನ್ನು ನೀಡುತ್ತಿದ್ದಾನೆ. ಆಗ ಒಂದು ಶಿಷ್ಯ ನಮ್ಮನ್ನು ಯಾರಾದರೂ ಅವಮಾನ ಮಾಡಿದರೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾನೆ. ಆಗ ಬುದ್ಧನು ಇದಕ್ಕೆ ಒಂದು ಕಥೆಯನ್ನು ಹೇಳಲು ಶುರು ಮಾಡುತ್ತಾನೆ. ಒಂದು ದಿನ ಆನೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಒಂದು ಹಂದಿ ಬರುತ್ತದೆ. ಇದು ಪಕ್ಕಕ್ಕೆ ಸರಿದು ನಿಲ್ಲುತ್ತದೆ. ಆಗ ಹಂದಿಯು ದಾರಿಯನ್ನು ದಾಟಿ ಹೋಗಿ ಇನ್ನೊಂದು ಹತ್ತಿರ ನಾನು ಬಂದಿದ್ದರಿಂದ ಆನೆ ಸರಿದುಕೊಂಡಿದ್ದು ಎಂದು ಹೇಳುತ್ತದೆ.
ಇದನ್ನು ಕೇಳಿದ ಆನೆಯು ತನಗೆ ತಾನೇ ನಗುತ್ತಾ ತನ್ನ ದಾರಿಯನ್ನು ಮುಂದುವರೆಸುತ್ತದೆ. ಆಗ ಇನ್ನೊಂದು ಆನೆ ಸಿಕ್ಕು ಹಂದಿಗೆ ನೀನು ಭಯ ಪಟ್ಟೆಯ ಎಂದು ಕೇಳುತ್ತದೆ. ಆಗ ಆನೆಗೆ ನಾನು ಭಯ ಪಟ್ಟಿಲ್ಲ ಅದು ಮಾತನಾಡಿತು ಎಂದು ನಾನೇಕೆ ತಲೆಕೆಡಿಸಿಕೊಳ್ಳಬೇಕು ಅಂತ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಾ ಹೋದರೆ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಹಾಗೆಯೇ ನನಗೂ ಮತ್ತು ಹಂದಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ನನ್ನ ಧ್ವನಿ ಆರ್ಭಟಕ್ಕೆ ಅದು ಸತ್ತು ಹೋಗುತ್ತದೆ. ಹಾಗೆಯೇ ಅದರ ಮೇಲೆ ನಾನು ಒಂದು ಹೆಜ್ಜೆಯನ್ನು ಬಿಟ್ಟರೆ ಸಾಕು ಅದರ ಸಾವು ನಿಶ್ಚಿತ.
ನನ್ನ ಶಕ್ತಿಯ ಬಗ್ಗೆ ನನಗೆ ತಿಳಿದಿದೆ. ಆದ್ದರಿಂದ ನಾನು ಬೇರೆಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಹೇಗೆ ನಡೆಯಬೇಕೋ ಹಾಗೆ ನಡೆದುಕೊಂಡು ಹೋಗುತ್ತೇನೆ ಎಂದು ಇನ್ನೊಂದು ಆನೆಗೆ ಹೇಳುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸಂದೇಶ. ನಾವು ಜೀವನದಲ್ಲಿ ಯಾವ ಗುರಿಯನ್ನು ಇಟ್ಟುಕೊಂಡು ಬದುಕುತ್ತೇವೋ ಅದಕ್ಕೆ ತಕ್ಕಂತೆ ಜೀವನ ನಡೆಸಬೇಕು. ಹೇಳುವವರು ಸಾವಿರ ಮಾತುಗಳನ್ನು ಹೇಳುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು.