ಮನುಷ್ಯನಿಗೆ ಹತ್ತಾರು ಬಗೆಯ ಹಣ್ಣು ತರಕಾರಿಗಳು ಶರೀರಕ್ಕೆ ಒಳ್ಳೆಯ ಲಾಭವನ್ನು ತಂದು ಕೊಡುತ್ತೆ, ಅಷ್ಟೇ ಅಲ್ಲದೆ ಮನುಷ್ಯನ ಅಂಗಾಂಗಗಳಿಗೆ ಈರುಳ್ಳಿ ಉತ್ತಮ ಆರೋಗ್ಯವನ್ನು ವೃದ್ದಿಸುತ್ತೇವೆ. ಬಹುತೇಕ ಜನರು ಈರುಳ್ಳಿಯನ್ನು ಊಟದ ಜೊತೆಗೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಅಡುಗೆಯಲ್ಲಿ ಸೇವನೆ ಮಾಡುವುದುಂಟು. ಮುಖ್ಯವಾಗಿ ವಿಷಯಕ್ಕೆ ಬರೋಣ ಊಟದ ಜೊತೆಗೆ ಹಸಿ ಈರುಳ್ಳಿ ತಿನ್ನುವುದರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ. ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ. ಅಲ್ಲದೆ ಹಸಿ ಈರುಳ್ಳಿ ದೇಹದ ಆರೋಗ್ಯಕ್ಕೆ ಶಕ್ತಿ ಕೊಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್ ಸಲ್ಫರ್ ಪ್ರಮಾಣ ಜಾಸ್ತಿ ಇರುತ್ತದೆ. ಅಲ್ಲದೇ ಯಾವುದೇ ಕ್ಯಾಲರಿ ಇಲ್ಲದೇ ಇರೋದ್ರಿಂದ ಎಲ್ಲಾ ವಯಸ್ಸಿನವರುಗೂ ಹಾಗೂ ಎಲ್ಲ ಬಗೆಯ ಜನರಿಗೂ ಇದು ಸೂಕ್ತವಾಗಿದೆ. ಹಸಿ ಈರುಳ್ಳಿಯನ್ನು ಪ್ರತಿದಿನ ಊಟದ ಜೊತೆ ತಿನ್ನುವ ಅಭ್ಯಾಸವಿರುವ ಅನೇಕರಿಗೆ ಬೊಜ್ಜಿನ ಸಮಸ್ಯೆ ಇರುವುದಿಲ್ಲ.
ಈರುಳ್ಳಿ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವನ್ನ ನಮ್ಮ ತ್ವಚೆಯ ಸೌಂದರ್ಯ ಹಾಗೂ ಕೂದಲ ಸೌಂದರ್ಯಕ್ಕೂ ಬಹಳ ಸಹಾಯಕ. ಹಸಿ ಈರುಳ್ಳಿಯಲ್ಲಿರುವ ಸತ್ವಾಂಶಗಳು ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ. ಹಾಗಾಗಿ ಹೃದ್ರೋಗದಿಂದ ದೂರ ಇರಿಸುವಲ್ಲಿ ಇವುಗಳ ಪಾತ್ರ ನಿಜಕ್ಕೂ ದೊಡ್ಡದೇ. ಇನ್ನು ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದರಿಂದ ಸಣ್ಣ ಪುಟ್ಟ ಸೋಂಕುಗಳು ದೇಹದ ಹತ್ತಿರವೂ ಸುಳಿಯದಂತೆ ಈರುಳ್ಳಿಯ ಗುಣಗಳು ದೇಹವನ್ನು ಸುರಕ್ಷಿತವಾಗಿಡುತ್ತದೆ.
ಮೆಕ್ಕೆಜೋಳ ಸೇವನೆಯಿಂದ ಶರೀರಕ್ಕೆ ಏನ್ ಲಾಭವಿದೆ ಅನ್ನೋದನ್ನ ಕೂಡ ಈ ಮೂಲಕ ತಿಳಿದುಕೊಳ್ಳೋಣ. ಸ್ವಾದ ಮತ್ತು ಆರೋಗ್ಯದ ಕಾರಣದಿಂದಾಗಿ ಜೋಳ ಹೆಸರುವಾಸಿಯಾಗಿದೆ. ಜೋಳದಲ್ಲಿ ಇರುವಂತಹ ಕೆಲವು ಗುಣಗಳ ಕಾರಣದಿಂದಾಗಿ ನಾವು ಜೋಳದ ಕಡೆಗೆ ಆಕರ್ಷಿತರಾಗುತ್ತೇವೆ. ಕಾರ್ನ್ ಎಂದು ಕರೆಯಲ್ಪಡುವ ಜೋಳ ಒಂದು ಪೌಷ್ಠಿಕ ಆಹಾರವಾಗಿದ್ದು ನಮ್ಮ ದೇಹದ ಅವಶ್ಯಕತೆಗಳನ್ನು ಪೂರೈಸುತ್ತದೆ. ಜೋಳ ನಮ್ಮ ದೇಹವನ್ನು ಹಲವಾರು ರೋಗಗಳ ವಿರುದ್ಧ ರಕ್ಷಿಸುತ್ತದೆ ಹಾಗೂ ಬೇರೆ ರೋಗಗಳ ವಿರುದ್ಧ ಹೋರಾಡಲು ಸಹ ಸಹಾಯಕವಾಗಿರುತ್ತದೆ. ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿರುವಂತಹ ಜೋಳದ ಬಗ್ಗೆ ಹಾಗೂ ಅದರ ಪ್ರಯೋಜನದ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಮೊದಲಿಗೆ ಫ್ಯಾಟ್ ಅಥವಾ ಕೊಬ್ಬನ್ನು ಕರಗಿಸಲು ಜೋಳ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಅಥವಾ ಅನಾವಶ್ಯಕ ಕೊಬ್ಬನ್ನು ಕರಗಿಸಲುಜೋಳ ಸಹಾಯಕಾರಿಯಾಗಿದೆ ಪ್ರತಿದಿನ ಜೋಳವನ್ನು ಸೇವನೆ ಮಾಡುವುದರಿಂದ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದು ನಮ್ಮ ದೇಹದಲ್ಲಿ ಕ್ಯಾನ್ಸರ್ ರೋಗವನ್ನು ಕಡಿಮೆಮಾಡಿಕೊಳ್ಳಲು ಸಹಾಯಕಾರಿಯಾಗಿದೆ. ಜೋಳದಲ್ಲಿ ಇರುವಂತಹ ಪ್ಯಾರಿಯೋಲಿಕ್ ಆಸಿಡ್ ಬ್ರೆಸ್ಟ್ ಮತ್ತು ಲಿವರ್ ನ ಟ್ಯೂಮರ್ ಅನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ಫ್ರೀ ರಾಡಿಕಲ್ ಇಂದ ಆಗುವಂತಹ ತೊಂದರೆಯಿಂದಲೂ ಸಹ ನಮ್ಮನ್ನು ರಕ್ಷಿಸುತ್ತದೆ. ಜೋಳದಲ್ಲಿ ವಿಟಮಿನ್ ಸಿ ಬಯೋ ಫ್ಲೇವೊನೈಡ್ಸ್, ಫೈಬರ್ ಅಂಶ ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ನರಗಳಲ್ಲಿ ಬ್ಲಾಕೆಜ್ ಆಗುವುದನ್ನು ತಡೆಗಟ್ಟುತ್ತದೆ.
ಜೋಳವು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಇದರಲ್ಲಿ ಇರುವಂತಹ ಐರನ್, ಜಿಂಕ್ , ಫಾಸ್ಪರಸ್ , ಮೆಗ್ನೀಷಿಯಂ ಅಂಶಗಳು ಮೂಳೆಗಳ ಸಮಸ್ಯೆಯಿಂದ ದೂರವಿಡುತ್ತದೆ. ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಇದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಜೋಳವನ್ನು ತಿನ್ನುವುದರಿಂದ ಚರ್ಮ ಹೊಳಪಿನಿಂದ ಕೂಡಿರುತ್ತದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿರುವುದರಿಂದ ಫ್ರೀ ರಾಡಿಕಲ್ಸ್ ದೂರ ಮಾಡಿ ಮುಖದ ಮೇಲೆ ಮೂಡುವಂತಹ ನೆರಿಗೆಗಳನ್ನು ಕಡಿಮೆ ಮಾಡುತ್ತದೆ. ಜೋಳದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಅಂಶ ಹೇರಳವಾಗಿದೆ ಹಾಗಾಗಿ ಜೋಳವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಹೆಚ್ಚಾಗಿ ಶಕ್ತಿ ಮತ್ತು ಬಲ ದೊರೆಯುತ್ತದೆ. ಜೋಳ ನಮ್ಮ ದೇಹದಲ್ಲಿ ಐರನ್ ನ ಕೊರತೆಯನ್ನು ತುಂಬುತ್ತದೆ ಹಾಗೂ ಅನಿಮಿಯಾ ದಿಂದ ಕೂಡ ನಮ್ಮ ದೇಹವನ್ನು ದೂರವಿಡುತ್ತದೆ. ಇಷ್ಟೇ ಅಲ್ಲದೆ ಜೋಳ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆ ಮಾಡಿ ಹೊಟ್ಟೆ ಸಮಸ್ಯೆಯನ್ನು ಕೂಡ ಸರಿಯಾಗಿರಿಸುತ್ತದೆ. ಜೋಳದಲ್ಲಿ ವಿಟಮಿನ್ ಬಿ9 ಮತ್ತು ಫಾಲಿಕ್ ಆಸಿಡ್ ಗಳು ಹೆಚ್ಚಾಗಿದ್ದು ಗರ್ಭಿಣಿ ಮಹಿಳೆಯರಿಗೆ ಅಂತೂ ಇದು ತುಂಬಾ ಲಾಭದಾಯಕವಾಗಿದೆ. ನಮ್ಮ ದೇಹಕ್ಕೆ ಇಂತಹ ಹತ್ತು ಹಲವಾರು ಪ್ರಯೋಜನವಿರುವ ಜೋಳವನ್ನು ನಾವು ಯಾವ ರೀತಿಯಲ್ಲಿ ಆದರೂ ಸೇವನೆ ಮಾಡಬಹುದು. ಮಿತವಾದ ಸೇವನೆ ಹಿತವಾದ ಅರೋಗ್ಯ ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ. ನಿಮಗೆ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಉಪಯೋಗವಾಗಲಿ