ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲರ ಮುಂದೆ ತಾನು ಚೆನ್ನಾಗಿ ಕಾಣಬೇಕು ಎಂದು ಮನಸ್ಸಿನಲ್ಲಿ ಇರುತ್ತದೆ. ಆದರೆ ಚೆನ್ನಾಗಿ ಕಾಣಲು ಏನೇನು ಮಾಡಬೇಕು ಎನ್ನುವುದರ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ಕೆಲವೊಬ್ಬರಿಗೆ ಕೆಲವು ಹೇರ್ ಸ್ಟೈಲ್ ಗಳು ಹೊಂದಾಣಿಕೆ ಆಗುವುದಿಲ್ಲ. ಹಾಗೆಯೇ ಇನ್ನೂ ಕೆಲವರಿಗೆ ಹೊಂದಾಣಿಕೆ ಆಗುತ್ತವೆ. ಆದ್ದರಿಂದ ನಾವು ಇಲ್ಲಿ ಪಾರ್ಟಿಗೆ ಹೋಗುವಾಗ ಹೇಗೆ ಮೇಕಪ್ ಮಾಡಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದಿನನಿತ್ಯ ಮೇಕಪ್ ಕಿಟ್ ಬಳಸಿ ಮೇಕಪ್ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಿಂದ ಆರೋಗ್ಯಕರವಾದ ಚರ್ಮಕ್ಕೆ ಹಾನಿಯಾಗುತ್ತದೆ. ಅಂದರೆ ಮುಖದ ಮೇಲೆ ಮೊಡವೆಗಳು ಮತ್ತು ಕಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಈ ರೀತಿಯ ಮೇಕಪ್ ಗಳನ್ನು ಒಣತ್ವಚೆ ಇರುವವರು ಮಾಡಬಹುದು. ಹಾಗೆಯೇ ಮೃದುತ್ವಚೆ ಇರುವವರು ಕೂಡ ಮಾಡಬಹುದು. ಮೊದಲು ಮುಖವನ್ನು ಚೆನ್ನಾಗಿ ಯಾವುದಾದರೂ ಫೇಸ್ ವಾಶ್ ಬಳಸಿ ತೊಳೆದುಕೊಳ್ಳಬೇಕು.
ಮೊದಲು ಆಲ್ಟ್ರಾ ಫೇಸ್ ಪ್ರೈಮರ್ ನ್ನು ಬಳಸಬೇಕು. ಇದು ಮುಖದ ಮೇಕಪ್ ಗೆ ಒಂದು ಅಡಿಪಾಯ ಇದ್ದಂತೆ. ಹಾಗೆಯೇ ನಂತರದಲ್ಲಿ ಫೌಂಡೇಶನ್ ಕ್ರೀಮ್ ನ್ನು ಬಳಸಬೇಕು. ಸಮಯದ ಅಭಾವ ಇದ್ದಾಗ ಪ್ರೈಮ್ ಮತ್ತು ಫೌಂಡೇಶನ್ ಕ್ರೀಮ್ ನ್ನು ಮಿಕ್ಸ್ ಮಾಡಿ ಬಳಸಬೇಕು. ಕೈ ಹಿಂದುಗಡೆ ಎರಡನ್ನು ಮಿಕ್ಸ್ ಮಾಡಿ ಬೆರಳಲ್ಲಿ ಮುಖಕ್ಕೆ ಹಚ್ಚಬೇಕು. ಬ್ರಶ್ ಗಳಲ್ಲಿ ಯಾವುದಾದರೂ ಮುಖಕ್ಕೆ ಹೊಂದಾಣಿಕೆ ಆಗುವಂತದ್ದನ್ನು ಖರೀದಿ ಮಾಡಿಕೊಳ್ಳಬೇಕು.
ನಂತರ ಮುಖಕ್ಕೆ ಯಾವುದು ಹೊಂದಾಣಿಕೆ ಆಗುತ್ತದೆಯೋ ಅಂತಹ ಬಣ್ಣದ ಫೌಂಡೇಶನ್ ಪೌಡರ್ ನ್ನು ಹಚ್ಚಬೇಕು. ನಂತರದಲ್ಲಿ ಐ ಲೈಟರ್ ನ್ನು ಬಳಸಬೇಕು. ಹಾಗೆಯೇ ಐಬ್ರೋ ಶೇಪಿಂಗ್ ನ್ನು ಮಾಡಿಕೊಳ್ಳಬೇಕು. ನಂತರದಲ್ಲಿ ಕಾಜಲ್ ಹಚ್ಚಬೇಕು. ಹಾಗೆಯೇ ಲಿಫ್ ಸ್ಟಿಕ್ ಹಚ್ಚುವ ಮೊದಲು ಲಿಫ್ ಲೈನರ್ ಹಚ್ಚಬೇಕು. ನಂತರದಲ್ಲಿ ಲಿಫ್ ಸ್ಟಿಕ್ ಹಚ್ಚಬೇಕು. ಡ್ರೆಸ್ ಕಲರ್ ನೇಲ್ ಪಾಲಿಶ್ ಹಚ್ಚಿದರೆ ಒಳ್ಳೆಯದು. ಹೇರ್ ಸ್ಟೈಲ್ ಯಾವುದು ಇಷ್ಟ ಆಗುತ್ತದೆಯೋ ಅದನ್ನು ಮಾಡಬಹುದು.