ರೈತರು ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬೆಲೆ ಸರಿಯಾಗಿ ಸಿಗುವುದಿಲ್ಲ, ಕಡಿಮೆ ಬೆಲೆಗೆ ಕೇಳುತ್ತಾರೆ. ಇದರಿಂದ ರೈತರು ತಮ್ಮ ಜೀವನ ಸಾಗಿಸಲು ಸಾಲ ಮಾಡಬೇಕಾಗಿದೆ. ಇಂತದ್ದೆ ಸ್ಥಿತಿ ದಾವಣಗೆರೆಯ ರೈತರೊಬ್ಬರಿಗೆ ಆದಾಗ ಅವರು ತಾವು ಬೆಳೆದ ಬೆಳೆಯನ್ನು ಏನು ಮಾಡಿದರು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ದಾವಣಗೆರೆಯ ರಾಮಾಪುರ ಎಂಬ ಗ್ರಾಮದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬಸವರಾಜ ಎಂಬ ರೈತ ತನ್ನ ಎರಡುವರೆ ಎಕರೆ ಜಮೀನಿನಲ್ಲಿ ಬದನೆ ಬೆಳೆದಿದ್ದರು ಫಸಲು ಬಂದ ಕೂಡಲೆ ಕಟಾವು ಮಾಡಿ ಮಾರ್ಕೆಟ್ ಗೆ ಒಯ್ದರೆ ಕೆಜಿಗೆ 4 ರೂಪಾಯಿ ಕೇಳಿದರು. ಆಗ ಬಸವರಾಜ ಅವರು ಕನಿಷ್ಟ ಕೆಜಿಗೆ 10 ರೂಪಾಯಿ ಸಿಗದೆ ಇದ್ದರೆ ಬದನೆ ಬೆಳೆಯಲು ಬೇಕಾಗುವ ಕೂಲಿ ಬೆಲೆಯು ಆಗುವುದಿಲ್ಲ ಎಂದು ಮಾರಾಟ ಮಾಡದೆ, ತಾನು ಬೆಳೆದ ಬದನೆ ಬೆಳೆಯನ್ನು ಧರ್ಮಸ್ಥಳಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಬಸವರಾಜ ಅವರು ಮನೆಯವರೆಲ್ಲರನ್ನು ಕೇಳಿ ಲಾರಿಯಲ್ಲಿ ತಾವು ಬೆಳೆದ 4 ಟನ್ ಬದನೆಕಾಯಿಯೊಂದಿಗೆ ಸುತ್ತಮುತ್ತಲಿನ ರೈತರು ಸಹಕರಿಸಿ ಒಟ್ಟು 5ಟನ್ ಬದನೆಕಾಯಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದಾರೆ.
ಶ್ರೀ ಮಂಜುನಾಥ ಸ್ವಾಮಿಯ ಕ್ಷೇತ್ರದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರಿಗೆ ಅನ್ನ ದಾಸೋಹ ನಡೆಯುತ್ತದೆ. ಈ ಅನ್ನ ದಾಸೋಹಕ್ಕೆ ಬಸವರಾಜ ಅವರು ಕಳುಹಿಸಿದ ಬದನೆಕಾಯಿ ಸಹಾಯವಾಗುತ್ತದೆ. ಒಟ್ಟಿನಲ್ಲಿ ಬಸವರಾಜ ಅವರು ಬೆಳೆದ ಬದನೆಕಾಯಿಗೆ ಬೆಲೆ ಸಿಗದೆ ಮಂಜುನಾಥನ ಸನ್ನಿಧಿಯಲ್ಲಿ ಬೋಜನಕ್ಕೆ ಹೋಯಿತು. ಬಸವರಾಜ ಅವರಂತೆ ಅದೆಷ್ಟೊ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ದೊರಕಿರುವುದಿಲ್ಲ, ಇದರಿಂದ ರೈತರು ಹತಾಶರಾಗುತ್ತಾರೆ. ರೈತರ ಈ ಸಮಸ್ಯೆಗೆ ಪರಿಹಾರ ಸಿಗಲಿ, ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಬರಲಿ ಎಂದು ಆಶಿಸೋಣ.