ಜೊತೆ ಜೊತೆಯಲಿ ಧಾರಾವಾಹಿ ಮೇಘಾಶೆಟ್ಟಿಯ 3 ಕೋಟಿಯ ಮೆನೆ ಹೇಗಿದೆ ನೋಡಿ

0 2

ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟ ಅನಿರುದ್ಧ ಅವರು ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನು ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. 45 ವರ್ಷದ ವ್ಯಕ್ತಿ ಹಾಗೂ 20 ವರ್ಷದ ಹುಡುಗಿಯ ಪ್ರೇಮ ಕಥೆ ಈ ಧಾರಾವಾಹಿ. ಟಿಆರ್‌ಪಿ ವಿಚಾರದಲ್ಲಿ ಇದು ಈಗಾಗಲೇ ದಾಖಲೆ ಬರೆದಿದೆ. ಹಲವು ವಾರಗಳಿಂದ ಈ ಧಾರಾವಾಹಿ ಟಿಆರ್‌ಪಿಯಲ್ಲಿ 2ನೇ ಸ್ಥಾನದಲ್ಲಿದೆ. ದಿನದಿಂದ ದಿನಕ್ಕೆ ವಿಭಿನ್ನವಾದ ಟ್ವಿಸ್ಟ್, ಸಂದೇಶಗಳಿಂದ ಇದು ನೋಡುಗರ ಮೆಚ್ಚುಗೆಯನ್ನು ಗಳಿಸುತ್ತಿದೆ. ಅಷ್ಟೇ ಅಲ್ಲದೆ ಅನು ಪಾತ್ರ ತುಂಬ ಮುಗ್ಧೆ, ಪರೋಪಕಾರಿ, ಜಾಣ್ಮೆ ಇರುವ ಗುಣ ಹೊಂದಿರುವಂತಹದ್ದು. ಹೀಗಾಗಿ ಎಷ್ಟೋ ಪಾಲಕರು ಈ ಪಾತ್ರ ನೋಡಿದ ನಂತರ ನಮ್ಮ ಮಗಳಿಗೂ ಇದೇ ರೀತಿಯ ಗುಣ ಇದ್ದರೆ ಎಷ್ಟು ಚೆನ್ನ ಎಂದು ಅನಿಸಿದ್ದಂತೂ ಸುಳ್ಳಲ್ಲ. ನಟಿ ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿವೆ.

ಜೊತೆ ಜೊತೆಯಲಿ ಧಾರಾವಾಹಿಯ ಅನು ಪಾತ್ರಧಾರಿಯ ನಿಜವಾದ ಹೆಸರು ಮೇಘಾ ಶೆಟ್ಟಿ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಮೇಘಾ ಶೆಟ್ಟಿ ಮೂಲತಃ ಮಂಗಳೂರಿನವರು. ಮೇಘಾ ಶೆಟ್ಟಿ ಐಎಎಸ್ ಮಾಡುವ ಕನಸು ಹೊಂದಿದ್ದರು ಹಾಗೂ ಪ್ರಸ್ತುತ ಎಂಬಿಎ ಮುಗಿಸಿದ್ದಾರೆ. ಸೋಶಿಯಲ್ ಮೀಡಿಯಾದ ಮೂಲಕ ಮೇಘಾ ಅವರಿಗೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿದರೂ ಝೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ಒತ್ತಾಯದ ಮೇರೆಗೆ ನಟಿಸಲು ಒಪ್ಪಿದರು. ಈ ಮೂಲಕ ಜೊತೆ ಜೊತೆಯಲಿ ಧಾರಾವಾಹಿ ಮೇಘಾರ ಮೊದಲ ಪ್ರಾಜೆಕ್ಟ್ ಆಗಿದೆ. ಧಾರಾವಾಹಿಗೆ ಬರುವ ಮುಂಚೆ ಮೇಘಾಗೆ ನಟನೆ ಅನುಭವ ಇರಲಿಲ್ಲ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ ನಟಿ ಮೇಘಾ ಶೆಟ್ಟಿ. ಕಿರುತೆರೆಗೆ ಬಂದ ಮೇಲೆ ಸಿನಿಮಾದಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಮೇಘಾ ಈಗ ಕನ್ನಡದ ಮ್ಯೂಸಿಕ್​ ವಿಡಿಯೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್​ ಮಾಡುವ ಮೇಘಾ ತಮ್ಮ ಸಿಸ್ಲಿಂಗ್​ ಲುಕ್​ನ ಚಿತ್ರಗಳನ್ನು ಪೋಸ್ಟ್​ ಮಾಡಿದ್ದಾರೆ. ಮೇಘಾ ಶೆಟ್ಟಿ ಎನ್ನುವ ಹೆಸರು ಕೇಳಿದಾಕ್ಷಣ ಈಕೆ ಬಂಟರ ಹುಡುಗಿ ಇರಬೇಕು ಅನಿಸುತ್ತದೆ ಹಾಗೇ ಅದು ನಿಜವೂ ಹೌದು. ಮೇಘಾ ತಂದೆ ಮಂಗಳೂರಿನವರೇ ಆದರೆ ತಾಯಿ ಹುಬ್ಬಳ್ಳಿಯವರಾದ ಕಾರಣ ಮೇಘಾ ತುಳು ಭಾಷೆ ಕಲಿತಿಲ್ಲ. ಆದರೆ ರಕ್ಷಿತ್ ಶೆಟ್ಟಿಯ ಬಳಿಕ ಚಂದನವನದಲ್ಲಿ ಮೂಡಿರುವ ಶೆಟ್ಟರ ಹವಾ ಮುಂದುವರಿಸುವ ಎಲ್ಲ ಲಕ್ಷಣಗಳೂ ಈ ನಟಿಯಲ್ಲಿದೆ! ಅದಕ್ಕೆ ಒಂದೇ ಒಂದು ಸಾಕ್ಷಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿನ ಅನು ಸಿರಿಮನೆ ಪಾತ್ರ. ಈಗ ಮನೆಮನೆ ಮಾತಾಗಿರುವ ಮೇಘಾ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದಕ್ಕೆ ನಾಯಕಿ ಆಗುವ ಮೂಲಕ ಸೀರಿಯಲ್‌ನಿಂದ ಸಿನಿಮಾ ಮನೆಯನ್ನು ಪ್ರವೇಶಿಸುತ್ತಿದ್ದಾರೆ.

ಒಟ್ಟಿನಲ್ಲಿ ತಮ್ಮ ಮುಗ್ಧ ನಟನೆಗೆ ರಾಜ್ಯದ ಜನರ ಮನೆ ಮಾತಾಗಿರುವ ಮೇಘಾ ಶೆಟ್ಟಿ ಸದಾ ಯಾವುದಾದರೂ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ ಇರುತ್ತಾರೆ. ಈ ರೀತಿ ಇರುವ ಮೇಘಾ ಶೆಟ್ಟಿ ಅವರು ಇತ್ತೀಚೆಗೆ ಅಷ್ಟೇ ತಮ್ಮ ದುಡಿಮೆಯಲ್ಲಿ ಮನೇ ಕಟ್ಟಿಸಿ ಗೃಹ ಪ್ರವೇಶ ಮಾಡಿ ಇನ್ನೊಮ್ಮೆ ಸುದ್ದಿಯಲ್ಲಿ ಇದ್ದಾರೆ. ನಟಿ ಮೇಘ ಶೆಟ್ಟಿ ಅವರು ಕಟ್ಟಿಸಿದ ಮನೇ ಅತ್ಯಂತ ಸುಂದರವಾಗಿದ್ದು ಅದನ್ನು ಕಟ್ಟಲು ತಗುಲಿದ ವೆಚ್ಚ ಸುಮಾರು ಮೂರು ಕೋಟಿಗೂ ಅಧಿಕವಾಗಿದೆಯಂತೆ. ಇಲ್ಲಿ ಮೇಘಾ ಶೆಟ್ಟಿ ಅವರ ಹೊಸ ಮನೆಯ ಕೆಲವು ಫೋಟೋಗಳನ್ನು ನೋಡಬಹುದು.

Leave A Reply

Your email address will not be published.