ಎಲ್ಲರಿಗೂ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಎಲ್ಲರಿಗೂ ಬಹಳ ನೋವನ್ನು ತಂದಿದೆ. ಚಿರಂಜೀವಿ ಸರ್ಜಾ ಅವರು ಮತ್ತೆ ಮೇಘನಾ ರಾಜ್ ಅವರ ಮಗುವಾಗಿ ಬಂದಿದ್ದಾರೆ ಎಂದು ನಂಬಲಾಗಿದೆ. ಮೇಘನಾ ರಾಜ್ ಅವರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಮಗುವಿನ ವಿಡಿಯೊ, ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಚಿರು ಅವರ ಕೊನೆಯ ಚಿತ್ರವಾದ ರಾಜಮಾರ್ತಾಂಡ ಸಿನಿಮಾ ಟ್ರೇಲರ್ ಅನ್ನು ಅವರ ಮಗ ಲಾಂಚ್ ಮಾಡಿದ್ದಾರೆ ಇದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕನ್ನಡ ಚಿತ್ರರಂಗದ ಹಲವಾರು ಸ್ಟಾರ್ ನಟ, ನಟಿಯರಲ್ಲಿ ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಅವರ ಜೋಡಿಯು ಒಂದಾಗಿತ್ತು. ಇವರಿಬ್ಬರೂ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದರು. ಆಟಗಾರ ಸಿನಿಮಾದಲ್ಲಿ ಇವರಿಬ್ಬರೂ ನಟಿಸಿದ್ದಾರೆ. ಇವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು ಆದರೆ ವಿಧಿಯಾಟದಂತೆ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದಾಗ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದರು. ಆ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ಕುಟುಂಬ ಹಾಗೂ ಮೇಘನಾ ರಾಜ್ ಅವರ ಕುಟುಂಬ ನೋವಿನಲ್ಲಿ ಮುಳುಗಿತ್ತು. ನಂತರ ಮೇಘನಾ ರಾಜ್ ಅವರಿಗೆ ಗಂಡು ಮಗು ಜನಿಸಿದಾಗ ಚಿರಂಜೀವಿ ಸರ್ಜಾ ಅವರು ಮತ್ತೆ ಮಗುವಿನ ರೂಪದಲ್ಲಿ ಬಂದಿದ್ದಾರೆ ಎಂದು ಎರಡೂ ಕುಟುಂಬದವರು ಸಂತೋಷಪಟ್ಟರು. ಮಗು ಜನಿಸಿದ ಒಂದು ತಿಂಗಳಿಗೆ ಮೇಘನಾ ಅವರಿಗೆ, ಅವರ ಮಗುವಿಗೆ, ಅವರ ತಂದೆ ಸುಂದರ್ ರಾಜ್ ಅವರಿಗೆ, ತಾಯಿ ಪ್ರಮೀಳಾ ಜೋಷಾಯಿ ಅವರಿಗೆ ಚೀನಾದ ಕೊರೋನ ವೈರಸ್ ತಗುಲಿತ್ತು. ಈ ಸಮಯದಲ್ಲಿ ಮೇಘನಾ ಹಾಗೂ ಅವರ ಮಗು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಸುಂದರರಾಜ್ ಹಾಗೂ ಪ್ರಮೀಳಾ ಜೋಷಾಯಿ ಅವರು ವಯಸ್ಸಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು.
ಇತ್ತೀಚಿನ ಕೆಲವು ದಿನಗಳಿಂದ ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಕೊರೋನ ವೈರಸ್ ನಿಂದ ಗುಣಮುಖರಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಕ್ರಾಂತಿಯ ದಿನದಂದು ಜ್ಯೂನಿಯರ್ ಚಿರುವಿಗೆ ನಾಮಕರಣ ಮಾಡಲಾಯಿತು. ಇದೀಗ ಜ್ಯೂನಿಯರ್ ಚಿರು ಅವರ ಹೊಸ ವಿಡಿಯೋ ಮತ್ತು ಪೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಮೇಘನಾ ಅವರ ಮಗು ಜೊತೆಗೆ ಚಿರಂಜೀವಿ ಸರ್ಜಾ ಅವರು ಕುಳಿತಂತೆ ಇರುವ ಪೋಟೊ ನೋಡಿದರೆ ಚಿರು ಅವರೆ ಬಂದಿದ್ದಾರೆ ಎಂದು ಅನಿಸುತ್ತದೆ. ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ರಾಜಮಾರ್ತಾಂಡ. ಈ ಸಿನಿಮಾದಲ್ಲಿ ಅವರು ತಮ್ಮ ಪಾತ್ರವನ್ನು ಬಹಳ ಇಷ್ಟಪಟ್ಟು ನಟಿಸಿದ್ದಾರೆ. ರಾಜಮಾರ್ತಾಂಡ ಸಿನಿಮಾದ ಬಗ್ಗೆ ಚಿರು ಅವರು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಮತ್ತು ಅವರಿಗೆ ಬಹಳ ಇಷ್ಟವಾದ ಸಿನಿಮಾ ಆಗಿದೆ. ಚಿರಂಜೀವಿ ಸರ್ಜಾ ಅವರ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಅನ್ನು ಪೊಗರು ಸಿನಿಮಾದೊಂದಿಗೆ ಅವರ ಮಗ ಜ್ಯೂನಿಯರ್ ಚಿರು ಲಾಂಚ್ ಮಾಡಿದ್ದಾರೆ. ಜ್ಯೂನಿಯರ್ ಚಿರು ಅವರ ಬಾಲ್ಯ ಸಂತೋಷದಿಂದ ಕಳೆಯಲಿ ಹಾಗೂ ಮೇಘನಾ ಅವರಿಗೆ ಚಿರಂಜೀವಿ ಸರ್ಜಾ ಅವರು ಅಗಲಿದ ನೆನಪನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸೋಣ.