2021 ನೇ ಸಾಲಿನ ಭಾರತೀಯ ಸೇನೆಯಲ್ಲಿ ನೇಮಕಾತಿ ಆರಂಭ ಮಾಡಿದ್ದು ಮಾರ್ಚ್ ಹದಿನೆಂಟರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಮೂಲಕ ಅಧಿಸೂಚನೆಯಲ್ಲಿ ತಿಳಿಸಿದ್ದು ಏನೆಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಯ ಪುರುಷ ಅಭರ್ಥಿಗಳಿಗೆ ಸೇನಾ ನೇಮಕಾತಿ ನಡೆಸಲಿದೆ. ಅರ್ಹಅಭ್ಯರ್ಥಿಗಳು ತಮ್ಮ ದಾಖಲೆಗಳ ಸಮೇತ ಆನ್ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಬಹುದು. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಭಾರತೀಯ ಸೇನೆಯ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟ್ರೆಡ್ಸ್ಮನ್ ( ಹತ್ತನೇ ತರಗತಿ ಪಾಸ್ ಆಗಿರಬೇಕು). ಸೋಲ್ಜರ್ ಸ್ಟೋರ್ ಕೀಪರ್ ಮತ್ತು ಕ್ಲರ್ಕ್, ತಾಂತ್ರಿಕ ಸಹಾಯಕ ಹಾಗೂ ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೇನಾ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ ಹದಿನೇಳು ವರ್ಷ ಆರು ತಿಂಗಳು ಹಾಗೂ ಗರಿಷ್ಠ ಇಪ್ಪತ್ಮೂರು ವರ್ಷ ವಯಸ್ಸು ದಾಟಿರಬಾರದು.
ಇನ್ನು ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು www.joinindianarmy.nic.in ಈ ವೆಬ್ಸೈಟ್ ಗೆ ಭೇಟಿ ನೀಡಿ ಈ ಮೂಲಕ ಆನ್ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಆನ್ಲೈನ್ ನಲ್ಲಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳ ಇಮೇಲ್ ವಿಳಾಸಕ್ಕೆ ಪ್ರವೇಶ ಪತ್ರವನ್ನು ಕಳುಹಿಸಲಾಗುವುದು. ನಿಗದಿತ ದಿನಾಂಕಗಳಂದು ಹೆಸರು ನೋಂದಾಯಿಸಿಕೊಳ್ಳಬಹುದು.
ಭಾರತೀಯ ಸೇನೆಯ 2021 ನೇ ಸಾಲಿನ ನೇಮಕಾತಿಯ ಮಾಹಿತಿ ಈ ರೀತಿಯಾಗಿರುವುದು. ಭಾರತ ಸರ್ಕಾರದಿಂದ ಹೊರಡಿಸಲಾದ ನೇಮಕಾತಿ ಇದಾಗಿರುತ್ತದೆ. ಕೆಲಸ ಮಾಡಬೇಕಾದ ಇಲಾಖೆ ಭಾರತೀಯ ಸೇನೆ. ಹಲವಾರು ಹುದ್ದೆಗಳನ್ನು ಹೊಂದಿರುವ ಕೆಲಸ ಭಾರತದಲ್ಲಿರುವುದು. ಹುಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ ಇದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ವೆತನ ಎಷ್ಟು ಎಂದು ನೋಡುವುದಾದರೆ ಪ್ರತಿ ತಿಂಗಳು 18 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಯಾವುದೇ ರೀತಿ ಅರ್ಜಿ ಶುಲ್ಕವನ್ನು ಭರಿಸಲಾಗುವುದಿಲ್ಲ. ಅಭ್ಯರ್ಥಿಗಳಿಗೆ ಇರಬೇಕಾದ ವಿದ್ಯಾರ್ಹತೆ ನೋಡುವುದಾಗಿದೆ 8 ಹಾಗೂ 10ನೇ ತರಗತಿ ಪಾಸಾಗಿರಬೇಕು. ಕೆಲಸದಲ್ಲಿ ಯಾವುದೇ ರೀತಿ ಅನುಭವ ಅಗತ್ಯತೆ ಇರುವುದಿಲ್ಲ.
ಇದಕ್ಕೆ ಸಂಬಂಧಿಸಿದ ಪ್ರಮುಖ ದಿನಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ ಮಾರ್ಚ್ 13 2021. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 26, 2021. ಹಾಗೆಯೇ ರ್ಯಾಲೀ ನಡೆಯುವ ದಿನಾಂಕ ಮೇ ಏಳರಿಂದ ರಿಂದ ಆರಂಭವಾಗಿ 2021 ಮೇ 12ಕ್ಕೇ ಕೊನೆಗೊಳ್ಳುತ್ತದೆ. ರ್ಯಾಲಿ ನಡೆಯುವ ಸ್ಥಳ ವಿಶ್ವೇಶ್ವರಯ್ಯ ಸ್ಟೇಡಿಯಂ ಕೋಲಾರ, ಕರ್ನಾಟಕ.